ಮನೆ ಅಪರಾಧ ಸ್ಕೂಟರ್‌ ಸವಾರನ ಮೇಲೆ ಹರಿದ ಲಾರಿ; ಸಾವು

ಸ್ಕೂಟರ್‌ ಸವಾರನ ಮೇಲೆ ಹರಿದ ಲಾರಿ; ಸಾವು

0

ಮಂಗಳೂರು, ಡಿಸೆಂಬರ್ 10: ಸ್ಕೂಟರ್‌ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಲಾರಿ ಹರಿದು ಮೃತಪಟ್ಟಿರುವ ಘಟನೆ ಕಾವೂರು ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.

Join Our Whatsapp Group

ಮೃತ ಸವಾರನನ್ನು ಪ್ರಕಾಶ್ ಅಂಚನ್ ಎಂದು ಗುರುತಿಸಲಾಗಿದೆ.

ಪ್ರಕಾಶ್ ಅಂಚನ್ ತಮ್ಮ ಸ್ಕೂಟರ್‌ನಲ್ಲಿ ಮರಕಡ ಕಡೆಯಿಂದ ಕಾವೂರು ಕಡೆಗೆ ಬರುತ್ತಿದ್ದರು. ಈ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿ ಸವಾರ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಲಾರಿಯೊಂದು ಪ್ರಕಾಶ್‌ ಅವರ ಮೇಲೆ ಹರಿದಿದೆ. ಲಾರಿಯ ಚಕ್ರ ದೇಹದ ಮೇಲೆ ಹರಿದ ಕಾರಣ ಸವಾರ ಮೃತಪಟ್ಟಿದ್ದಾರೆ.

ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.