ಮನೆ ರಾಜ್ಯ ಬಾವಿಯಲ್ಲಿ ಚಂದ್ರ:3 ಮತ್ತು 4ನೇ ತರಗತಿಗೂ ಒಂದೇ ಪದ್ಯ

ಬಾವಿಯಲ್ಲಿ ಚಂದ್ರ:3 ಮತ್ತು 4ನೇ ತರಗತಿಗೂ ಒಂದೇ ಪದ್ಯ

0

ಬೆಂಗಳೂರು(Bengaluru): ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿವಾದ ರಾಜ್ಯದಲ್ಲಿ ಹಲವಾರು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದ್ದು, ಮೂರು ಮತ್ತು ನಾಲ್ಕನೇ ತರಗತಿಗೆ ಒಂದೇ ಪದ್ಯವನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.

ಯುವ ಲೇಖಕ ರೋಹಿತ್ ಚಕ್ರತೀರ್ಥ  ನೇತೃತ್ವದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಬಿ.ಎಂ. ಶರ್ಮಾ  ಅವರು ಬರೆದಿರುವ ‘ಬಾವಿಯಲ್ಲಿ ಚಂದ್ರ’ ಎಂಬ ಕವನ 3 ಹಾಗೂ 4ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಮುದ್ರಿಸಿದರು ಗೊಂದಲಕ್ಕೆ ಕಾರಣವಾಗಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಈ ಹಿಂದಿನ‌ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಈ ಪದ್ಯವನ್ನು ಸೇರಿಸಿತ್ತು. ಬಳಿಕ ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಅದೇ ಪದ್ಯವನ್ನು ಮುಂದುವರೆಸಿದೆ. ಅಲ್ಲದೇ 4ನೇ ತರಗತಿಯ ಸವಿಕನ್ನಡ ಪುಸ್ತಕದಲ್ಲಿಯೂ ಇದೇ ಪದ್ಯ ಸೇರಿಸಲಾಗಿದೆ. ಇದರಿಂದ ಪಾಠ ಮಾಡುವ ಶಿಕ್ಷಕರಿಗೂ‌ ಗೊಂದಲ ಉಂಟಾಗಿದೆ.

ಬಸವಣ್ಣ, ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂಬಂಧ  ಹಲವೆಡೆ ಪ್ರತಿಭಟನೆಯೂ ನಡೆದಿತ್ತು.

ಸಮಿತಿ ವಿಸರ್ಜಿಸಿ ಆದೇಶಿಸಿದ ಸರ್ಕಾರ

ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ರೋಹಿತ್ ಚಕ್ರತೀರ್ಥ ನೇತೃತ್ವದ ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. 

ಪ್ರಸ್ತುತ ಸಮಿತಿ ಪರಿಷ್ಕರಿಸುವ ಪಠ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.