ತೀರ್ಥಹಳ್ಳಿ: ತುಂಗಾ ಕಮಾನು ಸೇತುವೆಯ ಕೆಳ ಭಾಗದಲ್ಲಿ ಕಮಾನಿಗೆ ಅಳವಡಿಸಲಾಗಿರುವ ಕಂಬದ ಕೆಳಗೆ ನ.26ರ ಮಂಗಳವಾರ ಬೆಳಗ್ಗೆ ಅಸ್ತಿ ಪಂಜರವೊಂದು ಪತ್ತೆಯಾಗಿತ್ತು.
ಸ್ಥಳೀಯ ಮೀನುಗಾರರು ಮೀನು ಹಿಡಿಯುವಾಗ ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಸ್ತಿ ಪಂಜರವನ್ನು ಆಸ್ಪತ್ರೆಗೆ ರವಾನಿಸಿ ಪರೀಕ್ಷೆ ನಡೆಸಿದಾಗ ತಲೆ ಬುರುಡೆ, ಕೈ, ಕಾಲು ಎಲ್ಲವೂ ಬೇರೆ ಬೇರೆ ವ್ಯಕ್ತಿಯದ್ದು ಎಂದು ತಿಳಿದು ಬಂದಿದೆ.
ಮೆಡಿಕಲ್ ವಿದ್ಯಾರ್ಥಿ ಮೆಡಿಕಲ್ ಟೆಸ್ಟ್ ಮಾಡಿ ನಂತರ ಇಲ್ಲಿ ತಂದು ಬಿಸಾಕಿರುವ ಸಾಧ್ಯತೆ ಇರಬಹುದು ಎಂದು ಹೇಳಲಾಗುತ್ತಿದೆ. ಅಸ್ತಿ ಪಂಜರದ ಎಲ್ಲಾ ಭಾಗಗಳು ಬೇರೆ ಬೇರೆಯಾಗಿರುವ ಕಾರಣ ತೇಲಿ ಬಂದಿದ್ದು ಅಥವಾ ಕಾಣೆಯಾದ ವ್ಯಕ್ತಿಯದ್ದಲ್ಲ, ಇದು ಮೆಡಿಕಲ್ ಪರೀಕ್ಷೆಗೆ ಒಳಪಟ್ಟ ಅಸ್ತಿ ಪಂಜರವಿರಬಹುದು ಎಂದು ತೀರ್ಥಹಳ್ಳಿ ಪೊಲೀಸ್ ಮೂಲಗಳಿಂದ ಹೇಳಲಾಗಿದೆ.