ಸಂಕುಚಿತ ಮತ್ತು ವಿಕಾಶವಾಗುವ ಮತ್ತು ನಾರಿನಾಂಶದಿಂದ ಕೂಡಿದೆ ಈ ಪದರವು ಸಣ್ಣ ನೀರ್ಗುಳ್ಳೆಯಂತೆ ಇರುತ್ತದೆ. ಸೂಕ್ಷ್ಮವಾದ ರಕ್ತವಾಹಿನಿ ತಂತುಗಳ ಗೊಂಚಲಿನಿಂದ ಕೂಡಿರುತ್ತದೆ. ಈ ಪದರವು ಸೂಕ್ಷ್ಮ ಅರಿವುಂಟು ಮಾಡುವ ನರಗಳ ಕೊನೆಯಭಾಗವಿದೆ. ಸುರಳಿ ಆಕಾರದ ಬೆವರಿನ ಗ್ರಂಥಿಯ ಕೊಳವೆಯು ಕೊಬ್ಬನ್ನು ಶೇಖರಿಸುವ ಜೀವಕೋಶಗಳ ಮಧ್ಯೆಯಿಂದ ಮೇಲೆ ಬಂದಿರುತ್ತದೆ.
ಈ ಬೆವರು ಗ್ರಂಥಿಯು ಎರಡು ವಿಧ ಒಂದು – ಗ್ರಂಥಿಯು ನಮ್ಮ ದೇಹದಲ್ಲಿ ಇರುವ ನೀರನ್ನು ಸಮಯಕ್ಕೆ ತಕ್ಕಂತೆ ಹೊರಹಾಕುತ್ತಾ ನಮ್ಮ ದೇಹದ ಶಾಖವನ್ನು ಸಮತೋಲನದಲ್ಲಿ ಇಟ್ಟಿರುತ್ತದೆ. ಇದು ದೇಹದ ಎಲ್ಲಾ ಕಡೆ ಇರುತ್ತದೆ. ಮತ್ತೊಂದು – ಬೆವರು ಗ್ರಂಥಿಯು ದೇಹದ ನಿಯಮಿತ ಸ್ಥಳಗಳಲ್ಲಿ ಮಾತ್ರವಿದ್ದು, ಇದು ದೇಹದ ಸತ್ತ ಜೀವಕೋಶಗಳ ಬ್ಯಾಕ್ಟಿರೀಯಾವನ್ನು ಬೆವರು ಹಾಲಿನ ರೀತಿಯಲ್ಲಿ ಹೊರ ಹಾಕುತ್ತದೆ.
ತಚ್ಚೆಯ ಪದರ : ಈ ಪದರವು ಸ್ನಾಯುಗಳಿಂದ ಕೂಡಿ ಕೊಬ್ಬನ್ನು ಶೇಖರಿಸುತ್ತದೆ ಇಲ್ಲದಿ ದೇಹದ ಉಷ್ಣಾಂಶವನ್ನು ಸಮಾನಾಂತರವಾಗಿ ಇಟ್ಟಿರುತ್ತದೆ ಮತ್ತು ಚರ್ಮವನ್ನು ಮೆತ್ತಗೆ ಇಟ್ಟಿರುತ್ತದೆ ಇದನ್ನು ಚರ್ಮದ ಕೆಳಭಾಗವೆನ್ನುತ್ತಾರೆ. ಇದರ ಕೆಳಭಾಗದಲ್ಲಿ ಮಾಂಸಖಂಡಗಳು ಸ್ನಾಯ ಬರುತ್ತದೆ.
ದೇಹಕ್ಕೆ ಚರ್ಮ ಸೇರಿರುವ ಮಧ್ಯಭಾಗ :
ಇಲ್ಲಿಂದಲೇ ಕೂದಲು, ಉಗುರು, ಬೆವರು ಗ್ರಂಥಿಗಳು ಹೊರಡುತ್ತದೆ. ಕೂದಲು ಹೊರ ಚರ್ಮದ ಜೀವಕೋಶಗಳ ಮಧ್ಯೆ ಬೆಳೆಯುತ್ತದೆ. ಕೂದಲಿನ ಬುಡವು ಗುಂಡಾಗಿರುತ್ತದೆ. ಈ ಕೂದಲು ನಾವು ಉದ್ರೇಕಗೊಂಡಾಗ ನೇರವಾಗಿ ನಿಲ್ಲುತ್ತದೆ. ಕೊಬ್ಬು ಸ್ರವಿಸುವ ಕೋಶಗಳ ಜೊತೆ ಕೂದಲ ಬೇರು ಮೂಡಿ ಬಂದಿರುತ್ತದೆ ಈ ಎಣ್ಣೆರೂಪದಲ್ಲಿರುವ ಕೊಬ್ಬು ಕೂದಲ ರಂಧ್ರದಿಂದ ಚರ್ಮದ ಹೊರ ಭಾಗ್ಯತರುತ್ತದೆ ಇದರಿಂದ ಚರ್ಮವನ್ನು ಮೃದುವಾಗಿಡಲು ಇದು ಸಹಾಯ ಮಾಡುತ್ತದೆ. ಉಗುರು ಸಾ ಚರ್ಮದ ಬಹಳ ಸೂಕ್ಷ್ಮ ಅಂಗವಾಗಿರುತ್ತದೆ. ಈ ಉಗುರು ಮೂಳೆಯ ಮತ್ತು ಚರ್ಮದ ಕೊನೆಯ ಭಾಗದಿಂದ ಬೆಳೆದಿರುತ್ತದೆ.
ಬೆವರು :
ಈ ಬೆವರು, ಬೆವರಿನ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ. ಇದರಲ್ಲಿ ಮೂರನೇ ಒಂದು ಭಾಗ ಪ್ಲಾಸಂ ದ್ರವವಿರುತ್ತದೆ. ಇದು ಮೃದುವಾದ ನರವ್ಯೂಹದ ಅಂಕೆಗೆ ಒಳಪಟ್ಟು ಸ್ರವಿಸುತ್ತದೆ. ನಮ್ಮ ಶರೀರದ ಉಷ್ಣಾಂಶವು ಸಮತೋಲನವಾಗಿಡಲು ಇದು ದ್ರವವನ್ನು ಸ್ರವಿಸುತ್ತದೆ. ಇದು ಪ್ರತಿದಿನ 0ನಿಂದ 2000 ಮಿಲಿ ಲೀಟರ್ ದ್ರವವನ್ನು (ಬೆವರು) ಸ್ರವಿಸುತ್ತದೆ.
ಬೆವರು ಗ್ರಂಥಿಗಳು ಒಂದು ಚದರ ಅಂಗುಲಕ್ಕೆ 1200 ಮತ್ತು ವಿಶೇಷ ಸ್ಥಳದಲ್ಲಿ 800 ಚರ್ಮದಲ್ಲಿ ಇರುತ್ತದೆ.
ಚರ್ಮವ್ಯಾಧಿಗಳು
2 ಮೆಲನೊಮ :
ಮೆಲನೊದು ಇದು ಕ್ಯಾನ್ಸರ್ ವ್ಯಾಧಿಯ ಲಕ್ಷಣವಾಗಿರುತ್ತದೆ. ಇದು ದೇಹದಲ್ಲಿರುವ ನಾಶವಾದ ಜೀವಕೋಶಗಳಿಂದ ಉತ್ಪತ್ತಿಯಾಗುತ್ತದೆ. ಕೆಲವು ಸಲ ಈ ವರ್ಣತೀತವಾದ ಜೀವಕೋಶಗಳು ಜೀವನಾಶಕವಾಗಿ ದೇಹದ ಅಂಗಗಳಾದ ಯಕೃತ್, ಮಿದುಳು, ಶ್ವಾಸಕೋಶ ಮತ್ತು ಇತರ ಒಳ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಶಸ್ತ್ರಚಿಕಿತ್ಸೆಯೇ ಈ ವ್ಯಾಧಿಗೆ ಬಹಳ ಉತ್ತಮವಾದ ಚಿಕಿತ್ಸೆ. ಅಲ್ಲದೆ ಕಿಮೋತೆರಪಿ, ರೆಡಿಯೋ ತೆರಪಿಯಿಂದಲೂ ಸಹ ಶಸ್ತ್ರಚಿಕಿತ್ಸೆ ನಂತರ ಗುಣ ಪಡಿಸುತ್ತಾರೆ.