ಮನೆ ರಾಜ್ಯ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

0

ಮೈಸೂರು(Mysuru): ಕರ್ನಾಟಕ ಸೇನಾ ಪಡೆ ವತಿಯಿಂದ ಯದುವಂಶದ ಕುಲತಿಲಕ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 138 ನೇ ಜಯಂತಿಯನ್ನು ಇಂದು ಮೈಸೂರಿನ ಅರಮನೆ ದಕ್ಷಿಣ ದ್ವಾರದ ಮುಂಭಾಗದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ, ನಾಲ್ವಡಿ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ನಾಲ್ವಡಿ ಯವರು ಅಧಿಕಾರ ವಹಿಸಿಕೊಂಡು ಬಹಳ ಜನಪರ  ಕೆಲಸಗಳನ್ನು ಮಾಡಿ ಮನೆ ಮನೆ ಮಾತಾದರು. ಆ ಕಡೆ ಕೃಷ್ಣದೇವರಾಯರು ಆಡಳಿತ ನೀಡಿ ದಂತೆ ಈ ಭಾಗದಲ್ಲಿ ನಾಲ್ವಡಿ ಯವರು ಮಹಾತ್ಮ ಗಾಂಧೀಜಿ ಯವರು ಕನಸು ಕಂಡಿದ್ದ ರಾಮರಾಜ್ಯ ವನ್ನು ಆಗಲೇ ಮೈಸೂರಿನ ಜನತೆಗೆ ನೀಡಿದ್ದರು ಎಂದು ಹೇಳಿದರು.

ನಾಲ್ವಡಿ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಹಿಂದುಳಿದ ವರ್ಗಗಳಿಗೆ, ದಲಿತರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣದಲ್ಲಿ ಆದ್ಯತೆ ನೀಡಲು ಪ್ರಪ್ರಥಮವಾಗಿ ಆರಂಭಿಸಿದರು ಎಂದು ಮಾಹಿತಿ ನೀಡಿದರು.

ನಂತರ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ ಜಿ ಗಂಗಾಧರ್ ಮಾತನಾಡಿ, ನಾಲ್ವಡಿ ಅವರು ಆಧುನಿಕ ಮೈಸೂರಿನ ಮಹಾಶಿಲ್ಪಿ, ಹಿಂದುಳಿದವರಿಗೆ, ಮಹಿಳೆಯರಿಗೆ ಹಾಗೂ ದಲಿತರಿಗೆ ಶಿಕ್ಷಣವನ್ನು ನೀಡಲು ಆರಂಭಿಸಿದ ಪ್ರಥಮ ದೊರೆ, ಮೈಸೂರು ಕೈಗಾರಿಕೆಗಳ ಜನಕ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ ರಾಜ ಋಷಿ ಎಂಬ ಬಿರುದನ್ನು ಪಡೆದವರು.

ಅರಮನೆಗೆ ಬರುವ ಪ್ರವಾಸಿಗರಿಗೆ ಮೈಸೂರು ಪಾಕನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್ ಜೆ ಕೆ ಎಕರ್ಸ್ ಅಧ್ಯಕ್ಷ ಎಂ ಎನ್ ದೊರೆಸ್ವಾಮಿ, ಸಮಾಜ ಸೇವಕರಾದ ಲಯನ್ ಟಿ. ಗೋಲ್ಡ್ ಸುರೇಶ್, ಡಾ. ಶಾಂತರಾಜೇಅರಸ್, ನರಸಿಂಹೇಗೌಡ, ಅಂಬಾ ಅರಸ್, ಪ್ರಜೀಶ್ ಪಿ, ಕೃಷ್ಣಯ್ಯ ಸಿ, ಪ್ರಭು ಶಂಕರ್, ವಿಜಯೇಂದ್ರ, ಅಂಬಾ ಅರಸ್, ಪದ್ಮಾ, ಜ್ಯೋತಿ, ಎಳನೀರು ರಾಮಣ್ಣ, ಇಂದಿರಾ, ದರ್ಶನ್ ಗೌಡ, ಬಂಗಾರಪ್ಪ, ಪ್ರಭಾಕರ, ರವಿ ನಾಯಕ್, ವಿಜಯದೇವರಾಜೇ ಅರಸ್ ಉಪಸ್ಥಿತರಿದ್ದರು.