ಮನೆ ರಾಜಕೀಯ ಚನ್ನಪಟ್ಟಣ ಫಲಿತಾಂಶ: ಸಿ ಪಿ ಯೋಗೇಶ್ವರ್ ಗೆಲುವು, ನಿಖಿಲ್​ ಕುಮಾರಸ್ವಾಮಿಗೆ ಸೋಲು

ಚನ್ನಪಟ್ಟಣ ಫಲಿತಾಂಶ: ಸಿ ಪಿ ಯೋಗೇಶ್ವರ್ ಗೆಲುವು, ನಿಖಿಲ್​ ಕುಮಾರಸ್ವಾಮಿಗೆ ಸೋಲು

0

ಚನ್ನಪಟ್ಟಣ: ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ​ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ ​ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ.

Join Our Whatsapp Group

ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್​​ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ. ಅತ್ತ ನಿಖಿಲ್ ​ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ.

ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದ ಅವರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ.

ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್​ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್​ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.