ಮನೆ ಆರೋಗ್ಯ ತ್ರಿಫಲ

ತ್ರಿಫಲ

0

 ಅಧ್ಯಾಯ – 16

 ಹರಿದ್ರಾದಿ ಘೃತ  :

27. ಹರಿದ್ರಾತ್ರಿಫಲಾ *ನಿಂಬಬಲಾ ಮಧುಕಸಾದಿತಮ್ |

 ಸರಂ ಮಹಿಷಂ ಸರ್ಪಿಃ ಕಾಮಾಲಾಹರ ಮುತ್ತಮಮ್ ||

ಅರಿಸಿನ, ತ್ರಿಫಲ, ಬೇವು, ಬಲಾ (ಕಳಂಗಡಲೆ), ಜೇಷ್ಠಮಧು ಇವುಗಳ ಕಲ್ಕವನ್ನು 32 ತೊಲ ತೆಗೆದುಕೊಂಡು 512 ತೊಲ ಹಾಲಿನಲ್ಲಿ ಹಾಕಿ, 128 ತೊಲ ಎಮ್ಮೆಯ ತುಪ್ಪ ಸೇರಿಸಿ ತಯಾರಿಸಿದ ಘೃತವನ್ನು ಹರಿದ್ರಾದಿ ಘೃತ ಎಂದು ಕರೆಯುತ್ತಾರೆ. ಇದರ ಸೇವಿಸುವುದರಿಂದ ಕಾಮಾಲೆ ರೋಗ ಗುಣವಾಗುತ್ತದೆ.

 ನವಾಯಸ ಚೂರ್ಣ

28. ಶೂಷಣ ತ್ರಿಫಲಾ ಮುಸ್ತವಿಡಙ್ಗ ಚಿತ್ರಿಕಾಃ ಸಮಾಃ | ನವಾಯೋರಜಸೋ ಭಾಗಾಸ್ತ ಚೂರ್ಣ೦ ಮಧುಸರ್ಪಿಪಾ 1 *ಭಕ್ಷಯೇತ್ ಪಾಂಡು ಹೃದ್ರೋಗ ಕುಷ್ಕಾರ್ಶ ಕಾಮಲಾದಹಮ್

 ಶುಂಠಿ,ಮೆಣಸು,ಹಿಪ್ಪಲಿ, ತ್ರಿಫಲ ಜೇಕಿನ ಗೆಡ್ಡೆ ವಾಯುವಿಂಗಡಂಗ ಇವುಗಳ ಸಮ ತೂಕಕ್ಕೆ ಲೋಹಭಸ್ಮ ಸೇರಿಸಿ ಚೂರ್ಣ ಮಾಡಿ ಜೇನು ಅಥವಾ ತುಪ್ಪದೊಡ ಸೇವಿಸುವುದರಿಂದ ಪಾಂಡುರೋಗ, ಹೃದ್ರೋಗ, ಕುಷ್ಠ, ಮೂಲವ್ಯಾಧಿ ಮುಂತಾದವುಗಳ ಗುಣವಾಗುತ್ತವೆ.

 ಮಂಡೂರ ವಟಕ

 ತ್ರಿಫಲಾಂ ತೂಷಣಂ ಮುಸ್ತಂ ವಿಡಙ್ಗಂ ಚಿನ್ನ ಚಿತ್ರಕೌ ||

 ದಾರ್ವಿ ತ್ವಚ್ ಮಾಕ್ಷಿಕೋ ಧಾತುರ್ಗ್ರಂಥಿಕೋ ದೇವದಾರು ಚ |

 ಏಷಾಂ ದ್ವಿಪಲಿಕಾನ್ ಭಾಗಾಂ  ಶ್ಚೂರ್ಣಂ ಕುರ್ಯಾತ್ ಪೃಥಕ್ ಪೃಥಕ್ ||

 ಮಂಡೂರಂ ದ್ವಿಗುಣಂ ಚೂರ್ಣಾಚ್ಚುದ್ಧಮಞ್ಚ ನಸನ್ನಿಭಮ್ । ಗೋಮೂತ್ತೇಷ್ಟಗುಣೇ ಪಕ್ಷ್ವಾ ತಚ್ಚೂರ್ಣ೦ ಪ್ರಕ್ಷಿಪೇತ್ ಪುನಃ ||

 ಉದುಂಬರ ಸಮಾನ್ ಕುರ್ಯಾತ್ ವಟಕಾಂಸ್ತಾನ್ ಯಥಾಗ್ನಿನಾ ।

 ಉಪಯು ಞತ್ತೀತ ತಕ್ರೇಣ ಜೀರ್ಣೆ ಸಾತ್ಪಞ್ಚ ಭೋಜನಮ್ ||

 ಮಂಡೂರವಟಿಕಾ ಹ್ಯೇತೇ ಪ್ರಾಣದಾ : ಪಾಂಡುರೋಗಿಣಾಮ್ | ಕುಪ್ಪಾನೈಜರಕಂ ಶೋಧ *ಮೂರುಸ್ತಂಭಂ ಕಫಮಯಾನ್||

 ಆರ್ಶಾಂಸಿ ಕಮಲಾಂ ಮೇಹಂ ಪೀಹಾನಂ ಶಮಯಂತಿ ಚ ||

ತ್ರಿಫಲ, ತ್ರಿಕಟು ಜೇಕಿನ ಗೆಡ್ಡೆ (ಮುಸ್ತ) ವಾಯು ವಿಳಂಗ, ಚವಕ, ಚಿತ್ರಕ, ಮರದರಿಸಿನ ತೊಗಟೆ, ಸ್ವರ್ಣಮಾಕ್ಷಿಕ, ಮೋಡಿ, ದೇವದಾರು, ಇವುಗಳನ್ನು ತಲಾ 2 ತೊಲ ತೆಗೆದುಕೊಂಡು ಪ್ರತ್ಯೇಕವಾಗಿ ಚೂರ್ಣ ಮಾಡಿ. ಇದರ 2 ಭಾಗ ಮಂಡೂರವನ್ನು ತೆಗೆದುಕೊಂಡು 8 ಭಾಗ  ಗೋಮೂತ್ರದಲ್ಲಿ ಕುದಿಸಿ ಈ ಮೊದಲು ತಯಾರಿಸಿಕೊಂಡ ಚೂರ್ಣವನ್ನು ಹಾಕಿ ಕಲಸಿ ಅತ್ರಿಯ ಹಣ್ಣಿನ ಗಾತ್ರದ ಗೋಲಿಗಳನ್ನು / ಪಟಗಳನ್ನು ಮಾಡಿ ಮಜ್ಜಿಗೆಯೊಡನೆ ಸೇವಿಸಬೇಕ ನಂತರ ಆಹಾರ ಸೇವಿಸಬೇಕು. ಈ ಮಂಡೂರ ವಟಿ ಪಾಂಡು ರೋಗಿಗಳಿಗೆ ಪ್ರಾಣವನ್ನು

ಕೊಡುತ್ತದೆ. ಕುಷ, ಅಜೀರ್ಣ, ಬಾವು, ಊರುಸ್ವಂಬ (ತೊಡೆಗಳ ಪಾರ್ಶ್ವ ವಾಯು), ಕಫ ರೋಗ, ಮೂಲವ್ಯಾಧಿ, ಪ್ರಮೇಹ, ಪೀಹ ರೋಗಗಳನ್ನು ವಾಸಿ ಮಾಡುತ್ತದೆ.

 30.ತ್ರಿಪಲಾಯಾಸ್ತ್ರಯೋಭಾಗಾಗಾಸ್ವಯಸ್ವಿ ಕಟುಕಶ್ಯ ಚ II

 ಭಾಗಶ್ಚಿತ್ರಮೂಲಸ್ಕ ವಿಡಬಾನಾಂ ತಥೈವಚ ।।

 ಪಞ್ಞಶ್ಚ ಜತುನೋ ಭಾಗಾಸ್ಥಾಥಾ ರೂಪ ಮಲಸ್ಯ ಚ ||

 *ಮಾಕ್ಷಿಸ್ಯ ಚ ಶುದ್ಧಸ್ಯ ಲೌಹಸ್ಯ ರಜಸಸ್ತಥಾ ।

 ಅಷ್ಟೇಬಾಗಾಃ ಸಿತಾಯಾಶ್ಚ ತತ್‌ಸರ್ವಂ ಸೂಕ್ಷ್ಮ ಚೂರ್ಣಿತಮ್ ||

 ಮಾಕ್ಷಿಕೇಣಾಪುತಂ ಸ್ಥಾಪಮಾಯಸೇ ಭಾಜನೇ ಶುಭೇ ।

 ಉದುಂಬರ ಸಮಾಂ ಮಾತ್ರಾಂ ತತಃ ಖಾದೇದ್ ಯಥಾಗ್ನಿನಾ ||

 ದಿನೇ*ದಿನೇ ಪ್ರಯೋಗೇಣ ಜೀರ್ಣೆ ಭೋಜ್ಯಂ ಯಥೇಷ್ಠಿತಂ । ವರ್ಜಯಿತ್ವಾ ಕುಲತ್ಥಾಂಶ್ಚ ಕಾಕಮಾಟೀಂ ಕಪೋತಕಾನ್ ||

 ಯೋಗರಾಜ ಇತಿ ಖ್ಯಾತೋ ಯೋಗೋsಯಮಮೃತೋಪಮಃ । ರಸಾಯನಮಿದಂ ಶ್ರೇಷ್ಠ ||ಸರ್ವರೋಗಹರಂ *ಶಿವಮ್ ||

 ಪಾಂಡುರೋಗಂ ವಿಷಂ ಕಾಸಂ ಯಕ್ಷಾಣಂ *ವಿಷಮಜ್ವರಮ್ ।

 ಕುಷ್ಠಾನ್ಯ ಜರಕಂ ಮೇಹಂ ಶ್ವಾಸಂ ಹಿಕ್ಕಾಮರೋಚಮ್ ||

*

 ವಿಶೇಷಾದ್ದಂತ್ಯಪಸ್ಕಾರ ಕಮಲಾಂ ಗುದಚೌ ಗುದಜಾನಿ ಚ ||

ತ್ರಿಫಲ 3 ಭಾಗ, ತ್ರಿಕಟು 3 ಭಾಗ, ಚಿತ್ರಮೂಲ 1 ಭಾಗ, ವಾಯುವಿಳಂಗ 1 ಭಾಗ, ಶಿಲಾಜಿತು 5 ಭಾಗ, ರೂಪ್ಯಮೂಲ 5 ಭಾಗ, ಶುದ್ಧ ಸುವರ್ಣ ಮಾಕ್ಷಿಕ 5 ಭಾಗ, ಲೋಹ ಭಾಗ, ಕಲ್ಲು ಸಕ್ಕರೆ 8 ಭಾಗ – ಇವುಗಳನ್ನು ಚೂರ್ಣ ಮಾಡಿ ಜೇನಿನಲ್ಲಿ ಕಲಸಿ  ಸ್ವಚ್ಛವಾದ ಕಬ್ಬಿಣದ ಕೊಡದಲ್ಲಿ ಇಡಬೇಕು. ಅತ್ತಿಕಾಯಿಯ ಪ್ರಮಾಣದ ಔಷಧಿಯನ್ನು ಪ್ರತಿದಿನ ಸೇವಿಸಬೇಕು. ಜೀರ್ಣವಾದ ನಂತರ ಊಟ ಮಾಡಬಹುದು. ಆದರೆ ಹುರಳಿಕಾಳು, ಕಮಾಚಿ (ಕಾಚಿ ಸೊಪ್ಪು) ಮತ್ತು ಪಾರಿವಾಳದ ಮಾಂಸವನ್ನು ಸೇವಿಸಬಾರದು. ಅಮೃತ ಸಮಾನವಾದ ಈ ಔಷದ ಯೋಗರಾಜವೆಂದು ಪ್ರಸಿದ್ದವಾಗಿದೆ. ಇದು ಶ್ರೇಷ್ಠ ರಸಾಯನವೂ ಮತ್ತು ಮಾಗಳಕರವಾಗಿದೆ. ಈ ಔಷಧೀಯ ಸೇವನೆಯಿಂದ ಪಾಂಡುರೋಗ, ವಿಷ, ಕೆಮ್ಮ, ಕ್ಷಯ, ವಿಷಮ ಜ್ವರ, ಕುಷ್ಠ, ಅಗ್ನಿಮಾಂದ್ಯ, ಪ್ರಮೇಹ, ಶ್ವಾಸ, ಬಿಕ್ಕು, ಅಪಸ್ಮಾರ ಇಲ್ಲ ಮೂಲತ್ಯಾಧಿ ಗುಣವಾಗುತ್ತದೆ.