ಮನೆ ಸ್ಥಳೀಯ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಸೆಟ್ಟೇರಿದ ರಾಮ್ ​ಚರಣ್​ ನಟನೆಯ ‘ಆರ್ ​ಸಿ 16’

ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಸೆಟ್ಟೇರಿದ ರಾಮ್ ​ಚರಣ್​ ನಟನೆಯ ‘ಆರ್ ​ಸಿ 16’

0

‘ಆರ್​ಆರ್​ಆರ್​’ ಮೂಲಕ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿರುವ ಮೆಗಾಸ್ಟಾರ್​ ಚಿರಂಜೀವಿ ಪುತ್ರ ರಾಮ್​​ ಚರಣ್​​ ತಮ್ಮ ಮತ್ತೊಂದು ಪವರ್​ಫುಲ್​​ ಆ್ಯಕ್ಟಿಂಗ್​ ಮೂಲಕ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.

Join Our Whatsapp Group

ಅವರ ಮುಂದಿನ ಬಹುನಿರೀಕ್ಷಿತ ಚಿತ್ರವನ್ನು ತಾತ್ಕಾಲಿಕವಾಗಿ ‘RC 16’ ಎಂದು ಹೆಸರಿಸಲಾಗಿದ್ದು, ಈಗಾಗಲೇ ಸಖತ್​ ಸದ್ದು ಮಾಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಪ್ರಾಜೆಕ್ಟ್​ ನಲ್ಲಿ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಧಿಕೃತವಾಗಿಂದು ಶೂಟಿಂಗ್ ಶುರುವಾಗಿದೆ.

‘ಉಪ್ಪೇನ’ದಂತಹ ಸಿನಿಮಾಗಳಿಂದ ಹೆಸರುವಾಸಿಯಾಗಿರುವ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಜೊತೆಗೆ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದೆದುರು ‘ಆರ್‌ಸಿ 16’ ಸ್ಕ್ರಿಪ್ಟ್ ಹಿಡಿದು ನಿಂತಿರುವ ತಮ್ಮ ಫೋಟೋ ಶೇರ್ ಮಾಡಿದ್ದಾರೆ.

ತಮ್ಮ ಈ ಪೋಸ್ಟ್‌ನಲ್ಲಿ, ಶ್ರೀ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಸಿನಿಮಾ ಪ್ರಾರಂಭಿಸಿರುವುದಾಗಿ ತಿಳಿಸಿದ್ದು, ಮುಂದಿನ ಪ್ರಯಾಣಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. “ಇದು ಬಹಳ ದೊಡ್ಡ ದಿನ. ಚಾಮುಂಡೇಶ್ವರಿ ಮಾತೆಯ ಆಶೀರ್ವಾದದೊಂದಿಗೆ ಬಹು ನಿರೀಕ್ಷಿತ ಕ್ಷಣ ಪ್ರಾರಂಭವಾಯಿತು. ಮೈಸೂರಿನ ಆಶೀರ್ವಾದದ ಅಗತ್ಯವಿದೆ” ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ನಿರ್ದೇಶಕರ ಪೋಸ್ಟ್​ ದೊಡ್ಡ ಮಟ್ಟದ ಉತ್ಸಾಹವನ್ನು ವ್ಯಕ್ತಪಡಿಸಿದೆ. ನಾಯಕ ನಟಿ ಜಾಹ್ನವಿ ಕಪೂರ್​ ಪ್ರೀತಿ ಮತ್ತು ಉತ್ಸಾಹದ ಎಮೋಜಿಗಳೊಂದಿಗೆ ಶುಭ ಹಾರೈಸಿದ್ದಾರೆ.

ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಅಪ್​ಡೇಟ್​​ನಲ್ಲಿ, ಜನಪ್ರಿಯ ನಟ ಜಗಪತಿ ಬಾಬು ‘ಆರ್‌ಸಿ 16’ ತಂಡ ಸೇರಿಕೊಂಡಿದ್ದಾರೆ. ಚಿತ್ರತಂಡ ಸ್ಪೆಷಲ್​ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅವರನ್ನು ಸ್ವಾಗತಿದೆ. ನಟನ ಪವರ್​ಫುಲ್​ ಲುಕ್​ ಅನ್ನು ಹಂಚಿಕೊಂಡು,”ಆರ್​​ಸಿ16 ತಂಡ ಎಲ್ಲರನ್ನೂ ಮೆಚ್ಚಿಸುವ ಕಮಾಂಡಿಂಗ್ ಪಾತ್ರಕ್ಕಾಗಿ ಪ್ರತಿಭಾವಂತ ಜಗಪತಿ ಬಾಬು ಅವರನ್ನು ಸ್ವಾಗತಿಸುತ್ತಿದೆ” ಎಮದು ಬರೆದುಕೊಂಡಿದ್ದಾರೆ. ಜಗಪತಿ ಬಾಬು ಅವರ ಎಂಟ್ರಿ ಪ್ರಾಜೆಕ್ಟ್ ಮೇಲಿನ ಸಿನಿಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿದೆ.