ಬಳ್ಳಾರಿ: ಬಾಣಂತಿಯರ ಸಾವು ಪ್ರಕರಣ ಮತ್ತಷ್ಟು ಕಾವು ಪಡೆದಿದೆ. ಆರೋಗ್ಯ ಇಲಾಖೆ, ಸರ್ಕಾರದ ವಿರುದ್ಧ ಮಾಜಿ ಸಚಿವ ರಾಮುಲು ಧರಣಿ, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಶನಿವಾರ (ಡಿ.07) ಬಳ್ಳಾರಿ ಜಿಲ್ಲಾಸ್ಪತ್ರೆ ಮುಂದೆ ರಾಮುಲು ನೇತೃತ್ವದಲ್ಲಿ ಧರಣಿ ನಡೆದಿದೆ. ರಾಜ್ಯ ಸರ್ಕಾರ ವಿರುದ್ಧ ರಾಮುಲು ಉಪವಾಸ ಸತ್ಯಾಗ್ರಹ ಕೈಗೊಂಡಿದೆ.
ಮೃತ ಕುಟುಂಬಕ್ಕೆ ಸಚಿವರು ಭೇಟಿ ಮಾಡುತ್ತಿಲ್ಲ, ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರ ನೇರ ಕಾರಣ. ಸಾವಿಗೆ ಕಾರಣ ಕೊಡಬೇಕು. ಒಂದೇ ತಿಂಗಳಲ್ಲಿ ಐದು ಜನ ಬಾಣಂತಿಯರ ಸಾವಾಗಿದೆ. ಬೆಳಗಾವಿ ಅಧಿವೇಶಕ್ಕಾಗಿ ಆರೋಗ್ಯ ಸಚಿವರು ಬಳ್ಳಾರಿಗೆ ಬರುತ್ತಿದ್ದಾರೆ. ಸದನದಲ್ಲಿ ಉತ್ತರ ನೀಡಲು ಇಂದು ಜಿಲ್ಲಾಸ್ಪತ್ರೆ ನಾಮಾಕಾವಸ್ಥೆ ಭೇಟಿ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಬೇಕಿತ್ತು ಎಂದು ಆಗ್ರಹಿಸಿದರು.