ಮನೆ ರಾಜ್ಯ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಸಂಪುಟ ಶಿಫಾರಸು

ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಸಂಪುಟ ಶಿಫಾರಸು

0

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು 2020ರಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಕೈಗೊಂಡಿತು.

Join Our Whatsapp Group

ಯಡಿಯೂರಪ್ಪ ಅವರು ಬಿಡಿಎ ಅಪಾರ್ಟ್‌ಮೆಂಟ್ ನಿರ್ಮಾಣ ಟೆಂಡರ್‌ವೊಂದರಲ್ಲಿ ರಾಮಲಿಂಗಂ ಕನ್ಸಸ್ಟ್ರಕ್ಷನ್ ಕಂಪೆನಿಯಿಂದ 12 ಕೋಟಿ ರೂ. ಲಂಚ ಪಡೆದಿದ್ದರು ಎಂದು ಆರೋಪಿಸಿ ಟಿ.ಜೆ.ಅಬ್ರಾಹಂ ದೂರು ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಬೇಕು ಎಂದು ನ್ಯಾಯಾಲಯ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ರಾಜ್ಯಪಾಲ ಥಾವರ್‌ಚಂದ್​ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದರು.

ಇದೀಗ ಕಾಂಗ್ರೆಸ್​ ಸರ್ಕಾರ ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿರುವ ನಿರ್ಣಯ ಹಿಂಪಡೆಯಬೇಕು. ಜೊತೆಗೆ, ಭ್ರಷ್ಟಾಚಾರ ಪ್ರತಿಬಂಧಿತ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. ಈ ಮೂಲಕ ಪ್ರಕರಣದಲ್ಲಿ 2ನೇ ಆರೋಪಿಯಾದ ವಿಜಯೇಂದ್ರಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.

2017ರಲ್ಲಿ ಬಿಡಿಎ, ಬಿದರಹಳ್ಳಿಯ ಕೋನದಾಸಪುರದಲ್ಲಿ 1 ಮತ್ತು 3 ಬಿಎಚ್‌ಕೆ ಫ್ಲ್ಯಾಟ್ ನಿರ್ಮಾಣಕ್ಕೆ 567 ಕೋಟಿ ರೂ ಅಂದಾಜು ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿತ್ತು. ಈ ವೇಳೆ ರಾಮಲಿಂಗಂ ಕನ್ಸಸ್ಟ್ರಕ್ಷನ್ ಕಂಪೆನಿ 666.22 ಕೋಟಿ ರೂ (ಅಂದಾಜು ವೆಚ್ಚಕ್ಕಿಂತ 99.22 ಕೋಟಿ ರೂ. ಹೆಚ್ಚು) ಹಾಗೂ ನಾಗಾರ್ಜುನ ಕನ್ಸಸ್ಟ್ರಕ್ಷನ್ ಕಂಪೆನಿ 691.74 ಕೋಟಿ ರೂ. (ಅಂದಾಜು ವೆಚ್ಚಕ್ಕಿಂತ 124.74 ಕೋಟಿ ರು. ಹೆಚ್ಚು) ಬಿಡ್ ಮಾಡಿತ್ತು.

ಯಡಿಯೂರಪ್ಪ 2019ರ ಜು.6ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ, ಡಾ.ಜಿ.ಸಿ.ಪ್ರಕಾಶ್ ಬಿಡಿಎ ಆಯುಕ್ತರಾಗಿ ನೇಮಕಗೊಂಡರು. ಯಡಿಯೂರಪ್ಪನವರ ಹೆಸರು ಹೇಳಿ ಆಯುಕ್ತ ರಾಮಲಿಂಗಂ ಬಿಲ್ಡರ್ ಬಳಿ 12 ಕೋಟಿ ರೂ. ಲಂಚ ಪಡೆದಿದ್ದರು. ಕೆ.ರವಿ ಎಂಬಾತ 12 ಕೋಟಿ ಹಣವನ್ನು ಪ್ರಕಾಶ್​ ಅವರಿಂದ ಪಡೆದು ವಿಜಯೇಂದ್ರಗೆ ಮುಟ್ಟಿಸಿದ್ದರು. ವಿಜಯೇಂದ್ರ ಲಂಚದ ಬಗ್ಗೆ ಮಾತನಾಡಿರುವ ಆಡಿಯೋ ಕೂಡ ಲಭ್ಯವಾಗಿತ್ತು ಎಂದು ಟಿ.ಜೆ.ಅಬ್ರಾಹಂ ಆರೋಪಿಸಿದ್ದರು.