ಮನೆ ರಾಜ್ಯ ಮಾರ್ಚ್​ ಅಂತ್ಯದವರೆಗೆ 2ನೇ ಬೆಳೆಗೆ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

ಮಾರ್ಚ್​ ಅಂತ್ಯದವರೆಗೆ 2ನೇ ಬೆಳೆಗೆ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

0

ಬೆಂಗಳೂರು: ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್​ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್​ ತಂಗಡಗಿ ತಿಳಿಸಿದ್ದಾರೆ.

Join Our Whatsapp Group

ವಿಕಾಸಸೌಧದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್​ 15ರವರೆಗೆ 1,500, ಡಿ.16ರಿಂದ 31ರವರೆಗೆ 2,000 ಕ್ಯೂಸೆಕ್​ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3,800 ಕ್ಯೂಸೆಕ್​​​ನಂತೆ, ಫೆ.1ರಿಂದ 28ರವರಗೆ 3,800 ಕ್ಯೂಸೆಕ್​ ಹಾಗೂ ಮಾರ್ಚ್​ 1ರಿಂದ 31ರವರೆಗೆ 3,800 ಕ್ಯೂಸೆಕ್​​​ನಂತೆ ಮತ್ತು ಕುಡಿಯುವ ನೀರಿಗಾಗಿ ಏ.1ರಿಂದ ಹತ್ತರವರೆಗೆ 1,650 ಕ್ಯೂಸೆಕ್​​ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್​ 11ರಿಂದ ಮೇ 10ರವರೆಗೆ 150 ಕ್ಯೂಸೆಕ್​​​ನಂತೆ ವಿತರಣಾ ಕಾಲುವೆ ಒಂದರಿಂದ 11ರವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದರು.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 10ರವರೆಗೆ ನೀರು ನಿಲುಗಡೆ, 11ರಿಂದ 31ರವರೆಗೆ 800 ಕ್ಯೂಸೆಕ್​ನಂತೆ, ಜ.1ರಿಂದ ಹತ್ತರವರೆಗೆ ನೀರು ನಿಲುಗಡೆ ಮತ್ತು 11ರಿಂದ 31ರವರೆಗೆ 800 ಕ್ಯೂಸೆಕ್​ನಂತೆ ನೀರನ್ನು ಹರಿಸಲಾಗುತ್ತದೆ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್​​ 1ರಿಂದ 15ರವರೆಗೆ 400 ಕ್ಯೂಸೆಕ್​​ನಂತೆ, 16ರಿಂದ 31ರವರೆಗೆ 600 ಕ್ಯೂಸೆಕ್​ನಂತೆ, ಜ.1ರಿಂದ ಫೆ.28ರವರೆಗೆ 650 ಕ್ಯೂಸೆಕ್‌ನಂತೆ ಹಾಗೂ ಮಾರ್ಚ್ ಒಂದರಿಂದ 31ರವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗುವುದು ಎಂದು ತಿಳಿಸಿದರು.

ಉಳಿದಂತೆ, ರಾಯಬಸವಣ್ಣ ಕಾಲುವೆಗೆ ಡಿಸೆಂಬರ್​ 10ರಿಂದ ಜನವರಿ 10ರವರೆಗೆ ನೀರು ನಿಲುಗಡೆ ಮತ್ತು ಜನವರಿ 11ರಿಂದ ಮೇ 31ರವರೆಗೆ 250ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ನೀರು ಹರಿಸಲಾಗುತ್ತದೆ. ಇದರಲ್ಲಿ ಕಾಲುವೆಯ ಲಭ್ಯತೆಯು ಇರುವ ತನಕ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಸಚಿವರು ವಿವರಿಸಿದರು.

19ನೇ ಕ್ರೆಸ್ಟ್​​​ ಗೇಟ್​​ ಮುರಿದು ಹೋಗಿ ಬಳಿಕ ಎರಡನೇ ಬಾರಿ ಅಣೆಕಟ್ಟು ಭರ್ತಿಯಾಗಿರುವುದು ಇತಿಹಾಸ. ಈ ಹಿಂದೆ ಸಿದ್ದರಾಮಯ್ಯನವರು ಅಣೆಕಟ್ಟೆಗೆ ಭೇಟಿ ನೀಡಿದ ವೇಳೆ ಡ್ಯಾಮ್ ಮತ್ತೆ ತುಂಬಲಿದ್ದು ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮಳೆರಾಯನ ಕೃಪೆಯಿಂದ ಇಂದು ಎರಡನೇ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದರು.