ಅ,ಆ,ಇ,ಈ,ಉ,ಊ,ಋ,ಋೂ,ಲು, ಲೂ,ಎ,ಏ,ಐ,ಒ,ಓ,ಔ,ಅಂ, ಆಃ ಇವು ಗರುಡವರ್ಗ ಪೂರ್ವ ದಿಕ್ಕು, ಕ, ಖ, ಗ, ಘ. ಜ ಇವು ಮಾರ್ಜಾಲ ವರ್ಗ- ಅಗ್ನಿ ದಿಕ್ಕು, ಚ, ಛ, ಜ, ಝ, ಞ ಇವು ಸಿಂಹವರ್ಗ- ದಕ್ಷಿಣದಿಕ್ಕು- ಟ, ಠ, ಡ, ಢ, ಣ ಇವು ಶ್ವಾನವರ್ಗ ನೈಋತ್ಯ ದಿಕ್ಕು ತ, ಥ, ದ, ಧ, ನ ಇವು ಸರ್ಪವರ್ಗ ಪಶ್ಚಿಮದಿಕ್ಕು ಪ, ಫ, ಬ, ಭ, ಮ ಇವು ಮೂಷಕವರ್ಗ ವಾಯವ್ಯ ದಿಕ್ಕು, ಯ, ರ, ಲ, ವ ಇವು ಗಜವರ್ಗ ಕುಬೇರ ದಿಕ್ಕು, ಶ, ಷ, ಸ, ಹ, ಳ ಕ್ಷ ಜ್ಞ ಇವು ಚಿಗರೆ (ಮೃಗ) ವರ್ಗ- ಈಶಾನ್ಯ ದಿಕ್ಕು. ಹೀಗೆ ಪ್ರತಿಯೊಬ್ಬರ ಹೆಸರಿನ ಮೊದಲಕ್ಷರ ಯಾವ ವರ್ಗ ಹಾಗೂ ಯಾವ ದಿಕ್ಕು ಆಗುತ್ತದೆಯೋ ಮತ್ತು ಪ್ರಶ್ನೆ ಕೇಳುವಾತನು ಯಾವ ದಿಕ್ಕಿನಲ್ಲಿ ಭೂಮಿಯನ್ನು ತೆಗೆದುಕೊಳ್ಳುತ್ತಾನೋ ಅದನ್ನು ಮೊದಲು ತಿಳಿದುಕೊಂಡು, ಭೂಮಿ ಇರುವ ದಿಕ್ಕು ಯಾವ ವರ್ಗವಾಗುತ್ತದೆಯೋ ಅದನ್ನು ತಿಳಿದು ಕೊಳ್ಳಬೇಕು. ಆ ಎರಡೂ ವರ್ಗ ಪ್ರಾಣಿಗಳು ಶತೃತ್ವವಾದರೆ ಭೂಮಿಯನ್ನು ತೆಗೆದುಕೊಳ್ಳ ಬಾರದು. ಮಿತ್ರತ್ವವಾದರೆ ಭೂಮಿಯನ್ನು ತೆಗೆದುಕೊಳ್ಳಬಹುದು. ಭೂಮಿಯನ್ನು ತೆಗೆದು ಕೊಳ್ಳುವವರು ಇದನ್ನು ಮುಖ್ಯವಾಗಿ ನೋಡಿ, ಸಾಲಾವಳಿ ಬರುವ ಭೂಮಿಯನ್ನೇ ತೆಗೆದು ಕೊಳ್ಳಬೇಕು. ಅಂದರೆ ಸುಖವೂ, ಲಾಭವೂ ಆಗುವದು. ಹೀಗೆ ಯಾವದೇ ವ್ಯವಹಾರಕ್ಕೂ ಈ ರೀತಿ ಸಾಲಾವಳಿಯನ್ನು ನೋಡಬಹುದು.
ಗ್ರಾಮ ಸಾಲಾವಳಿ ನೋಡುವ ಕ್ರಮ :
ಗ್ರಾಮ ನಕ್ಷತ್ರದಿಂದ ತನ್ನ ನಾಮ ನಕ್ಷತ್ರದವರೆಗೆ ಎಣಿಸಿದರೆ ೫ ನಕ್ಷತ್ರ ಶಿರಸ್ಸಿನಲ್ಲಿಯೂ, ೨ ನಕ್ಷತ್ರ ಮುಖದಲ್ಲಿಯೂ, ೫ ನಕ್ಷತ್ರ ಉದರದಲ್ಲೂ, ೬ ನಕ್ಷತ್ರ ಎರಡೂ ಪಾದಗಳಲ್ಲಿಯೂ 1 ನಕ್ಷತ್ರದ ವೃಷ್ಠದಲ್ಲಿಯೂ ನಾಲ್ಕು ನಕ್ಷತ್ರಗಳು ನಾಭಿಯಲ್ಲಿಯೂ 2 ನಕ್ಷತ್ರ ಗುಹ್ಯದಲ್ಲಿಯೂ, ೨ ನಕ್ಷತ್ರ ಕೈಗಳಲ್ಲಿ ಹೀಗೆ ಎಣಿಸಬೇಕು. ಗ್ರಾಮ ನಕ್ಷತ್ರವು ತನ್ನ ಶಿರಸ್ಸಿನಲ್ಲಿ ಒಂದರೆ ಲಾಭವು ಸುಖವಾಗುವದು ಮುಖದಲ್ಲಿ ಬಂದರೆ ಧನನಾಶವು- ಹಾನಿಯು-ಕೇಡು, ಉದರದಲ್ಲಿ ಬಂದರೆ ಧನ-ಧಾನ್ಯಲಾಭವು ಪಾದದಲ್ಲಿ ಬಂದರೆ ದಾರಿದ್ರವು, ಪೃಷ್ಟದಲ್ಲಿ ಬಂದರೆ ಪ್ರಾಣ ಹಾನಿಯು, ನಾಭಿಯಲ್ಲಿ ಬಂದರೆ ಸಂಪದಭಿವೃದ್ಧಿಯು, ಗುಹ್ಯದಲ್ಲಿ ಬಂದರೆ ರೋಗ ಪೀಡೆಯು ಎಡ ಅಥವಾ ಬಲ ಹಸ್ತದಲ್ಲಿ ಬಂದರೆ ನಷ್ಟವು. ಈ ಪ್ರಕಾರ ನೋಡಿಕೊಂಡು ಸಾಲಾವಳಿ ಬಂದ ಗ್ರಾಮ, ಪಟ್ಟಣಗಳಲ್ಲಿ ವಾಸ ಮಾಡಿದರೆ ಸೌಖ್ಯವು ಸುಖವಾಗುವುದು.
ಅತ್ಯುಪಯುಕ್ತ ಕೆಲವು ಮುಹೂರ್ತಗಳು :
*ಬಾಣಂತಿಯು ಭಾವಿ, ಕೆರೆಯ (ಜಲ) ಗಂಗಾ ಪೂಜೆಗೆ ಮುಹೂರ್ತವು :
ಮೃಗಶಿರ, ಮೂಲ, ಪುನರ್ವಸು, ಪುಷ್ಯ, ಶ್ರವಣ, ಹಸ್ತ ಈ ನಕ್ಷತ್ರಗಳಲ್ಲಿಯೂ, ಬುಧ, ಗುರು, ಶುಕ್ರ, ಸೋಮವಾರಗಳಲ್ಲಿಯೂ ಬಾಣಂತಿಯು ಗಂಗಾ ಪೂಜೆಗೆ ಅಂದರೆ ಭಾವಿ-ಕೆರೆಯ ಪೂಜೆ ಮಾಡಿಕೊಂಡು ಬರಲಿಕ್ಕೆ ಉತ್ತಮ ಮುಹೂರ್ತವಾಗಿದೆ.
ಹೊಸ ಆಭರಣಗಳನ್ನು ಧರಿಸಲಿಕ್ಕೆ : ಅಶ್ವಿನಿ, ರೇವತಿ, ಧನಿಷ್ಠ, ಹಸ್ತ, ಚಿತ್ರ, ಸ್ವಾತಿ,
ಅನುರಾಧಾ ಈ ನಕ್ಷತ್ರಗಳಲ್ಲಿಯೂ ರವಿವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಸೋಮವಾರಗಳಲ್ಲಿಯೂ ಹೊಸ ಅಲಂಕಾರ ಅಭರಣಗಳನ್ನು ಧರಿಸಲಿಕ್ಕೆ ಉತ್ತಮ ಮುಹೂರ್ತಗಳಾಗಿವೆ.
*ಹೊಸ ವಸ್ತ್ರ ಧರಿಸಲಿಕ್ಕೆ : ರೋಹಿಣಿ, ಹಸ್ತ, ಚಿತ್ರ, ಸ್ವಾತಿ, ಅನುರಾಧಾ, ಅಶ್ವಿನಿ, ಉತ್ತರ, ಉತ್ತರಾಷಾಢ, ಉತ್ತರಾ ಭಾದ, ಪುನರ್ವಸು, ಪುಷ್ಯ, ರೇವತಿ, ಧನಿಷ್ಠ ಈ ನಕ್ಷತ್ರಗಳಿದ್ದ ಶುಭವಾರಗಳಲ್ಲಿ ಹೊಸ ವಸ್ತ್ರ ಭೂಷಣಗಳನ್ನು ಧರಿಸಲಿಕ್ಕೆ ಉತ್ತಮ ಮುಹೂರ್ತವಾಗಿದೆ.
ಕ್ಷೌರ ಮಾಡಿಸಿಕೊಳ್ಳಲಿಕ್ಕೆ : ರವಿವಾರ ಕ್ಷೌರ ಮಾಡಿಸಿಕೊಂಡರೆ ೧ ತಿಂಗಳ ಆಯುಷ್ಯ ಕಡಿಮೆಯಾಗುವದು ಸೋಮವಾರ ಕ್ಷೌರ ಮಾಡಿಸಿಕೊಂಡರೆ ಪಿ ತಿಂಗಳು ಆಯುಷ್ಯ ಹೆಚ್ಚಾಗುವದು. ಮಂಗಳವಾರ ಕ್ಷೌರ ಮಾಡಿಸಿಕೊಂಡರೆ ೮ ತಿಂಗಳು ಆಯುಷ್ಯ ನಾಶವು. ಬುಧವಾರ ಕ್ಷೌರ ಮಾಡಿಸಿಕೊಂಡರೆ ೫ ತಿಂಗಳು ಆಯುಷ್ಯ ಹೆಚ್ಚುವದು. ಗುರುವಾರ ಕ್ಷೌರ ಮಾಡಿಸಿಕೊಂಡರೆ ೧೦ ತಿಂಗಳು ಆಯುಷ್ಯ ಹೆಚ್ಚುವದು. ಶುಕ್ರವಾರ ಕ್ಷೌರ ಮಾಡಿಸಿಕೊಂಡರೆ ೧೧ ತಿಂಗಳುಗಳಷ್ಟು ಆಯುಷ್ಯ ವೃದ್ಧಿಯಾಗುವದು ಹಾಗೂ ಶನಿವಾರ ಮಾಡಿಸಿಕೊಂಡರೆ ೭ ತಿಂಗಳು ಆಯುಷ್ಯ ಕಡಿಮೆಯಾಗುವದೆಂದು ಗರ್ಗ, ಲಲ್ಲ, ನಾರದ, ಮುಂತಾದ ಮುನಿಶ್ರೇಷ್ಠರಿಂದ ಹೇಳಲ್ಪಟ್ಟಿದೆ. ಆದರೆ, ಭಾಸ್ಕರ ಕ್ಷೇತ್ರ, ಗಂಗಾಸ್ನಾನ, ಯಜ್ಞ, ಆಜ್ಞಾದಾನ. ತಂದೆ ತಾಯಿಗಳ ಮರಣ, ಗುರುಗಳಾಜ್ಞೆ ಇತ್ಯಾದಿ ಪ್ರಸಂಗಗಳಲ್ಲಿ ಮಾತ್ರ ಸರ್ವ ಕಾಲದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಶುಭವು. ರಾಜ ಸೇವಕರು ಸೈನಿಕರು ಮುಂತಾದ ರಾಜ ಕಾರ್ಯನಿರತ ಪುರುಷರು ಸರ್ವಕಾಲದಲ್ಲಿಯೂ ಕ್ಷೌರ ಮಾಡಿಸಿಕೊಳ್ಳಬಹುದೆಂದು ಬೃಹಸ್ಪತಿ ಕೃತಿಯಲ್ಲಿ ಹೇಳಲಾಗಿದೆ.
ಔಷಧ ತೆಗೆದುಕೊಳ್ಳುವದಕ್ಕೆ : ರೇವತಿ , ಅಶ್ವಿನಿ, ಪುನ, ಪುಷ್ಯ, ಹಸ್ತ, ಚಿತ್ರ, ಸ್ವಾತಿ,ಶ್ರವಣ, ಧನಿಷ್ಟ ಶತತಾರ, ಅನುರಾಧ, ಮೃಗ ಮೂಲ ಈ ೧೩ ನಕ್ಷತ್ರಗಳಲ್ಲಿಯೂ ರವಿವಾರ, ಸೋಮವಾರ ಹಾಗೂ ಗುರುವಾರಗಳಲ್ಲಿಯೂ ಔಷಧ ಸೇವನೆಯ ಆರಂಭಕ್ಕೆ ಶುಭವು.
ಅಂದರೆ ರೋಗವು ಬೇಗನೆ ಗುಣಮುಖವಾಗುತ್ತದೆಯೆಂದು ಅರ್ಥ.
ಎಲ್ಲ ಕಾರ್ಯಗಳಿಗೂ ಸಾಧಾರಣ ದಿನಶುದ್ದಿ : ಕೃಷ್ಣಪಕ್ಷದ ೧೩-೧೪-೩೦
ತಿಥಿಗಳನ್ನು ಶುಕ್ಲಪಕ್ಷದ ೧ ತಿಥಿಯನ್ನೂ ಭದ್ರವಾಕರಣ, ಪರಿಘ ಪೂರ್ವಾರ್ಧಗಳನ್ನೂ ಶನಿವಾರ, ರವಿವಾರ ಹಾಗೂ ಮಂಗಳವಾರ ಇತ್ಯಾದಿಗಳನ್ನು ಬಿಟ್ಟು ಶುಭಕಾರ್ಯಗಳನ್ನು ಮಾಡತಕ್ಕದ್ದು. ಶುದ್ಧದಲ್ಲಿ ಚಂದ್ರ,ಬಲವೂ ಬಹುಳದಲ್ಲಿ ತಾರಾಬಲವೂ ಮುಖ್ಯವಾಗಿ ಇರಬೇಕಾಗುತ್ತದೆ.
*ಜ್ಯೋತಿಷ್ಯ ಫಲ ದರ್ಪಣ ಎಂಬ ಮುಹೂರ್ತ ಮಾರ್ತಾಂಡ :
ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಹೂರ್ತ ವಿಚಾರವು ಅತ್ಯಂತ ಮಹತ್ವದ ವಿಷಯವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಜೀವಾಳವೇ ಮುಹೂರ್ತ ವಿಷಯ ವಿಚಾರವಾಗಿದೆ. ಸುಮುಹೂರ್ತದಲ್ಲಿ ಕೈಕೊಳ್ಳುವ ಕಾರ್ಯಗಳಲ್ಲಿ ತೀವ್ರ ಯಶಸ್ವಿಯಾಗುತ್ತವೆಂಬುದು ಪುರಾತನ ಕಾಲದಿಂದಲೂ ಸುಪ್ರಸಿದ್ದವಿದೆ. ಒಕ್ಕಲಿಗರಿಗೆ ವ್ಯಾಪಾರಸ್ಥರಿಗೆ, ಪ್ರಾಪಂಚಿಕರಿಗೆ ಈ ಮುಹೂರ್ತ ವಿಚಾರ ಜ್ಞಾನವು ಕಾಮಧೇನು-ಕಲ್ಪವೃಕ್ಷವಿದ್ದಂತೆ. ಜ್ಯೋತಿಷ್ಯಶಾಸ್ತ್ರವು ಧರ್ಮಶಾಸ್ತ್ರದ ಒಂದು ಭಾಗವೇ ಆಗಿದೆ ಎಂಬುದು ಸರ್ವ ಸಮ್ಮತ ಲೋಕೋಪಕಾರಕ್ಕಾಗಿ ಯೆಂದೇ ಈ ಗ್ರಂಥವನ್ನು ನಾವು ಪರಿಶೋಧಿಸಿ, ಸಂಸ್ಕೃತದಲ್ಲಿದ್ದ ಈ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿದ್ದೇವೆ ಇಂದೇ ಈಗಲೇ ಈ ಗ್ರಂಥವನ್ನು ತರಿಸಿನೋಡಿರಿ.