ಮನೆ ಯೋಗಾಸನ ನಟರಾಜಾಸನ

ನಟರಾಜಾಸನ

0

‘ನಟರಾಜ’ ಇದು ನೃತ್ಯಕಲೆಗೆ ಅಧಿದೇವತೆಯಾದ ಶಿವನ ಹೆಸರು. ಇವನು ವಿಶ್ವದ ಲಯಕ್ಕೆ ಕಾರಣಕರ್ತನೂ ಹೌದು. ತಾಂಡವೇಶ್ವರನಾದ ಶಿವನು ತನ್ನ ವಾಸಸ್ಥಾನವಾದ ಕೈಲಾಸದ ನೃತ್ಯಮಾಡುತ್ತಿರುತ್ತಾನೆ. ಶಿವನ ಹಲವು ನೃತ್ಯಭಂಗಿಗಳು ಶಾಂತಿ-ಸೌಮ್ಯಗಳಿಂದ ಕೂಡಿದ್ದರೆ, ಮತ್ತೆ ಕೆಲವು ಘೋರ ಮತ್ತು ಭಯಂಕರವಾದಂಥವು.

Join Our Whatsapp Group

ಪ್ರಪಂಚಪ್ರಳಯದ ಸಮಯದಲ್ಲಿ ವಿಶ್ವವನ್ನು ಲಯ (ನಾಶ) ಗೊಳಿಸುವುದಕ್ಕಾಗಿ ಶಿವನು ಕೋಪಾಗ್ನಿಯಿಂದ ಮಾಡುವ ನರ್ತನಕ್ಕೆ ‘ ತಾಂಡವ ನೃತ್ಯ  ಎಂದು ಹೆಸರು ಶಿವನು ತನ್ನ ಹೆಂಡತಿ ಸತೀ ದೇವಿಯು ದೇಹ ತ್ಯಾಗಕ್ಕೆ ಕಾರಣನಾದ ಹವನ ತಾಂಡವ ಮಾವ ದಕ್ಷಬ್ರಹ್ಮನನ್ನು ಕೊಲ್ಲುವ ಸಮಯದಲ್ಲೂ ಈ ಪ್ರಳಯಕಾರಕ ಭಯಂಕರ ನೃತ್ಯವಾದ ತಾಂಡವವನ್ನು ಪ್ರದರ್ಶಿಶಿಸಿದ. ಆಗ ಶಿವನು ತನ್ನ ಗಣಗಳು ಹಾಕುತ್ತಿದ್ದ ಮೃದಂಗತಾಳಗಳಿಗೆ ಅನುಗುಣವಾಗಿ ಕುಣಿಯುತ್ತ, ಇಡೀ ಬ್ರಹ್ಮಾಂಡವೇ ಪ್ರಳಯಕ್ಕೆ ತುತ್ತಾದೀತೆಂಬ ಭಯವನ್ನು ಸಮಸ್ತ ಜೀವರಾಶಿಗಳಲ್ಲಿ ತುಂಬಿದ.

ಶಿವನ ಸ್ವರೂಪವೆನಿಸಿದ ‘ನಟರಾಜ’ನ ಕಲ್ಪನೆಯಿಂದ ಕೇವಲ ನಾಟ್ಯಕಲೆಯೊಂದೇ ಬೆಳೆಯಲಿಲ್ಲ. ಶಿಲ್ಪಕಲೆಯೂ ಸೇರಿದಂತೆ ಅನೇಕ ರೀತಿಯ ಕಲೆಗಳಿಗೆ ಇದು ಪೋಷಕವಾಯಿತು.

ಶಿವನ ನಾಟ್ಯಭಂಗಿಗಳಲ್ಲಿ ಯೌಗಿಕ ಭಂಗಿಗಳೂ ಸಹ ಪ್ರಕಟಗೊಂಡಿವೆ. ಶಿವನನ್ನು ‘ಯೋಗಿಶ್ವರ’ (ಯೋಗಿಗಳ ರಾಜ) ನೆಂದೂ, ಯೋಗಾಭ್ಯಾಸದಿಂದ ಜ್ಞಾನೋದಯ ಪ್ರಾಪ್ತವಾಗಿ ಮುಕ್ತಿ ಲಭಿಸುವುದರಿಂದ ಅವನನ್ನು ‘ಜ್ಞಾನದಾತ’ನೆಂದೂ, ‘ಜ್ಞಾನೇಶ್ವರ’ನೆಂದೂ ಕರೆಯುತ್ತಾರೆ. ‘ಮಾಯೆ’ಯೆಂಬ ರಾಕ್ಷಸನನ್ನು ತನ್ನ ನಾಟ್ಯದ ವಿವಿಧ ಭಂಗಿಗಳಿಂದಲೇ ಸಂಹರಿಸಿ, ಲೋಕಮಂಗಳ ವನ್ನು ಸಾಧಿಸಿದುದರಿಂದಲೇ ಅವನಿಗೆ ‘ಶಿವ’ (ಮಂಗಳಕರ)ನೆಂಬ ಹೆಸರು.

ಪರಮೇಶ್ವರನ ಭಕ್ತಯಾಗ್ರಣಿಯೆನಿಸಿದ ರಾವಣೇಶ್ವರನು, ತನ್ನ ಇಷ್ಟದೈವವನ್ನು ‘ಶಿವತಾಂಡವ ಸ್ತೋತ್ರ’ದ ಮೂಲಕ ವರ್ಣಿಸಿ, ಶಿವನನ್ನು ತೃಪ್ತಿಗೊಳಿಸಿ, ಅವನ ಅನುಗ್ರಹವನ್ನು ಸಂಪಾದಿಸಿದ ಎಂಬುದು ಶಿವಪುರಾಣದ ಒಂದು ಕಥೆ, ನೃತ್ಯಕ್ಕೆ ಸರಿಹೊಂದುವ ಪಂಚಚಾಮರವೃತ್ತದಲ್ಲಿ ರಾವಣನೇ ಈ ಸ್ತೋತ್ರವನ್ನು ಹಾಡಿ, ನೃತ್ಯಸೇವೆಯ ಮೂಲಕ ತನ್ನ ಇಷ್ಟದೈವ ಆ ಪರಶಿವನನ್ನೂ ಸಂತೃಪ್ತಿಗೊಳಿಸಿದನಂತೆ.

ವಾಚಕರ ಅವಗಾಹನೆಗಾಗಿ ಆ ಸ್ತೋತ್ರದಲ್ಲಿಯ ಒಂದೆರಡು ಶ್ಲೋಕಗಳನ್ನು ಮಾತ್ರ ಮುಂದೆ ಕೊಟ್ಟಿದೆ

 ಜಟಾಕಟಾಹ ಸಂಭ್ರಮ ಭ್ರಮನ್ನಿಳಿಂಪ ನಿರ್ಝರೀ | ವಿಲೋಲ*ವೀಚಿವಲ್ಲರೀ ವೀರಾಜಮಾನ ಮೂರ್ಧನೀ ||

 ಧಗದ್ದಗತ್ ಜ್ವಲತ್ ಲಲಾಟ ಪಟ್ಟಪಾವಕೇ ।

 ಕಿಶೋರ ಚಂದ್ರಶೇಖರೇ ರತೀ ಪ್ರತಿಕ್ಷಣಂ ಮಮ ।।

 ಆಗರ್ವ ಸರ್ವಮಂಗಳಾ ಕಲಾಕದಂಬಮಂಜರೀ । ರಸಪ್ರವಾಹ ಮಾಧುರೀ ವಿಜೃಂಭಣಾ ಮಧುವ್ರತಾ ॥

 ಸ್ಮರಾಂತಕಂ ಪುರಾಂತಕಂ ಭವಾಂತಕಂ ಮುಖಾಂತಕಮ್ । ಗಜಾಂತಕಾಂಧಕಾಂತಂ ತಮಂತಕಾಂತಕಂ ಭಜೇ 11

 *ಜಯತ್ವದಭ್ರಮದ್ದುಜಂಗಮಸ್ಸುರತ್ ।

 ಧಗದ್ಧಗದ್ವಿನಿರ್ಗಮತ್ ಕರಾಳಬಾಲಹವ್ಯವಾಟ್ 1

*

 ಧಿಮಿದ್ಧಿಮಿಧನತ್ ಮೃದಂಗ ತುಂಗ ಮಂಗಳ 1

 ಧ್ವನಿಕ್ರಮ ಪ್ರವರ್ತಿತಃ ಪ್ರಚಂಡ ತಾಂಡವಶಿವಃ ||

ಈ ಶ್ಲೋಕರತ್ನಗಳಲ್ಲಡಗಿರುವ ರಹಸ್ಯವನ್ನು ವಿದ್ವಾಂಸರ ನೆರವಿನಿಂದ ವಾಚಕರು ತಿಳಿದು ಕೊಳ್ಳಬಹುದು ಗ್ರಂಥವಿಸ್ತಾರಭಯದಿಂದ ಅದನ್ನು ಇಲ್ಲಿ ಕೊಡಲು ಯತ್ನಿಸಿಲ್ಲ. ಈ ಮೇಲಿನ ಶ್ಲೋಕಗಳಲ್ಲಿ ಶಿವನ ಸೌಮ್ಯತಾಂಡವದ ಕಲೆಯೂ, ಪ್ರಚಂಡತಾಂಡವದ ಭಾವಭಂಗಿಯೂ ಅಡಗಿದೆ.

    ಇಂಥ ರಮ್ಯವಾದ ಮತ್ತು ಅರ್ಥಗರ್ಭಿತವಾದ ತಾಂಡವಕಲೆಗೆ ಮೂಲದೇವನ್ನಾದ ‘ನಟರಾಜ’ನಾದ ಶಿವನಿಗೆ ಈ ಆಸನವನ್ನು ಅರ್ಪಿಸಿದೆ. ಅಲ್ಲದೆ ಈ ಹಿಂದೆ ಸೂಚಿಸಿದಂತೆ ಶಿವ ಯೋಗಿಗಳ ರಾಜನೂ ಹೌದು

 ಅಭ್ಯಾಸಕ್ರಮ :

೧. ಮೊದಲು ತಾಡಾಸನದ ಭಂಗಿಯಲ್ಲಿ ನಿಲ್ಲಬೇಕು. ಬಳಿಕ ಎಡಗೈಯನ್ನು ಮುಂಗಡೆಗೆ ನೆಲಕ್ಕೆ ಸಮಾಂತರವಾಗುವಂತೆ ನೀಳವಾಗಿ ಚಾಚಬೇಕು. ಆಮೇಲೆ, ಬಲಮಂಡಿಯನ್ನು ಬಾಗಿಸಿ ಬಲವಾದವನ್ನು ಮೇಲೆತ್ತಿ, ಬಲಗಾಲಿನುಂಗುಟವನ್ನು ಬಲಗ್ಗೆ ಹೆಬ್ಬೆರಳು, ತೋರುಬೆರಳು ಮತ್ತು ನಡುಬೆರಳು (ಅಂಗುಷ್ಯ ತರ್ಜನೀ, ಮಧ್ಯಮ)ಗಳಿಂದ ಹಿಡಿದು ಎತ್ತಿದ ಎಡಮಂಡಿಯನ್ನು ಬಗ್ಗಿಸಿ, ಆ ಕಾಲನ್ನು ಬೆನ್ನಹಿಂದೆ ಮೇಲಕ್ಕೆಳೆಯಬೇಕು.

೨. ಆ ಬಳಿಕ, ಬಲಗೈಯ ಹೆಬ್ಬೆರಳು ಮತ್ತು ಉಳಿದ ಬೆರಳುಗಳನ್ನು ಬಲದು೦ಗುಟದ ಸುತ್ತ ತಿರುಗಿಸಿ ಮತ್ತು ಜೊತೆಯಲ್ಲಿಯೇ ಬಲಮೊಣಕೈ-ಹೆಗಲುಗಳನ್ನು ಗುಂಡಗೆ ಸುತ್ತಿಸಿ, ಬಲತೋಳನ್ನು ತಲೆಯ ಹಿಂಗಡೆ ಎತ್ತರವಾಗಿ ಹಿಗ್ಗಿಸಬೇಕು. ಆದರೆ ಉಂಗುಟದಮೇಲಣ ಕೈ ಬಿಗಿತವನ್ನು ಸಡಿಲಿಸಬಾರದು  ಮತ್ತೆ ಬಲತೋಳು, ಬಲಗಾಲನ್ನು ಮೇಲೆಕ್ಕೆಳೆದು ಅವುಗಳನ್ನು ಬೆನ್ನಹಿಂಬದಿಯಲ್ಲಿ ಬಿಲ್ಲಿನಂತೆ ಬಗ್ಗಿಸಬೇಕು ಈಗ ಬಲತೊಡೆಯು ನೆಲಕ್ಕೆ ಸಮಾಂತರವಾಗಿಯು ಮತ್ತು ಮೊಣಕಾಲು ಇದಕ್ಕೆ ಲಂಬವಾಗಿ ಇರುತ್ತದೆ.

3. ಅನಂತರ ಎಡ ತೋಳನ್ನು ಮುಂಗಡಗೆ ಹೆಗಲಿಗೆ ಸಮತಟ್ಟದಲ್ಲಿರುವಂತೆ ಚಾಚಿ ಬೆರಳುಗಳ ತುದಿ ಮುಂದಿರುವಂತೆ ನೀಡಬೇಕು.

೪. ಈಗ ಎಡಗಾಲಿನ ಮಂಡಿಚಿಪ್ಪನ್ನು ಮೇಲಕ್ಕೆ ಸೆಳೆದು ಅದನ್ನು ಸಲಾಕೆಯಂತೆ ಬಿರುಸಾಗಿ ನೇರವಾಗಿಸಿ ನೆಲಕ್ಕೆ ಲಂಬವಾಗುವಂತಿರಿಸಬೇಕು.

೫. ಆಮೇಲೆ ಈ ಭಂಗಿಯ ಸ್ಥಿತಿಯಲ್ಲಿ ಸುಭದ್ರವಾಗಿ ಸಮತೋಲಿಸಿ, ಆಳವಾದ ಮತ್ತು ಸಮನಾದ ಉಸಿರಾಟ ನಡೆಸುತ್ತ ಸುಮಾರು 10-15 ಸೆಕೆಂಡುಗಳಕಾಲ ನೆಲೆಸಬೇಕು.

೬. ಬಳಿಕ ಬಲಪಾದದಮೇಲಣ ಬಿಗಿಯನ್ನು ಸಡಿಲಿಸಿ, ಎರಡೂ ತೋಳುಗಳನ್ನು ಕೆಳಕ್ಕಿಳಿಬಿಟ್ಟು ಮತ್ತೆ ‘ತಾಡಾಸನ’ ದಲ್ಲಿ  ನಿಲ್ಲಬೇಕು. ಇದೇ ಭಂಗಿಯನ್ನು ಇನ್ನೊಂದು ಕಡೆಯೂ ನಡೆಸಿ ಅದರಲ್ಲಿಯೂ ಅಷ್ಟೇ ಕಾಲ ನೆಲೆಸಬೇಕು. ಈ ಭಂಗಿಯಲ್ಲಿ ಬಲಗಾಲಮೇಲೆ ಸಮತೋಲಿಸಿ, ಎಡಗಾಲಿನ ಉಂಗುಟವನ್ನು ಎಡಗೈಯಿಂದ ಬೆನ್ನಹಿಂಗಡೆ ಹಿಡಿದು ಬಲತೋಳನ್ನು ಮುಂಗಡೆಗೆ ಚಾಚಬೇಕು.

೭. ಈ ಆಸನಾಭ್ಯಾಸದಲ್ಲಿ ಮುಂದುವರಿದವರು, ಪಾದವನ್ನು ಎರಡೂ ಕೈಗಳಲ್ಲಿ ಹಿಡಿದು ಅದನ್ನೆತ್ತಿ ತಲೆಯ ಹಿಂಬದಿಗೊರಗಿಸಿಟ್ಟು ಸಮತೋಲಿಸಬೇಕು.

 ಪರಿಣಾಮಗಳು :

ಬಹು ಪ್ರಯಾಸದಿಂದ ಸಮತೋಲಿಸಿ ನಿಲ್ಲುವ ಈ ಆಸನದ ಭಂಗಿಯು, ದೇಹಕ್ಕೆ ಸಮಸ್ಥಿತಿಯನ್ನೊದಗಿಸುವುದಲ್ಲದೆ ಅದಕ್ಕೆ ಒಂದು ಬಗೆಯ ಸೊಬಗನ್ನೂ ಕೊಡುತ್ತದೆ. ಅಲ್ಲದೆ ಈ ಆಸನವು ಕಾಲುಗಳ ಮಾಂಸಖಂಡಗಳಿಗೆ ಹುರುಪು ಕೊಟ್ಟು ಅವನ್ನು ಬಲಗೊಳಿಸುವುದು ಮತ್ತು ಇದರಿಂದ ಹೆಗಲೆಲುಬುಗಳಿಗೆ ಪೂರ್ಣ ಚಲನೆಯುಂಟಾಗಿ ಎದೆಯು ಚೆನ್ನಾಗಿ ಹಿಗ್ಗುವಂತಾಗುತ್ತದೆ. ಇದರ ಜೊತೆಗೆ ಬೆನ್ನದಂಡಿಯೊಳಗಿನ ಕೀಲುಗಳೆಲ್ಲವೂ ಈ ಆಸನಾಭ್ಯಾಸದಿಂದ ಒಳ್ಳೆಯ ವ್ಯಾಯಾಮವನ್ನು ಪಡೆಯುತ್ತವೆ.