7. ಕಲಿಂಗಕಾಃ ಪಟೋಲಾಸ್ಕ ಪತ್ರಂ ಕಟುಕ ರೋಹಿಣೀ | ಪಟೋಲಃ ಸಾರೀವಾ ಮುಸ್ತಾಂ ಪಾಠ ಕಟುಕ ರೋಹಿಣಿ ।
ನಿಂಮ್ಭಃ ಪಟೋಲ ಸ್ತ್ರಿಫಲಾ ಮೃದ್ವಿಕಾ ಮುಸ್ತ ವತ್ಸಕೌ ।।
ಕಿರಾತತಿಕ ಮುಮ್ಮುತ್ತಾ ಚಂದನಂ ಎಶ್ವಭೇಷಜಂ ।
ಗುಡೂಚ್ಯಾಮಲಕಂ ಮುಸ್ತಮ್ ಧ್ರಿಷ್ಟೇಕ ಸಮಾಪನ ||
ಕಷಾಯಃ ಶಮಯತ್ಯಾಶು ಪಂಚ ಪಂಚ ವಿಧಾನ್ ಜ್ವರಾನ್ |
ಸಂತತ ಸತತ್ಥಾ ನೇ ುತೃತಿಯಕ ಚತುರ್ಥಕಾನ್ ॥ 203 ||
1.ಇಂದ್ರಯವ (ಕೊಡಸಿಗೆ) ಪಟೋಲ ಎಲೆಗಳು, ಕಟುಕ ರೋಹಿಣಿ,
2 ಪಟೋಲ, ಸಾರೀವ, ಮುಸ್ತ, ಪಾಥ, ಕಟುಕ ರೋಹಿಣಿ,
3.ಬೇವು, ಪಟೋಲ, ತ್ರಿಫಲ, ಮೃದ್ಧಿಕ, ಮುಸ್ತ, ಕುಟಜ,
4. ಕಿರಾತತಿಕ್ತ, ಅಮೃತಬಳ್ಳಿ, ಚಂದನ, ಶುಂಠಿ,
5. ಅಮೃತ ಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಮುಸ್ತ
ಮೇಲೆ ತಿಳಿಸಿರುವ 5 ಗುಂಪುಗಳ ಔಷಧಿಗಳ ಪ್ರತ್ಯೇಕವಾಗಿ ತಯಾರಿಸಿದ ಅರ್ಧಮಾಂಶ ಕಷಾಯ ಸೇವನೆಯಿಂದ ಐದು ಬಗೆಯ ಜ್ವರ ಗುಣವಾಗುತ್ತದೆ .
8. ವತ್ಸಕಾರಶ್ವಧೇ ಪಾಠಾಂ ಪಡ್ಡಂಥಾ ಕಟುಕ ರೋಹಿಣೀಂ । ಮೂರ್ವೋ ಸಾತಿ ವಿಷಾಂ ನಿಂಬಂ ಪಠೋಲಂ ದನ್ವಯಾಸಕಮ್ ||
ವಚಾಂ ಮುಸ್ತಮುಶೀರಂ ಚ ಮಧುಕಂ ತ್ರಿಫಲಾಂ ಬಲಾಮ್ ।
ಪಾಕ್ಕಂ ಶೀತ ಕಷಾಯಂ ವಾ ಪೀಚೇ ಜ್ವರಹರ ನರಃ ||
ಮಧೂಕ ಮುಸ್ತ ಮೃದ್ವಿಕಾ ಕಾಶ್ಚರ್ಯಾಣಿ ಪರೂಷಕಮ್ | ತ್ರಾಯಮಣಾ ಮಶೀರಂ ಚ ತ್ರಿಫಲಾಂ ಕಟುಕರೋಹಿಣಿಮ್ ||
ಪೀತ್ವಾ ನಿಶಿ ಸ್ಥಿತಂ ಜಂತುಜ್ಜರಾ ಚ್ಛಿಘ್ರಂ ವಿಮುಚ್ಯತೆ ।।
ಕುಟಜ, ಆರಗದ, ಪಾಥ, ಷಡ್ಡಂಥಾ (ಹೊಂಗೆ), ಕಟುಕ ರೋಹಿಣಿ, ಮೂರ್ವ, =ವಿಷ, ಬೇವು, ಪಟೋಲ, ದನ್ ವ್ಯಾಸ, ಬಜೆ, ಮುಸ್ತ, ಉಶಿರ, ಮಧುಕ, ತ್ರಿಫಲ ತ್ತು ಬಲಾ – ಇವುಗಳನ್ನು ಸೇರಿಸಿ ತಯಾರಿಸಿದ ಕಷಾಯ ಅಥವಾ ಶೀತ ಕಷಾಯ (Cold usion) ಸೇವನೆಯಿಂದ ಜ್ವರ ವಾಸಿಯಾಗುತ್ತದೆ. ಮಧುಕ, ಮುಸ್ತ, ದ್ರಾಕ್ಷಿ, ಕಾಶ್ಮೀರಿ, ಪರುಷಕ (ಸ್ವಲ್ಪ ತ್ರಿಫಲ), ತ್ರಯಂಮಣ, ಉಶಿರ, ತ್ರಿಫಲ ಮತ್ತು ಕಟುಕ ರೋಹಿಣಿ – ಇವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯುವುದರಿಂದ ಮವಾಗಿ ಜ್ವರ ವಾಸಿಯಾಗುತ್ತದೆ.
9.ಜಾತ್ಯಾ ಮಲಕ ಮುಸ್ತಾನಿ ತಡ್ಡದೃಸ್ತೆಯ ವಾಸಿಕಮ್ ||
ವಿಭದ್ದೆ ದೋಷೋ ಜ್ವರಿತಹಃ ಕಷಾಯಂ ಸಗುಡಂ ಪಿಬೇತ್ ।
ತ್ರಿಫಲಾಂ ತ್ರಾಯ ಮಾಣಂ ಚ ಮೃದ್ವಿಕಾಂ ಕಟುಕ ರೋಹಿಣೀ ||
ಪಿತ್ತ ಶ್ಲೇಷ್ಮಹರ ಸ್ತ್ವೈಷ ಕಷಾಯೋ ಹಾನು ಲೋಮಿಕಃ |
ತ್ರಿವೃತ ಶರ್ಕರಾಯುಕ್ತ ಪಿತ್ಥ ಶ್ರೇಷ್ಠ ಜ್ವರಾಪಿರ್ಹ ||
ಜತಿ, ಎಲೆ, ಬೆಟ್ಟದ ನೆಲ್ಲಿಕಾಯಿ, ಮುಸ್ತ, ದನ್ ವ್ಯಾಸ ಇವುಗಳ ಕಷಾಯವನ್ನುಬೆಲ್ಲದೊಡನೆ ಸೇವಿಸುವುದರಿಂದ ಜ್ವರ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ.
ತ್ರಿಫಲ, ತ್ರಯುಂಮಣ, ದ್ರಾಕ್ಷಿ ಮತ್ತು ಕಟುಕ ರೋಷಿಣಿ ಇವುಗಳ ಕಷಾಯ ಸೇವನೆಯಿಂದ ಮಲಬದ್ಧತೆ, ಪಿತ್ತ ಮತ್ತು ಕಫ ನಿವಾರಣೆಯಾಗುತ್ತದ
ತ್ರವೃತ್ ಕಷಾಯಕ್ಕೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಪಿತ್ತ, ಕಫ, ಮತ್ತು ಜ್ವರ ನಿವಾರಣೆಯಾಗುತ್ತದೆ.
10. ವಾಸಂ ಗುಡುಚೀಂ ತ್ರಿಫಲಾಂತ್ರಾಯ ಮಾಣಂ ಯವಸಕಮ್
ಪಕ್ಷತೇನ ಕಷಾಯೇಣ ಪಯಸಾ ದ್ವಿಗುಣೇನ ಚ ॥
ಪಿಪ್ಪಲಿ ಮುಕ್ತ ಮೃದ್ದಿಕಾರಿ ಚಂದನೋತ್ಸಲ ನಾಗರೈ: |
ಕಲ್ಕೀ ಕೃತೈಶ್ಚ ವಿಪಚೇ ದೃತಂ ಜೀರ್ಣ ಜ್ವರಾಪಹಂ ॥
ಅಡುಸೋಗೆ, ಅಮೃತಬಭಾಗಳ್ಳಿ, ತ್ರಿಫಲ ತ್ರಯಂಮಣ, ಯವಸಕ ಇವುಗಳಿಗೆ ಭಾಗ ಹಾಲು ಸೇರಿಸಿ ತಯಾರಿಸಿದ ಘೃತ ಪಾಕಕ್ಕೆ ಹಿಪ್ಪಲಿ, ಉತ್ಸಲ, ಶುಂಠಿಯ ಕಲ್ಕ ಸೇರಿಸಿ ಸೇವಿಸಿದರೆ ದೀರ್ಘ ಕಾಲದ ಜ್ವರ ಗುಣವಾಗುತ್ತದೆ.
ಅಧ್ಯಾಯ – 5
ನೀಲಿನ್ಯಾಧ್ಯಂ ಧೃತ
11. ನೀಲಿನೀ ತ್ರಿಫಲಾಂ ರಾಸ್ಕಾಂ ಬಲಾಂ ಕಟುಕ ರೋಹಿಣಿಮ್ | ಪಡೇದ್ದಿಡಂಗಂ ವ್ಯಾಘ್ರ ಚ ಫಲೀಕಾನಿ ಜಲಾಡಕೆ ॥
ತೇನಪಾದಾವ ಶೇಷಣ ಧೃತಪ್ರಸ್ಥಂ ವಿಪಾಚಯೇತ್ |
ದಧ್ನಃ ಪ್ರಸೈನ ಸಂಯೋಜ್ಯ ಸುಧಾಕ್ಷೀರ ಫಲೇನ ಚ ||
ತಥೋ ಧೃತಫಲಂದದ್ಯಾದ್ಯವಾಗೊ ಮಂಡ ಮಿಶ್ರಿತಂ |
ಜೀರ್ಣೇ ಸಮ್ಯಗ್ವಿರಿಕ್ತಂ ಚ ಭೋಜಯೇ ದ್ರಸ ಭೋಜನಂ 11
ಗುಲ್ಬ ಕುಷ್ಟೋದರ ವ್ಯಂಗ ಶೋಷ ಪಾಡವಮಯ ಜ್ವರಾನ್ |
ಶ್ಚಿತಂ ಪ್ಲೀಹಾನ ಮನ್ಮದಂ ಘತ ಮೇತದ್ ವ್ಯಾಪೋಹ ||
ವಜ್ರನೀಲಿಗಿಡ, ತ್ರಿಫಲ, ರಾಷ್ಟ್ರ, ಬಲಾ, ಕಟುಕ ರೋಹಿಣಿ, ವಾಯು ವಿಳಂಗ ಮತ್ತು ಕಂಟಕಾರಿ – ಇವುಗಳನ್ನು ತಲಾ 40 ಗ್ರಾಂ ತೆಗೆದುಕೊಂಡು 2.56 ಲೀ. ನೀರಿನೊಡನೆ ಕುದಿಸಿ 1/4 ಭಾಗ ಉಳಿದ ಕಷಾಯಕ್ಕೆ 640 ಗ್ರಾಂ ತುಪ್ಪ 640 ಗ್ರಾಂ ಮೊಸರು, 40ಗ್ರಾಂ ಶುಂಠಿ ರಸ ಸೇರಿಸಿ ತಯಾರಿಸಿದ ಘೃತವನ್ನು, 40 ಗ್ರಾಂ ಪ್ರಮಾಣ ತೆಗೆದುಕೊಂಡು ಅನ್ನದ ಗಂಜಿಯೊಡನೆ ಸೇವಿಸುವುದರಿಂದ ಗುಲ್ಮ ರೋಗ, ಕುಷ್ಠ ರೋಗ, ಉದರ ರೋಗ, ರಕ್ತಹೀನತೆ, ಜ್ವರ, ತೊನ್ನು ಮತ್ತು ಹುಚ್ಚುತನ (Insanity) ಗುಣವಾಗುತ್ತದೆ.














