ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು ಇದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ. ನವೆಂಬರ್ 23 ರಂದು ಸಂಡೂರು, ಚನ್ನಪಟ್ಟಣ, ಶಿಗ್ಗಾಂವ್ ಉಪ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಸೋಲು ಕಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸೋಲಿನಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಕಿಲ್ಲ, ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತ ಎಂದು ಭಾವಿಸೋಣ ಎಂದು ಬರೆದಿದ್ದಾರೆ. ಆಡಳಿತ ಸಮಯದಲ್ಲಿ ದುರ್ಮಾರ್ಗ ಬಳಸಿ ಗೆಲ್ಲುವುದು ಕಾಂಗ್ರೆಸ್ಗೆ ಹೊಸತಲ್ಲ, ಸೋಲನ್ನು ನಾವ್ಯಾರು ಕೂಡ ಹಿನ್ನಡೆ ಎಂದು ಪರಿಗಣಿಸುವ ಅಗತ್ಯವಿಲ್ಲ.
ಬಿಜೆಪಿ ಅಧಿಕಾರದ ಎನ್ನುಹತ್ತಿ ರಾಜಕಾರಣ ಮಾಡಲು ಜನ್ಮ ತಾಳಿದ್ದಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆ ಫಲಿತಾಂಶ ತಮ್ಮ ಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ ಎಂದು ಬರೆದಿದ್ದಾರೆ.
ಬಿಜೆಪಿಯಲ್ಲಿ ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶ ಇದ್ದೇ ಇದೆ, ಪ್ರತಿ ಕಾರ್ಯಕರ್ತ, ಮುಖಂಡರು, ಹಿರಿಯರೊಂದಿಗೆ ವಿಶ್ವಾಸ ಹಾಗೂ ಪ್ರೀತಿಯನ್ನು ಗಳಿಸಿಕೊಂಡು ಪಕ್ಷ ಗಟ್ಟಿಗೊಳಿಸಬೇಕೆಂಬ ಹಂಬಲ ನನ್ನದು ಎಂದರು. ಉಪಚುನಾವಣೆ ಫಲಿತಾಂಶ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವುದಿಲ್ಲ, ಪತ್ರದಲ್ಲಿ ಯತ್ನಾಳ್ ನೇತೃತ್ವದ ಬಣದ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದಾರೆ.
ಪ್ರತ್ಯೇಕವಾಗಿ ವಕ್ಫ್ ಹೋರಾಟ ನಡೆಸುತ್ತಿರುವ ಯತ್ನಾಳ್ ನೇತೃತ್ವದ ಬಣದ ಬಗ್ಗೆ ಮಾತನಾಡಿದ್ದು, ಶಿಸ್ತುಕ್ರಮ ಕೈಗೊಳ್ಳುವುದಾಗಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.