ಮನೆ ಸ್ಥಳೀಯ ವರುಣ ಕ್ಷೇತ್ರದ ವಸತಿ ರಹಿತರಿಂದ ಅರ್ಜಿ ಆಹ್ವಾನ

ವರುಣ ಕ್ಷೇತ್ರದ ವಸತಿ ರಹಿತರಿಂದ ಅರ್ಜಿ ಆಹ್ವಾನ

0

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಹೌಸಿಂಗ್ ಫಾರ್ ಆಲ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ Affordable Housing (Urban) ಮತ್ತು ಕೆ.ಆರ್.ಆಶ್ರಯ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿ ನಿಯಮಾನುಸಾರ ಹಂಚಿಕೆ ಮಾಡಲು ವರುಣ ಕ್ಷೇತ್ರದ ವಸತಿ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಅರ್ಜಿಯನ್ನು ಡಿಸೆಂಬರ್ 02 ರಿಂದ ವಿತರಿಸಲಾಗುತ್ತಿದ್ದು, ಜನವರಿ 2 ರವರೆಗೆ ಅರ್ಜಿಗಳನ್ನು ವಿದ್ಯಾಭಾರತಿ ಕಲ್ಯಾಣಮಂಟಪದ ಎದುರು ಉತ್ತರಾದಿಮಠ ರಸ್ತೆಯಲ್ಲಿರುವ ಕೆ.ಆರ್.ಆಶ್ರಯ ಶಾಖೆಯಲ್ಲಿ ಪಡೆದು, ಜನವರಿ 3 ರಿಂದ ಏಪ್ರಿಲ್ 2 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಕಾಶವನ್ನು ವರುಣ ವಿಧಾನಸಭಾ ಕ್ಷೇತ್ರದ ವಸತಿ ರಹಿತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.