ಚಿಂತಾಮಣಿ (ಚಿಕ್ಕಬಳ್ಳಾಪುರ): ಕೆ.ಎಸ್.ಆರ್.ಟಿ.ಸಿ. ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಮೃತಪಟ್ಟ ಘಟನೆ ಶಿಡ್ಲಘಟ್ಟ ತಾಲೂಕಿನಲ್ಲಿ ನ.27ರ ಬುಧವಾರ ನಡೆದಿದೆ.
ಬೊಮ್ಮಸಂದ್ರ ನಿವಾಸಿ ವೆಂಕಟೇಶ್ ಹಾಗೂ ಸರಸ್ವತಮ್ಮ ಮೃತ ದಂಪತಿಗಳು.
ಚಿಂತಾಮಣಿ ತಾಲೂಕಿನ ನಾರಾಯಣಳ್ಳಿ ಗ್ರಾಮಕ್ಕೆ ತೆರಳುವಾಗ ನಗರದ ಆದರ್ಶ ಟಾಕೀಸ್ ಬಳಿ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ವೆಂಕಟೇಶ್ ಅವರ ತಲೆ ದೇಹದಿಂದ ಸಂಪೂರ್ಣ ಬೇರ್ಪಟ್ಟಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಚಿಂತಾಮಣಿ ನಗರ ಶಾಣೆ ಪೊಲೀಸರು ಭೇಟಿ ನೀಡಿದ್ದಾರೆ.














