ಅನುರಾಧಾನಕ್ಷತ್ರದ ಕ್ಷೇತ್ರವ್ಯಾಪ್ತಿ3 ಅಂಶ 20 ಕಲಾದಿಂದ 16 ಅಂಶ 40 ಕಲಾ ವೃಶ್ಚಿಕ ರಾಶಿಯಲ್ಲಿ, ರಾಶಿಸ್ವಾಮಿ – ಮಂಗಳ, ನಕ್ಷತ್ರ ಸ್ವಾಮಿ – ಶನಿ, ನಕ್ಷತ್ರ ದೇವತೆ – ಮಿತ್ರ ದೇವತೆ, ತಾರಾಸಮೂಹ – 4, ಆಕಾಶಭಾಗ ದಕ್ಷಿಣ, ಮಧ್ಯನಾಡಿ, ಮೃಗ (ಚಿಗರೆ) ಯೋನಿ, ದೇವಗಣ, ನಾಮಾಕ್ಷರ ನಾ, ನೀ, ನೂ, ನೇ. ಅನುರಾಧಾ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ – ಬ್ಲಾಡರ್, ಮೂತ್ರಾಶಯ, ಗುಪ್ತಾಂಗ, ಮಲಾಶಯ ಅಂಗ, ಮೂಗಿನ ಹೊರಳೆ, ಮೂಳೆ, ಗುತ್ತೇಂದ್ರಿಯದ ಹತ್ತಿರದ ಮೂಳೆ.
ಅನುರಾಧಾ ನಕ್ಷತ್ರದ ಜಾತಕನ ಸ್ವರೂಪ :
ದೃಢನಿಶ್ಚಯಿ ಉದಾಸೀನ, ಅಪ್ಪಿಯತೆ, ಬಲಿಷ್ಠ ಅಧಿಕಾರಪೂರಿತ ಸ್ವರ, ಸ್ವಾರ್ಥಿ
ಹಿಂಸಾತ್ಮಕ ಪ್ರವೃತ್ತಿ, ಕಠೋರ ಕೂರ, ಸೇಡಿ ತೀರಿಸಿಕೊಳ್ಳವವ, ಅಸತ್ಯನುಡಿ, ಮಲಿನ ಮನಸ್ಸು ಚರಿತಹೀನ ಅನೈತಿಕ ಕಾರ್ಯಗಳತ್ತ ಉನ್ಮುಖನಾಗುವನ, ಉತ್ಪಾಹಿ,ಪ್ರಯೋಗವಾದಿ, ಆವಿಷ್ಕಾರಕ, ಸಂಶೋಧಕ, ಮಿಶ್ರಣಕರ್ತ ರಹಸ್ಯ ಪೂರ್ಣ ರಾತ್ರಿಯ ಭ್ರಮಣದಲ್ಲಿ ಅಭಿರುಚಿಯಿರುವವ ಏಕಾಂತ ಸ್ಥಳದಲ್ಲಿ ನೇಮಕವಾಗುವವ ನಿರ್ಭ’ಯಿ, ಶಿವಭಕ್ತ ಪರಾಕ್ರಮಿ ಪುರುಷ, ಕೌಶಲಯುಕ್ತ ಭದಜನರ ಮತ್ತ ವಿಧಾನಸಭೆಯ ಅಧ್ಯಕ್ಷ ಯಾತ್ರಾಪ್ತಿಯ, ಯಾತ್ರಿಕ ಪ್ರಾಮಾಣಿಕತೆಯ ಬೆಂಬಲಿಗ ಗುಪ್ತಕಾರ್ಯಗಳಲ್ಲಿ ವಿಶೇಷ ನಿಪುಣ, ಚರ್ಮ ಉಣ್ಣೆವಸ್ತ್ರ ಪುರಾತನ (ಹಳೆಯ) ಪದಾರ್ಥಗಳು, ಕಮ್ಮಾರಿಕೆ ಅಥವಾ ಬಡಿಗೆತನದ ಕಾರ್ಯಗಳಲ್ಲಿ ದಕ್ಕ, ಮುಳುಗುತಜ್ಞ, ಸೀಮೆ, ಎಣ್ಣೆ ವ್ಯಾಪಾರಿ, ತೈಲ ಕಂಪನಿಯ ಇಂಜಿನಿಯರ್, ವಿದೇಶ ಅಥವಾ ಪಶ್ಚಿಮ ದಿಕ್ಕಿನತ್ತ ಮುನ್ನಡೆಯುವವ ಅಥವಾ ವ್ಯಾಪಾರ ಮಾಡುವವ, ಹಸಿವೆಯನ್ನು ತಡೆಯಲಾಗದವ, ವಿವಿಧ ಸ್ಥಳಗಳಲ್ಲಿ ಭ್ರಮಣಿಸುವ ಅಭಿರುಚಿಯುಳ್ಳವ, ಪ್ರತ್ಯೇಕ ಸ್ಥಾನದಲ್ಲಿ ಪ್ರಸಿದ್ಧ, ಅಫೀಮು ಮಧ್ಯ ಅಥವಾ ಅನ್ಯ ಅಭಕ್ಷಣ ಪದಾರ್ಥಗಳ ಭಕ್ಷಕ, ಶೀತಪ್ರಿಯ, ತಂಗಳ ಅಥವಾ ಹಳಸಿದ ಅನ್ನವನ್ನು ಪಚನ ಮಾಡಿಕೊಳ್ಳುವವ, ಮಾಂಸಾಹಾರಿ.
ಅನುರಾಧಾ ಜಾತಕನ ಉದ್ಯೋಗ :
ಗಣಿ ಇಂಜಿನಿಯರ್, ಅಪರಾಧ, ಕಾನೂನು ಬಲ್ಲವ, ಔಷಧ ವಿಜ್ಞಾನ, ಶಸ್ತ್ರಚಿಕಿತ್ಸಕ, ವಾದ್ಯಯಂತ್ರ, ಉದ್ಯೋಗ, ಟೆಕ್ನಿಕಲ್ ಇಂಜಿನಿಯರ್, ಸೀಸ ಅಥವಾ ಲೋಹ, ಟಂಕಣ, ಮುದ್ರಣ, ಕಾರ್ಖಾನೆಯ ಕಾರ್ಮಿಕ, ಚರ್ಮ ವ್ಯಾಪಾರಿ, ಉಣ್ಣೆ ಪದಾರ್ಥಗಳು, ಹಳೆಯ ಪದಾರ್ಥಗಳು, ಆವಿಷ್ಕಾರ, ರೈಲ್ವೇ ಇಂಜಿನ್, ಅಂಗಚ್ಛೇದ ಶಸ್ತ್ರಕ್ರಿಯೆಕರ್ತ, ಮೊಳೆ ಹೊಡೆಯುವವ, ಭಾರ ಹೊರುವವ, ಸ್ವಚ್ಛತಾ ಕಾರ್ಮಿಕ, ಎಣ್ಣೆಯ ವ್ಯಾಪಾರಿ, ಮೆಕ್ಯಾನಿಕ್, ಫಿಟ್ಟರ್, ವೆಲ್ಡರ್, ಅನುಚರ, ಸೇವಕ, ರೋಗಿಯ ಪರಿಚಾರಕ, ಆಟೆಂಡೆಂಟ್, ಕಾವಲುಗಾರ, ಪೈಲಟ್, ಚಾಲಕ, ದರೋಡೆಕೋರ, ರೌಡಿ (ದುಷ್ಟು, ದಂತವಿಶೇಷಜ್ಞ, ಗುಪ್ತರೋಗಗಳ ಚಿಕಿತ್ಸಕ, ತೈಲವಿಭಾಗ, ನ್ಯಾಯಾಧೀಶ, ಗುತ್ತಿಗೆದಾರ, ನಲ್ಲಿಯ ಕೆಲಸಗಾರ, ಪರಿಶ್ರಮಿ, ಕಾರ್ಮಿಕ, ಇದ್ದಿಲು, ಧೂರ್ತ(ಚಾಲಾಕಿ), ಕೊಡ ಮತ್ತು ಸ್ನಾನ ಸಾಮಗ್ರಿಗಳ ಮಾರಾಟಗಾರ, ಕ್ರೇನ್, ಬುಲ್ಲೋಜರ್, ಕಬ್ಬಿಣದ ಪತ್ರೆ ಗುಂಡು ಹಾರಿಸುವವ,ಅಶ್ರುವಾಯು, ಶೇಂಗಾ,ಸಾಸಿವೆ ಅರಳೆ, ಹತ್ತಿಯ, ಕಾಳು,ದುರ್ಗಮ್ಮ ಅಥವಾ ದೀರ್ಘ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವ, ನಟ ಅಲೆಮಾರಿ ಕಸಾಯಿಖಾನೆ, ಸಾಮ್ಯವಾದಿ.
* ಅನುರಾಧಾ ಜಾತಕನ ರೋಗ:
ಸ್ತ್ರೀಯರಲ್ಲಿ ಮಾಸಿಕ (ಋತು) ಕಷ್ಟ ರಕಕ್ಷೀಣತೆ ಮತ್ತು ತೀವ್ರ ನೋವು, ಪೈಲ್ ಗುಪೇಂದ್ರಿಯದ ಬಳಿಯ ಮೂಳೆಯಲ್ಲಿ ತೊಂದರೆ.














