ಮನೆ ಅಪರಾಧ ಹಳ್ಳಕ್ಕೆ ಉರುಳಿದ ಗೂಡ್ಸ್‌ ಲಾರಿ: ತಪ್ಪಿದ ಅನಾಹುತ

ಹಳ್ಳಕ್ಕೆ ಉರುಳಿದ ಗೂಡ್ಸ್‌ ಲಾರಿ: ತಪ್ಪಿದ ಅನಾಹುತ

0

ಶ್ರೀರಂಗಪಟ್ಟಣ:ಚಾಲಕನ ನಿಯಂತ್ರಣ ಕಳೆದುಕೊಂಡು ಗೂಡ್ಸ್‌ ಲಾರಿಯೊಂದು ರಸ್ತೆ ಬದಿ ಹಳ್ಳಕ್ಕೆ ಉರುಳಿದ ಘಟನೆ ಮಂಗಳವಾರ ಮುಂಜಾನೆ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ.

Join Our Whatsapp Group


ಹಾವೇರಿಯಿಂದ ತಮಿಳುನಾಡಿಗೆ ವೇಸ್ಟ್ ಪೇಪರ್ ಸಾಗಿಸುತ್ತಿದ್ದ ಈ ಗೂಡ್ಸ್ ಲಾರಿ ಬರುತ್ತಿದ್ದ ವೇಳೆ ಅಡ್ಡಲಾಗಿ ಬೈಕ್ ಸವಾರನೊಬ್ಬ ನುಗ್ಗಿದ ವೇಳೆ ಅಪಘಾತ ತಪ್ಪಿಸಲು ಹೋಗಿ ಲಾರಿ ಪಲ್ಟಿಯಾಗಿ ಹಳ್ಳಕ್ಕೆ ಉರುಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಲಾರಿ ಉರುಳಿ ಬಿದ್ದಿದ್ದರಿಂದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.