ಮನೆ ಜ್ಯೋತಿಷ್ಯ ಅನುರಾಧ ನಕ್ಷತ್ರ ಮತ್ತು ಜಾತಕ

ಅನುರಾಧ ನಕ್ಷತ್ರ ಮತ್ತು ಜಾತಕ

0

* ಅನುರಾಧಾ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

Join Our Whatsapp Group

 ಅನುರಾಧಾ ನಕ್ಷತ್ರದ ಕನ್ನೆಗೆ :

ಅನುರಾಧಾ ನಕ್ಷತ್ರದ ಕನೈಯರಿಗೆ, ಜೇಷ್ಠಾ ನಕ್ಷತ್ರದ ವರನನ್ನು ಹೊರತುಪಡಿಸಿ ಎಲ್ಲ ನಕ್ಷತ್ರದ ವರಗಳು ಹೊಂದಿಕೆಯಾಗುತ್ತಾರೆ.

 ಅನುರಾಧಾ ನಕ್ಷತ್ರದ ವರನಿಗೆ :

ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆದ್ರ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಪೂರ್ವಾಫಾಲ್ಗುಣಿ, ಉತ್ತರಾ, ಹಸ್ತಾ ಸ್ವಾತಿ, ಅನುರಾಧಾ, ಜೇಷ್ಠಾ ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಪೂರ್ವಾಭಾದ್ರಪದಾ, ಉತ್ತರಾ ಭಾದ್ರಪದಾ, ರೇವತಿ.

* ಅನುರಾಧಾ ನಕ್ಷತ್ರದವರ ಜನನಕ್ಕೆ ಶಾಂತಿ :

 ನಮೋಮಿತ್ರಸ್ಯ ಚಕ್ಷಸೇ ಮಹಾದೇವಾಯತನತಗ್ಂ । ಸಪರ್ಯತ ದೂರೇ ದೃಶೇ । ದೇವ ಜಾತಯ ಕೇತವೇ ದಿವಸ್ಸುತ್ತಾಯಮ ಸೂರ್ಯಾಯಶಗ್ಂ ಸತ ||

ಈ ನಕ್ಷತ್ರದಲ್ಲಿ ಸಂತಾನದ ಪ್ರಾಪ್ತಿಯಾದಾಗ, ತಾಯ್ತಂದೆಯರು ಮಂತ್ರವನ್ನು ಒಂದು ಮಾಲೆಯಷ್ಟು ಜಪ ಮಾಡಬೇಕು. ಯಥಾಶಕ್ತಿ ಅಕ್ಕಿ-ಬೆಲ್ಲ-ತೊಗರಿಬೇಳೆಯನ್ನು  ದಾನ ನೀಡಬೇಕು. ಇದರಿಂದ ನಕ್ಷತ್ರದೋಷ ಪರಿಹಾರವಾಗುತ್ತದೆ.

ಯಂತ್ರ :

ಓಂ ಹ್ರಾಂ ಕ್ರೀಂ ಮಿತ್ರಾಯ ನಮಃ

ಮಿತ್ರಸ್ಯ ಚರ್ಷಿಣೀ ಧೃತಃ ಶ್ರವೋ ದೇವಸ್ಯ ಸಾನಸಂ ।

ಸತ್ಯಂ ಚಿತ್ರಸ್ಯ ವಸ್ತಮಂ ಮಿತ್ರೋ ಜನಾನ್ನೋ ಯಾತಿ ಇತಿ ।

ಪ್ರಜಾನನ್ / ಮಿತ್ರೋದಾಧಾರ ಪೃಥಿವೀ ಮುತದ್ಯಾಂ।

ಸತ್ಯಾಯ ಹವ್ಯಂ । ಘೃತವದ್ವಿಧೇಯ ।

ಪ್ರಸಮಿರ್ತೊ ಮರ್ತ್ತೊ ಅಸ್ತು।

ಮಿತ್ರ ಕೃಷ್ಟಿ: ಅನಿಮಿಷಾಭಿಚಷ್ಟೇ । ಪಯಸ್ವಾನ್ ಯಸ್ತ ಆದಿತ್ಯಾಃ |

ಶಿಕ್ಷತಿ ವ್ರತೇನ | ನ ಹನ್ಯತೇ ನ ಜೀಯತೇ ।

ತೋತೋನೈನಾ ಹಗ್ಂ ಹೊ ಅಷ್ಯತಿ । ಅಂತ್ಯತೋನದೂದಾತ್ ||

-ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ, ಈ ಮೇಲಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪಮಾಡಿ, ಶ್ರೀಗಂಧದ ಧೂಪವನ್ನು ನೀಡಿ, ಪಾಯಸದ ನೈವೇದ್ಯ, ಸುವರ್ಣಗಡ್ಡೆ ಹೋಮ, ಮಧುಶರ್ಕರ ಪಾಯಸದ ಬಲಿಯೊಡನೆ ತುಪ್ಪಅನ್ನ, ಮುದ್ಗಾನ್ನ ಅರ್ಪಿಸಬೇಕು. ನಂತರ ಯಂತ್ರದ ಧಾರಣ ಮಾಡುವುದರಿಂದ ಈ ನಕ್ಷತ್ರದ ಸಮಸ್ತದೋಷಗಳು ಶಾಂತವಾಗುತ್ತವೆ.