ಹೊಟ್ಟೆಯೊಳಗೆ ಳಗಿನ ಜ್ವಾಲಾಮುಖಿ ಸಣ್ಣ ಗಾಯಕ್ಕೆ ರುಚಿಕರವಾದ ಆಹಾರ ಮತ್ತು ಮಾನಸಿಕ ಒತ್ತಡ ಹಾಗೂ ಆತಂಕ ಸೇರಿದರೆ ಹೊಟ್ಟೆಯ ಮತ್ತು ಸಣ್ಣ ಕರುಳಿನ ಆದಿಭಾಗದಲ್ಲಿ ಅಲ್ಸರ್ ಹೆಚ್ಚಾಗುತ್ತದೆ. ಅಲ್ಸರ್ ಗೆ ಮೂಲ ಕಾರಣ ಜೀರ್ಣಶಕ್ತಿಗೆ ನೆರವಾಗುವ ಕಿನ್ವದ ಅಂಕ ಉತ್ಪಾದನೆ ಎಂದು ಕಂಡುಬಂದಿದೆ. ಉದರ ದ್ರವದಲ್ಲಿ ಹೈಡ್ರೋಕ್ಲೋರಿನ್ ಆಮ್ಲ ಹೊಟ್ಟೆಯಲ್ಲಿ ಮತ್ತು ಸಣ್ಣಕರುಳಿನ ಮೊದಲ ಭಾಗದಲ್ಲಿ ಬರ್ತಿಯಾಗಿ ಅವುಗಳ ಗೋಡೆಗಳ ಮೇಲೆ ಉರಿಯೂತದ ಗಾಯಗಳನ್ನುಂಟು ಮಾಡುತ್ತದೆ ಇಂತಹ ಗಾಯಗಳನ್ನುಂಟಾಗದಂತೆ ತಡೆಯುವುದು ಬಹುಮುಖ್ಯ ಜೊತೆಗೆ ಒಂದು ಬಾರಿ ಗಾಯಗಳಾದರೆ ಅದು ವಾಸಿಯಾಗಲು ಸಾಕಷ್ಟು ಸಮಯ ಬೇಕು.
ಅಲ್ಸರ್ ನಲ್ಲಿ ಪ್ರಮುಖವಾಗಿ ಎರಡು ಮುಖ್ಯ ವಿಧಾನಗಳಿರುತ್ತದೆ. ಅದು ಹೊಟ್ಟೆ ಮತ್ತು ಸಣ್ಣ ಕರುಳಿನ ಗೋಡೆಯ ಮೇಲೆ ಪರಿಣಾಮ ಬೀರುತ್ತದೆ.ಇದರಿಂದ ಸಣ್ಣ ಕರುಳಿನ ಮೊದಲಭಾಗಕ್ಕೆ ದುಷ್ಪರಿಣಾಮ ಬೀರುತ್ತದೆ. ಗ್ಯಾಸ್ಟಿಕ್ ಅಲ್ಸರ್ ಬಹುಪಾಲು 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಕಾಣಿಸುತ್ತದೆ. ಆರಂಭದಲ್ಲಿ ಊಟದ ನಂತರ ಸಣ್ಣದಾಗಿ ಹೊಟ್ಟೆ ನೋವು ಕಾಣಿಸಿಕೊಂಡು ಸ್ವಲ್ಪ ಸಮಯದನಂತರ ಕಡಿಮೆಯಾಗುತ್ತದೆ. ಆದರೆ ಕಾಲಕ್ರಮಣ ಹೆಚ್ಚು ಕಾಡುತ್ತದೆ. ಇಂತಹ ರೋಗಿ ಆಹಾರ ಸೇವಿಸಲು ಭಯಪಡುತ್ತಾರೆ. ಇದರಿಂದ ಆಹಾರ ಸೇವನೆ ತಪ್ಪಿಸಿಕೊಳ್ಳುವುದು ಅಥವಾ ಆಹಾರದಿಂದ ದೂರ ನಿಲ್ಲುವುದರಿಂದ ಅನಾರೋಗ್ಯ ಉಲ್ಬಗೊಳ್ಳುತ್ತದೆ. ಅಲ್ಲದೆ ರಕ್ತವಾಂತಿ ಸಹ ಸಂಭವವಾಗಿ ಗ್ಯಾಸ್ಟಿಕ್ ಗೆ ತೊಂದರೆಯಾಗಿ ಆನ್ಸರ್ ನ ಲಕ್ಷಣವಾಗಿರಬಹುದು.
ಸಣ್ಣಕರುಳಿನ ಅಲ್ಸರ್ ಸಾಮಾನ್ಯವಾಗಿ ಯುವಜನರಲ್ಲಿ ಕಾಣಿಸಿಕೊಳ್ಳುತ್ತದೆ.ಹೊಟ್ಟೆ ನೋವಿನ ಜೊತೆ ಈ ರೋಗದ ಲಕ್ಷಣವಾಗಿ ಹೊಟ್ಟೆಯಲ್ಲಿ ಉರಿ ಜೊತೆಗೆ ಬೆನ್ನುನೋವು ಕೂಡ ಲಕ್ಷಣವಾಗಿ ಕಾಣಿಸಿಕೊಳ್ಳಬಹುದು ಹಸಿವಾದಗ ನೋವು ಪ್ರಾರಂಭವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಉರಿಯುವ ಅನುಭವವುಂಟಾಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳ ಪೈಕಿ ಇದು ಒಂದಾಗಿದೆ.ಇಂತಹ ರೋಗಿಗಳು ಬಿಚ್ಚು ಹಸಿವಿನಿಂದ ಹೆಚ್ಚು ಆಹಾರ ಸೇವಿಸಬೇಕಾಗುತ್ತದೆ. ಉರಿಯುಂಟಾಗುವ ಮತ್ತು ಹೊಟ್ಟೆಯಲ್ಲಿ ಅಸ್ವಸ್ಥತೆಗಳ ಲಕ್ಷಣಗಳು ಈ ಕಾಯಿಲೆಯ ಆರಂಭಿಕ ಹಂತದಲ್ಲಿ ಆಹಾರ ಅಥವಾ ನೀರು ಸೇವಿಸಿದನಂಯರ ಮರೆಯಾಗಬಹುದು ಆದರೆ ದೀರ್ಘಕಾಲದ ಹಂತದಲ್ಲಿ ಬಹಳ ಕಾಲವಿರುತ್ತದೆ.
ನಾವು ನುಂಗಿದ ಆಹಾರವು ನಾಲ್ಕರಿಂದ ಐದು ಗಂಟೆಗಳ ಕಾಲ ಜಠರದಲ್ಲಿದ್ದು ಪಚನ ಕ್ರಿಯೆಯಲ್ಲಿರುತ್ತದೆ, ಈ ಜಠರದಲ್ಲಿ ಅನೇಕ ಅನಿಲಯುಕ್ತ ಆಮ್ಲ ದ್ರವ್ಯಗಳು ಉತ್ಪತ್ತಿಯಾಗುತ್ತದೆ.ಅದರಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಮುಖ್ಯ ಈ ಜಠರದ ಮತ್ತು ಸಣ್ಣ ಕರುಳಿನ ಒಳಭಾಗದಲ್ಲಿ ತೆಳುವಾದ ಚರ್ಮದ ಪೊರೆಯು ನಾವು ತಿನ್ನುವ ಆಹಾರದಲ್ಲಿ ಘನ ಆಹಾರಗಳಿಂದ ಜಠರ ಮತ್ತು ಸಣ್ಣಕರುಳಿನ ಅದಿಭಾಗದ ಗೋಡೆಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುತ್ತದೆ. ಆದ್ದರಿಂದ ಈ ಪರೆಯು ದ್ರವಿಸುವ ಆಮ್ಲಗಳಿಂದಲೂ ಸಹ ಜಠರಕ್ಕೆ ರಕ್ಷಣೆ ನೀಡುತ್ತದೆ. ಆದರೆ ಆಮ್ಲದ ತೀವ್ರತೆ ಹೆಚ್ಚಾದರೂ ಈ ಪೊರೆಯು, ಬಲಿಷ್ಠ ವಾಗಿದ್ದರೆ ತೊಂದರೆಯಿಲ್ಲ ಒಂದು ವೇಳೆ ಪೊರೆ ಬಲಹೀನವಾದರೆ ಮಾತ್ರ ಜಠರದ ಮತ್ತು ಕರುಳಿನ ಗೋಡೆಗಳಿಗೆ ಧಕ್ಕೆಯಾಗಿ ವರ್ಣ ಮತ್ತು ಹುಣ್ಣುಗಳು ಕಾಣಿಸಿಕೊಂಡು ಬಾದೆ ಪಡಬೇಕಾಗುತ್ತದೆ ಕೆಲವರಿಗೆ ಪೊರೆಯೂ ಬಲಹೀನವಾದರೆ ಅಲ್ಪ ಕಾರ,ಮಸಾಲೆಯುಕ್ತ ಆಹಾರ ಸೇವಿಸಿದರು ಸಹ ಅಲ್ಸರ್ ಅಲ್ಸರ್ ಕಾಣಿಸಿಕೊಳ್ಳುತ್ತದೆ ಪೊರೆ ಬಲಯುತವಾಗಿದ್ದರೆ ಅಧಿಕವಾಗಿ ಸೇವಿಸಿದರೂ ತೊಂದರೆಯಾಗುವುದು.
ಶೇಕಡಾ 80ರಷ್ಟು ಮಂದಿ ರೋಗಿಗಳಿಗೆ ಹೆಲಿಕಾನ್ ಬ್ಯಾಕ್ವರ್ ಪಲೊರಿ ಬ್ಯಾಕ್ಟೀರಿಯ ಈ ವ್ಯಾಧಿಗೆ ಕಾರಣವಾಗುವುದಿದ್ದು ಈ ಬ್ಯಾಕ್ಟೀರಿಯವು ನಂಜಿನಿಂದ ಕೂಡಿದ ಆಹಾರ ಮತ್ತು ನೀರಿನ ಮೂಲಕವಾಗಿ ಹೊಟ್ಟೆ ಹೊಟ್ಟೆಯಲ್ಲಿ ಆಮ್ಲ ಅವರಿತ ವಾತಾವರಣದಿಂದ ಪಾರಾಗಲು ಈ ಬ್ಯಾಕ್ಟೀರಿಯಾ ಆಲ್ಕಾಲಿಯಾದ ಹೆಚ್ಚಿನ ಅಮೋನಿಯ ಅದರ ಸುತ್ತಾಐ ಒಂದು ಸಂರಕ್ಷಣೆ ಗೋಡೆಯನ್ನು ಕೋಶ ರೂಪದಲ್ಲಿ ರೂಪಿಸಿಕೊಳ್ಳುತ್ತದೆ.ಇದು ಕರುಳಿನ ಗೋಡೆಗಳಲ್ಲಿನ ಕೋಶಗಳು ಹೆಚ್ಚುದ್ದಂತೆ ಹೊಟ್ಟೆಯಲ್ಲಿ ಆಮ್ಲತೆ ಹೆಚ್ಚಾಗುತ್ತದೆ ಅಲ್ಲದೆ ತೊಳೆಯದೆ ಇರುವ ಪಾತ್ರೆಗಳಲ್ಲಿ ಆಹಾರ ತಯಾರಿಸಿದರೆ, ಅನಾರೋಗ್ಯ ಪರಿಸರದಲ್ಲಿ ತಯಾರಿಸಿದ ಆಹಾರದಿಂದ ಆಮ್ಲತೆ ಹೆಚ್ಚಾಗಿ ಹೊಟ್ಟೆಗೆ ಈ ಬ್ಯಾಕ್ಟೀರಿಯ ಪ್ರವೇಶಿಸಲು ಸುಲಭವಾಗುತ್ತದೆ ಹೆಚ್ಚು ಪ್ರಮಾಣದಲ್ಲಿ ನೋವು ನಿವಾರಕ ಔಷಧೀಯದಿಂದಲೂ ಸಹ ಪೆಸ್ಟಿಕ್ ಆಲ್ಸರ್ ಉಂಟು ಮಾಡುತ್ತದೆ. ನೋವು ನಿವಾರಕಗಳ ಹೆಚ್ಚಿನ ಬಳಕೆ ಕಾರಣ ಸಣ್ಣಕರುಳಿನ ಗೋಡೆಯ ಒಳಭಾಗದಲ್ಲಿ ದೇಹವು ತನ್ನ ಪೂರ್ಣ ಚಟುವಟಿಕೆಯನ್ನು ನಿಲ್ಲಿಸುತ್ತದೆ.
ಪೌಷ್ಟಿಕ ಅಲ್ಸರ್ ಒಳಗಾದ ಪ್ರತಿಶತ 10 ರಿಂದ 15 ರೋಗಿಗಳಿಗೆ ಸಣ್ಣ ಕರುಳಿನ ಗೋಡೆಯಲ್ಲಿ ರಂದ್ರಗಳಾಗಿ ಅದರ ಒಳಪಾರ್ಶ್ವಗಳು ಮುಚ್ಚಿ ಹೋಗುತ್ತದೆ.ಇದರಿಂದ ಸಣ್ಣ ಕರುಳಿನ ಆಹಾರ ಸೆಳೆಯಲು ಸೂಕ್ಷ್ಮ ಪದರದ ಮಾರ್ಗ ಮುಚ್ಚಿ ಹೋಗುತ್ತದೆ.ಆಗ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ, ಈ ವ್ಯಾದಿ ದೀರ್ಘ ವಾದಂತೆ ಮಲದಲ್ಲಿ ರಕ್ತ ಸೋರುವಿಕೆ, ರಕ್ತ ವಾಂತಿ ಸಂಭವವಿರುತ್ತದೆ. ಇದು ದೀರ್ಘ ಕಾಲವಾದರೆ ಕಣ್ಣ ಕರುಳಿನ ಆಹಾರ ಪದರದ ಕಣಗಳು ಮುಚ್ಚಿ ಹೋಗುತ್ತದೆ. ಮೊದಲು ಅಲ್ಸರ್ ವ್ಯಾಧಿಗ್ರಸ್ತರು ಧೂಮಪಾನ ಮತ್ತು ಮಧ್ಯಪಾನ ನಿಲ್ಲಿಸಬೇಕು. ಮಸಾಲೆಯುಕ್ತ ಆಹಾರ ಸೇವಿಸಬಾರದು. ಖಾರ, ಹುಳಿ,ಔಷಧಿಗಳಾದ ಕೆಫೆನ್ ಕೊರ್ಟಿಸ್ಟಿರಾಯಿಡ್, ಆಮ್ಲ ಉತ್ಪಾದಿಸುವ ಆಹಾರ ಸೇವಿಸಿದರೆ ಇನ್ನು ಹೆಚ್ಚು ಆಮ್ಲ ಉತ್ಪತ್ತಿಸುತ್ತದೆ ಆದರೆ ಸಕಾಲದಲ್ಲಿ ಆಹಾರ ಸೇವನೆಯಿಂದ ಸ್ವಲ್ಪ ಉಪಸಮನವಾಗುತ್ತದೆ. ಈ ಗ್ಯಾಸ್ಟಿಕ್ ಮತ್ತು ಸಣ್ಣ ಕರುಳಿನ ಅಲ್ಸರ್ ಕೆಲವರಲ್ಲಿ ಕ್ಯಾನ್ಸರ್ ಆಗುವ ಸಂಭವವಿರುತ್ತದೆ.