19. ಫಲತ್ರಿಕಂ ದೀಷ್ಮಕ ಚಿತ್ರಕೌ ಚ ಸಪಿಷ್ಟಲೀ ಲೋಹರಜೋ ವಿಡಂಗಮ್ ।
ಚೂರ್ಣಿಕೃತಂ ಕೌಡವಿಕಂ ದ್ವಿರಂಶಂ ಕ್ಷೌದ್ರಂ ಪುರಾಣಸ್ಯ ತುಲಾಂ ಗುಡಸ್ಟ
ಮಾಸಂ ನಿದಾದ್ಯದ್ ಘೃತ ಭಾಜನಸ್ಥ। ಯವೇಷು ತಾನೇನ ನಿಹಂತಿ ರೋಗಾನ್ |
ಯೇ ಚಾರ್ಶಸಾಂ ಪಾಂಡು ವಿಕಾರಣಾಂ ಚ ಪ್ರೋಕ್ತಾ ಹಿತಾಃ ಶೋಫಿಷು ತೆ ||
ತ್ರಿಫಲ ಚೂರ್ಣ, ಯವಾನಿ, ಚಿತ್ರಮೂಲ, ಹಿಪ್ಪಲಿ, ಲೋಹ ಭಸ್ಮ, ವಾಯು ವಿಳಂಗ – ಇವುಗಳನ್ನು ತಲಾ 160 ಗ್ರಾಂ ನಂತೆ ತೆಗೆದುಕೊಂಡು, 320 ಗ್ರಾಂ ಜೇನು ಮತ್ತು 4 ಕಿಲೊ ಗ್ರಾಂ ಬೆಲ್ಲ ಸೇರಿಸಿ ತುಪ್ಪ ಇರುವ ಮಡಿಕೆಗೆ ಹಾಕಿ ಬಾರ್ಲಿ ಕಾಳುಗಳ ಮಧ್ಯದಲ್ಲಿ ಒಂದು ತಿಂಗಳು ಹುದುಗಿಸಿಡಬೇಕು. ಈ ರೀತಿ ತಯಾರಾದ ಅರಿಷ್ಟ ಸೇವನೆಯಿಂದ ರಕ್ತಹೀನತೆ ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
ಅಧ್ಯಾಯ – 14
30. *ತ್ರಿಫಲಯಾ ಮೂಲಕಸ್ಟ ವೇಣೂನಾಂ ವರುಣಸ್ಯ ಚ |
ಆಗ್ನಿಮಂಥಸ್ಯ ಶಿಗ್ರೂಣಾಂ ಪತ್ರಾಣ್ಯಕ್ಷಂತಕಸ್ಯ ಚ ||
ಜಲೇನೋ ಕ್ಯಾಥ ಶೂಲಾರ್ತಂ ಸ್ವಭ್ಯಕ ಮವಗಾಯಯೇತ್ |
ಮೂಲವ್ಯಾಧಿಯಿಂದಾಗಿ ನೋವು ಇರುವ ರೋಗಿಗೆ ಮೊದಲು
ಚೆನ್ನಾಗಿ ಅಭ್ಯಂಗ ಮಾಡಿ ನಂತರ ತ್ರಿಫಲ ಮೂಲಂಗಿ ಬಿದುರು, ವರುಣ, ಅಗ್ನಿಮಂಥ, ನುಗ್ಗೆ, ಅಶ್ವಂತಕ (ಅರೆ) ಗಳ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವನ್ನು ಕುಡಿಸುಗೆ,
21. ಶಿರಿಷ ಬೀಜಂ ಕುತ್ತಂ ಚ ಪಿಪ್ಪಲ್ಯಃ ಸೈಂಧವ ಗುಡಃ |
ಆರ್ಕ ಕ್ಷೀರಂ ಸುಧಾಕ್ಷೀರಂ ತ್ರಿಫಲಾ ಚ ಪ್ರಲೇಪನಮ್
ಶಿರೀಷ ಬೀಜ, ಕೋಷ್ಠ, ಹಿಪ್ಪಲಿ, ಸೈಂಧವ ಲವಣ, ಬೆಲ್ಲ ಮತ್ತು ತ್ರಿಫಲಾ ವನ್ನು ತೆಗೆದುಕೊಂಡು ಎಕ್ಕದ ಹಾಲು ಮತ್ತು ಕಳ್ಳಿ ಹಾಲಿನೊಡನೆ ಕಲಸಿ ಮೂಲಕ್ಕೆ (Piles) ಲೇಪ ಮಾಡಬೇಕು.
22. ಗೋ ಮೂತ್ರಾಧ್ಯುಷಿತಾಂ ದದ್ಯಾತ್ ಸುಗುಡಾಂ ವಾ ಹರೀತಕೀಮ್ |
*ಹರೀತಕೀಂ ತಕ್ರಯುತಾಂ ತ್ರಿಫಲಾಂ ವಾ ಪ್ರಯೋಜಯೇತ್ ||
ಗೋಮೂತ್ರದಲ್ಲಿ ನೆನೆಯಿಟ್ಟ ಅಥವಾ ಬೆಲ್ಲದೊಡನೆ ಮಿಶ್ರಣ ಮಾಡಿದ ಅಳಲೆ ಕಾಯಿಯನ್ನು ಸೇವಿಸಲು ಕೊಡಬೇಕು ಅಥವಾ ಅಳಲೆ ಕಾಯಿ ಮತ್ತು ತ್ರಿಫಾಲ ಚೂರ್ಣವನ್ನು ಮಜ್ಜಿಗೆಯೊಡನೆ ಸೇವಿಸಲು ಕೊಟ್ಟರೆ ಮೂಲ ನಿವಾರಣೆಯಾಗುತ್ತದೆ.
23. ದಂತೀ ಚಿತ್ರಕ ಮೂಲಾ ಮುಭಯೋ ಪಂಚಮೂಲಯೋ । *ಭಾಗಾನ್ ಪಲಾಂಶಾನಾ ಪೋಥ್ಯ ಜಲದ್ರೋಣಿ ವಿಪಾಚಯೇತ್ ॥
ತ್ರಿಫಲಂ ತ್ರಿಫಲಾಯಶ್ಚ ದಲಾನಂ ತತ್ರ ದಾಪಯೇತ್
ದಂತಿಮೂಲ, ಚಿತ್ರಮೂಲ, ದಶಮೂಲ ಮತ್ತು ಬೀಜ ತೆಗೆದ ತ್ರಿಫಲ ಮತ್ತು ಬೆಲ್ಲ ಉಪಯೋಗಿಸಿ ತಯಾರಿಸಿದ ದಂತ್ಯಾರಿಷ್ಟವನ್ನು ಪ್ರತಿದಿನ ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
*ಅಧ್ಯಾಯ – 15
ತೂಷಣಾದಿ ಘೃತ :
24. *ತೂಷಣ ತ್ರಿಫಲಾಕಲ್ವೇ ಬಿಲ್ವಮಾತ್ರೆ ಗುಡಾತ್ಪಲೇ |
25. ಸರ್ಪಿಮೊಪ್ಪಪಲ ಪಕ್ಷ್ವಾ ಮಾತ್ರಾಂ ಮಂದಾನಲಃ ಪಬೇತ್
ತ್ರಿಕಟು, ತ್ರಿಫಲ ಚೂರ್ಣ, ತಲಾ 4 ತೊಲ, ಬೆಲ್ಲ 4 ತೊಲ, 128 ತೊಲ ನೀರ ಮತ್ತು 32 ತೊಲ ತುಪ್ಪ ಸೇರಿಸಿ ತಯಾರಿಸಿದ ಘೃತ ಪಾಕವನ್ನು ಅಗ್ನಿಮಾಂದ್ಯ (ಮಂದ ಜೀರ್ಣಶಕ್ತಿ ಇರುವವರು ಸೇವಿಸಬೇಕು.
25. *ಭಲ್ಲಾತಕಂ ತ್ರಿಕಟುಕಂ ತ್ರಿಫಲಾಂ ಲವಣತ್ರಯಮ್ |
26. ಅಂತರ್ಧೂಮಂ ದ್ವಿಪಲಿಕಂ ಗೋಪುರೀಷಾಗ್ನಿನಾ ದಹೇತ್ ॥
ಸಾಕ್ಷರಃ ಸರ್ಪಿಷಾ ಪೀತೋ ಭೋಜೇ ವಾಹ್ಯವಚಾರಿತಃ | ಹೃತ್ತಾಂಡು ಗ್ರಹಿಣೀ ರೋಗ ಗುಲ್ಲೋ ದಾವರ್ತ ಶೂಲಾನುತ್ ॥
ಗೇರುಬೀಜ, ತ್ರಿಕಟು, ತ್ರಿಫಲ, ಸೈಂಧವ ಲವಣ, ಸೌವರ್ಚಲ ಮತ್ತು ಬಿಡಲವಣ ಇವುಗಳನ್ನು 8-8 ತೊಲೆ ತೆಗೆದುಕೊಂಡು ಹೊಗೆ ಹೊರಗೆ ಹೋಗದಂತೆ ಕುಳ್ಳಿನ ಬೆಂಕಿಯಲ್ಲಿ ಸುಡಬೇಕು. ಈ ಕ್ಷಾರವನ್ನು ತುಪ್ಪದೊಡನೆ ಅಥವಾ ಆಹಾರದೊಡನೆ ಸೇವಿಸಿದರೆ ಹೃದ್ರೋಗ, ಪಾಂಡುರೋಗ, ಕಾಮಾಲೆ, ಗುಲ್ಮ (Spleen) ಮತ್ತು ಉದಾವರ್ತದ ನೋವು ನಿವಾರಣೆಯಾಗುತ್ತದೆ.
ತ್ರಿಫಲಾದಿ ಕ್ಷಾರ
26. ತ್ರಿಫಲಾಂ ಕಟಭೀಂ ಚಂ ಬಿಲ್ವಮಧ್ಯಮಯೋರಜಃ|
ರೋಹಿಣೀಂ ಕಟುಕಾಂ ಮುಸ್ತಂ ಕುಪ್ಪಂ ಪಾಠಾಞ್ಚ ಹಿಙ್ಗು ಚ
ಮಧುಕಂ ಮುಷ್ಕಕಯವಕ್ಷಾರೌ ತ್ರಿಕಟುಕಂ ವಚಾಮ್ 1
ವಿಡಙ್ಗಂ ಪಿಪ್ಪಲೀಮೂಲಂ ಸ್ವರ್ಜಿಕಾ ನಿಂಬಚಿತ್ರಕೌ ॥
ಮೂರ್ವಾಜಮೋದೇಂದ್ರಯವಗುಡೂಚೀ ದೇವದಾರು ಚ | ಕಾರ್ಷಿಕಂ ಲವಣಾನಾಞ್ಚ ಪಞ್ಞಾನಾಂ ಪಲಿಕಾನ್ ಪೃಥಕ್ ॥
ಭಾಗಾನ್ದಧ್ನಿ ತ್ರಿಕುಡವೇ ಧೃತತೈಲೇನ ಮೂರ್ಚ್ಛಿತಮ್ |
ಅಂತರ್ಧೂಮಂ ಶನೈರ್ದಗ್ಧ್ವಾ ತಸ್ಮಾತ್ಪಾಣಿತಲಂ ಪಿಬೇತ್
ಸರ್ಪಿಷಾ ಕಫವಾತಾರ್ಶೋಗ್ರಹಣೀಪಾಂಡುರೋಗವಾನ್ | ಪ್ಲೀಹಮೂತ್ರಗ್ರಹಶ್ವಾಸಹಿಕ್ಕಾಕಾಸಕ್ರಿಮಿಜ್ಜರಾನ್ ||
*ಶೋಷಾತಿಸಾರಶ್ಚಯಥುಪ್ರಮೇಹಾನ್ ಹೃದ್ಧಹಾಂಸ್ತಥಾ । ಹನ್ಯಾತ್ಸರ್ವವಿಷಾಣಾಞ್ಚ ಕ್ಷಾರೋsಯಂ ಶಮನೋ ವರಃ ||
ಜೀರ್ಣೆ ರಸ್ತೆರ್ವಾ ಮಧುರೈರಶ್ನೀಯಾತ್ಪಯಸಾ ಸಹ |
ಏಷ ಕ್ಲಾರೋ ಮಹಾವೀರ್ಯ! ಕೃಷ್ಣಾತ್ರೇಯೇಣ ಭಾಷಿತಃ ॥
ತ್ರಿಫಲ, ಕಟಭೀ (ಕ್ಷುದ್ರ ಶಿರೀಷ ಗಿಡ), ಚವಕ, ಬಿಲ್ವದ ತಿಳಿಲು, ಲೋಹ ಭಸ್ಮ ಕಟುಕ ರೋಹಿಣಿ, ಜೇಕು, ಕೋಷ್ಠ, ಅಗಳಶುಂಠಿ, ಇಂಗು, ಜೇಷ್ಠಮಧು, ಮುಳ್ಳು ಮುತ್ತುಗ ಕ್ಷಾರ, ಜನಖಾರ, ತ್ರಿಕಟು, ಬಜೆ, ವಾಯುವಿಡಂಗ, ಮೋಡಿ, ಸಜ್ಜೀಖಾರ, ಬೇವು ಚಿತ್ರಮೂಲ, ಮೂರ್ವಾ (ಹೊಗೊರಟಿಗೆ), ಅಜಮೋದ, ಇಂದ್ರಜವ, ಅಮೃತಬಳ್ಳಿ ದೇವದಾರು – ಇವುಗಳನ್ನು 1-1 ತೊಲ, 5 ಬಗೆಯ ಲವಣ 4-4 ತೊಲ ತೆಗೆದುಕೊಂಡು 96 ತೊಲ ಮೊಸರಿನಲ್ಲಿ ಹಾಕಿ ಘೃತ ತೈಲವನ್ನು ಕೂಡಿಸಿ ಅಂತರ್ಧಮವಿದಿಯಿಂದ ಸಾವಾಕಾಶವಾಗಿ ಸುಟ್ಟು ತಯಾರಿಸಿದ ಕ್ಷಾರ (ಭಸ್ಮ) ವನ್ನು ತುಪ್ಪದೊಡನೆ ಸೇವಿಸಬೇಕು. ಈ ಕ್ಷಾರದ ಸೇವನೆಯಿಂದ ಕಫ ವಾತ, ಮೂಲವ್ಯಾಧಿ, ಬೇಧಿ, ಪಾಂಡುರೋಗ, ಹಪ್ಲೀ ಮೂತ್ರಾಘಾತ, ಕೆಮ್ಮು, ಜ್ವರ, ಬಾವು, ಪ್ರಮೇಹ ಮತ್ತು ಹೃದ್ರೋಗ ವಾಸಿಯಾಗುತ್ತದೆ. ಇದು ಜೀರ್ಣವಾದ ನಂತರ ಹಾಲು-ಅನ್ನ ಸೇವಿಸಬೇಕು. ಈ ಕ್ಷಾರ ತಯಾರಿಸುವ ವಿಧಾನವನು ಕೃಷ್ಣಾತ್ರೇಯರು ಹೇಳಿದ್ದಾರೆ.