ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ

0

 Benzo( a) Pyrene ಉಂಟು ಮಾಡುವ ಪ್ರತಿಕೂಲ ಪರಿಣಾಮಗಳನ್ನು ತಡೆಯುವ ಗುಣ :

Join Our Whatsapp Group

      ಈ ರಾಸಾಯನಿಕವನ್ನು ಟ್ಯೂಮರ್ ಗೆಡ್ಡೆಯ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಇದರ ಉಪಯೋಗದಿಂದ ಚರ್ಮದಲ್ಲಿ ತುರಿಕೆ,ನರುಣ್ಣೆ, ಆಸ್ತಮಾ ಮತ್ತು ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

       ಬೆಟ್ಟದ ನೆಲ್ಲಿಕಾಯಿಯ ಸ ತ್ವವನ್ನು 28 ದಿನಗಳ ಕಾಲ ಸೇವಿಸಲು ಕೊಟ್ಟು ಸಿದ್ಧಗೊಳಿಸಿದ ಸ್ವಿಸ್ ಬಿಳಿ ಇಲಿಗಳಿಗೆ ಹಾನಿಕಾರಕ ರಾಸಾಯನಿಕವನ್ನು ನೀಡಿ ಪರೀಕ್ಷಿಸಿದಾಗ, ಬೆಟ್ಟದ ನೆಲ್ಲಿಕಾಯಿಯ ಸೇವಿಸುವುದರ ಪರಿಣಾಮದಿಂದ ರಾಸಾಯನಿಕದಿಂದ ದೇಹದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗದೆ ಇರುವುದು ಕಂಡುಬಂದಿದೆ.

 ಮಲಕೈಡ್ ಹಸಿರು ಎಂಬ ವರ್ಣದ್ರವ್ಯ ಉಂಟು ಮಾಡುವ ಪ್ರತಿಕೂಲ ಪರಿಣಾಮದಿಂದ ದೇಹವನ್ನು ಕಾಪಾಡುವ ಗುಣ :

       ಇದೊಂದು ವರ್ಣ ದ್ರವ್ಯ ರೇಷ್ಮೆ ವಸ್ತ್ರಗಳಿಗೆ ಬಣ್ಣ ಕೊಡಲು ಉಪಯೋಗಿಸಲಾಗುತ್ತದೆ. ಇದರ ಪರಿಣಾಮ ಪ್ರಮಾಣ ದೇಹದಲ್ಲಿ ಸಂಗ್ರಹವಾದರೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಇಂತಹ ಹಾನಿಕಾರ ವರ್ಣದ್ರವ್ಯ ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆಯೆಂದು ಮೀನಿನ ಕಣ್ಣಿನ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.

 ಸೀಸ ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಗುಣ :

         ಔದ್ಯೋಗಿಕರಣ ಮತ್ತು ಮಿತಿ ಮೀರಿದೆ ಕಾರ್ಖಾನೆಗಳ ತ್ಯಾಜ್ಯದಿಂದಾಗಿ ವಾತಾವರಣದಲ್ಲಿ ಸೀಸ ಸೇರ್ಪಡೆಯಾಗುತ್ತದೆ. ಈ  ಸೀಸ ಮಣ್ಣಿನಲ್ಲಿ ಬೆರೆತು ಸಸ್ಯಗಳ ಒಳ ಹೊಕ್ಕು ಅಂತಿಮವಾಗಿ  ಮನುಷ್ಯರ ದೇಹವನ್ನು ಸೇರಿ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಸೀಸದ ನಂಜನ್ನು ತೆಡೆಯುವ ಗುಣವಿದೆಯೆಂದು ಇಲಿಗಳ ಮೇಲೆ ಕೈಗೊಂಡ ಪ್ರಯೋಗದಿಂದ ತಿಳಿದುಬಂದಿದೆ. ನೆಲ್ಲಿಕಾಯಿ ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಆಸ್ಕಾರ್ಬಕ್ ಆಮ್ಲ  ಕಾರಣವೆನ್ನಲಾಗಿದೆ.

 ಸೈಕ್ಲೊ ಪಾಸ್ಛಮೈಡ್  ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಗುಣ :

        ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಿರುವ ಪ್ರಮುಖ ಔಷಧಿಗಳಲ್ಲಿ ಒಂದು. ಈ ಔಷಧಿ ಕ್ಯಾನ್ಸರ್ ವಾಸಿ ಮಾಡುವುದರ ಜೊತೆಗೆ, ದೇಹದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ.ಬೆಟ್ಟದ ನೆಲ್ಲಿಕಾಯಿಯ  ಸತ್ವ ಸೇವಿಸಿದ ಇಲಿಗಳಿಗೆ ಸೈ ಕ್ಲೊಪಾಸ್ಛಮೈಡ್ ಔಷಧಿಯನ್ನು ಕೊಟ್ಟು ಪರೀಕ್ಷಿಸಿದ್ದಾಗ ನೆಲ್ಲಿಕಾಯಿಯ ಸತ್ವ ಸೇವಿಸಿದುದರ ಪರಿಣಾಮವಾಗಿ ಔಷಧಿಯಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗದೆ. ಇರುವುದು ಕಂಡುಬಂದಿದೆ.ಕ್ಯಾನ್ಸರ್ ಚಿಕಿತ್ಸೆ  ನೀಡುವಾಗ ಸೈಕ್ಲೊಪಾಸ್ಛಮೈಡ್ ಔಷದಿಯ ಜೊತೆಗೆ ಬೆಟ್ಟದ ನೆಲ್ಲಿಕಾಯಿ ಸತ್ವವನ್ನು ಪೂರಕ ಔಷಧಿಯನ್ನಾಗಿ  ಕೊಡುವುದು ಉಪಯುಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಹೈಡ್ರೊಜನ್ ಪರ್ ಆಕ್ಸೈಡ್ ಉಂಟು ಮಾಡುವ ಹಾನಿಯಿಂದ ಎಂಡೊಥೀಲಿಯಂ ಪದರವನ್ನು ಕಾಪಾಡುವ :

        ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಯಿಂದಾಗಿ ಹೈಡ್ರೋಜನ್ ಪರ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ.ಈ ರಾಸಾಯನಿಕವನ್ನು ದೇಹ ಜೀವಕೋಶದ ರಕ್ಷಣೆಗೆ ಉತ್ಪಾದಿಸುತ್ತದೆ ಈ ರಾಸಾಯನಿಕ ವಿಭಜನಗೊಂಡರೆ ಕ್ರಿಯಾತ್ಮಕ ಕಣಗಳಾಗಿ ಪರಿವರ್ತನೆಯಾಗಿ ಜೀವಕೋಶಗಳಿಗೆ ಮಾರಕವಾಗಿ ಕೆಲಸ ಮಾಡುತ್ತದೆ. ಪ್ರಯೋಗ ಶಾಲೆಯಲ್ಲಿರುವ ಹೈಡ್ರೋಜನ್ ಪರ್ ಆಕ್ಸೈಡನ್ನು ಗಾಯ ತೊಳೆಯಲು ಉಪಯೋಗಿಸುತ್ತಾರೆ. ಇದಕ್ಕೆ ಸೂಕ್ಷ್ಮಾಣು ಜೀವಿ ನಾಶಕ ಗುಣವೂ ಇದೆ.

 ಹೈಡ್ರೋಜನ್ ಪರ್ ಆಕ್ಸೈಡ್ ಉಂಟು ಮಾಡುವ ಹಾನಿಯಿಂದ ಎಂಡೊಥೀಲಿಯಂ ಪದರವನ್ನು ಕಾಪಾಡುವ ಗುಣ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ತನ್ಮೂಲಕ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ  ಹೃದಯದ ಕಾಯಿಲೆಗಳಿಂದ ದೇಹವನ್ನು ಕಾಪಾಡುವ ಗುಣವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಹಾವಿನ ವಿಷದ ಪ್ರಭಾವವನ್ನು ತಟಸ್ಥ ಗೊಳಿಸುವ ಗುಣ :

      ಮಿಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ಬೇರಿನಿಂದ ತಯಾರಿಸಿದ ಸತ್ವಕ್ಕೆ ನಾಗರ ಮತ್ತು ವೈಪರ್ ಹಾವಿನ ವಿಷದ ಪ್ರಭಾವವನ್ನು ತಟಸ್ಥಗೊಳಿಸಿ ದೇಹವನ್ನು ಕಾಪಾಡುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ಮತ್ತು ಗಂಡು ಬಿಳಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ ಆದರೆ, ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಉನ್ನತ ಮಟ್ಟದ ಸಂಶೋಧನೆಯ ಅವಶ್ಯಕತೆಯಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಹೃದಯ ಕಾಪಾಡುವ ಗುಣ :

    ಬೆಟ್ಟದ ನೆಲ್ಲಿಕಾಯಿಯನ್ನು ಅರೆದು ಕಣಕ ತಯಾರಿಸಿ ವಿವಿಧ ಪ್ರಮಾಣದ ಕಣಕವನ್ನು ಪ್ರತಿ ಗುಂಪಿನ ಇಲಿಗಳಿಗೆ 30 ದಿನಗಳವರೆಗೆ ಸೇವಿಸಲು ಕೊಟ್ಟು, ಅವಧಿಯ ನಂತರ ಪರೀಕ್ಷಿಸಿದಾಗ ಬೆಟ್ಟದ ನೆಲ್ಲಿಕಾಯಿಯ ಕಣಕಕ್ಕೆ ಹೃದಯವನ್ನು ಕಾಪಾಡುವ ಗುಣವಿದೆಯೆಂದು ವರದಿಯಾಗಿದೆ ಐಸೊಪ್ರೊಟಿರಿನಾಲ್ ಮತ್ತು ಆಹಾರದಲ್ಲಿನ ಅಧಿಕ ಕೊಬ್ಬಿನಾಂಶ ಉಂಟು ಮಾಡುವ ಹಾನಿಯಿಂದ ಹೃದಯವನ್ನು ಕಾಪಾಡುವ ಗುಣ, ಎಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ. ಬೆಟ್ಟದ ನೆಲ್ಲಿಕಾಯಿಯ ಸೇವನೆಯಿಂದ ಹೃದಯಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನೆಲ್ಲಿಕಾಯಿಯ ಈ ಗುಣಕ್ಕೆ ಅದಕ್ಕೆ ಆೄಂಟಿಆಕ್ಸಿಡೆಂಟ್ ಗುಣವು ಕಾರಣವೆನ್ನಲಾಗಿದೆ.

 ಹೃದಯ ಸಂಬಂಧದ ಕಾಯಿಲೆಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಗೆ ಇದೆ. ಆದರೂ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆನ್ನಲಾಗಿದೆ

ಇ ಕ್ರಿಮಿಕೀಟಗಳ ಮೇಲೆ ನಡೆಸಿದ ಪ್ರಯೋಗಗಳ ಫಲ :

 ಹೆಕ್ಸೇನ್,ಕ್ಲೊರೋಫಾರ,ಈಥೈಲ್ ಅಸಿಟೇಟ್, ಅಸಿಟೋನ್ ಮತ್ತು ಮಿಥಾನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಮಲೇರಿಯ ರೋಗಕಾರಕ ಸೊಳ್ಳೆ ಮರಿಗಳನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ಕಂಡುಬಂದಿದೆ.

 ಮಲೇರಿಯಾ ರೋಗಕಾರಕ ಫ್ಲಾಸ್ಮೊಡಿಯಂ ಫಾಲ್ಸಿಪ್ಯಾರಂ ಎಂಬ ಪ್ರೊಟೋಜವ ಗುಂಪಿಗೆ ಸೇರಿದ ಕ್ರಿಮಿಯನ್ನು ನಾಶಪಡಿಸುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಸತ್ವದ ಈ ಗುಣಕ್ಕೆ ಯಾವ ರಾಸಾಯನಿಕ ಘಟಕ ಕಾರಣ ಎಂಬುದು ಕಂಡು ಹಿಡಿಯಬೇಕಾಗಿದೆ.

 ಈ ಸೂಕ್ಷ್ಮಾಣು ಜೀವಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲ :

 ಬ್ಯಾಕ್ಟೀರಿಯ ನಾಶಕ ಗುಣ :

       ಮೆಥನಾಲ್  ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ತೊಗಟೆಯಿಂದ ತಯಾರಿಸಿದ ಸತ್ವಕ್ಕೆ ಬ್ಯಾಕ್ಟೀರಿಯಾ ನಾಶಕ ಗುಣ ನಾಶಕ ಗುಣವಿದೆಯೆಂದು ವರದಿಯಾಗಿದೆ.