ಮನೆ ರಾಜಕೀಯ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದು ಒಳಿತು: ರಮೇಶ್ ಜಾರಕಿಹೊಳಿ

ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದು ಒಳಿತು: ರಮೇಶ್ ಜಾರಕಿಹೊಳಿ

0

ಬೆಳಗಾವಿ: ಬಿಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರ.ಆದರೆ ಪಾಪ ವಿಜಯೇಂದ್ರ ಇನ್ನೂ ಸಣ್ಣ ಹುಡುಗ ಆತನಿಗೆ ರಾಜಕಾರಣ ಗೊತ್ತಿಲ್ಲ ಹೀಗಾಗಿ ರಾಜಾಧ್ಯಕ್ಷ ಸ್ಥಾನ ತ್ಯಾಗ ಮಾಡುವುದು ಒಳ್ಳೆಯದು ಎಂದು ಶಾಸಕ ರಮೇಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ.

Join Our Whatsapp Group

ಬೆಳಗಾವಿಯಲ್ಲಿ ಮಾತನಾಡಿದ ಅವರು ವಿಜಯೇಂದ್ರನಿಗೆ ಇನ್ನು ಸಣ್ಣ ಪ್ರಾಯ ಆತನಿಗೆ ರಾಜಕಾರಣ ಗೊತ್ತಿಲ್ಲ ಆದರೆ ಅವರ ತಂದೆ ಬಿ.ಎಸ್. ಯಡಿಯೂರಪ್ಪನವರು ಹುಟ್ಟು ಹೋರಾಟಗಾರ ಅವರಿಗೆ ರಾಜಕಾರಣ ಏನಂದ್ರೆ ಗೊತ್ತಿದೆ ಅಲ್ಲದೆ ವಿಜಯೇಂದ್ರನಿಗೆ ಇನ್ನೂ ಉತ್ತಮ ಭವಿಷ್ಯವಿದೆ ಹಾಗಾಗಿ ಆತ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಉತ್ತಮ ಎಂದು ಹೇಳಿದ್ದಾರೆ.

ಇನ್ನು ಯತ್ನಾಳಗೆ ಶೋಕಾಸ್ ನೋಟೀಸ್ ವಿಚಾರವಾಗಿ ಮಾತನಾಡಿದ ಅವರು ಶೋಕಾಸ್ ನೋಟಿಸ್ ಇವತ್ತು ಬಂದಿದಲ್ಲ. ಅಲ್ಲದೆ ಅವರು ಪಕ್ಷದ ವರಿಷ್ಠರಿಗೆ ಸೂಕ್ತ ಸ್ಪಷ್ಟನೆ ನೀಡುತ್ತಾರೆ. ನಾವು ಯತ್ನಾಳ ಪರವಾಗಿ ನಿಲ್ಲುತ್ತೇವೆ. ಪಕ್ಷದ ವರಿಷ್ಠರಿಗೆ ಮಾಹಿತಿ ನೀಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.