ಮನೆ ಜ್ಯೋತಿಷ್ಯ ಪೂರ್ವ ಫಲ್ಗುಣಿ ಮತ್ತು ಜಾತಕ

ಪೂರ್ವ ಫಲ್ಗುಣಿ ಮತ್ತು ಜಾತಕ

0

ಪೂರ್ವಾಫಾಲ್ಗುಣಿ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

Join Our Whatsapp Group

       ಇದು ಉಗ್ರ ನಕ್ಷತ್ರ. ಇದರಿರಲ್ಲಿ ಕಳೆದ ಅಥವಾ ಕೈತಪ್ಪಿಹೋದ ಒಡವೆ ಪುನಃ ಪ್ರಾಪ್ತಿಯಾಸಗುವುದಿಲ್ಲ. ಜ್ವರ ಬಂದರೆ ಒಂದು ತಿಂಗಳ ಅವಧಿಯವರೆಗೆ ಕ್ರೂರ ಭ್ರಗುದೇವತೆಗೆ ಶಾಂತಿ ಮಾಡಿದರೆ ಪುನಃ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕನ್ಯೆ ಋತುಮತಿಯಾದರೆ ಪತಿಗೆ ಕ್ರೂರ. ಸಂತಾನವಾಗುವುದಿಲ್ಲ. ಆರು ತಿಂಗಳು ಬಿಟ್ಟು ಅಥವಾ 16 ದಿನಗಳೊಳಗೆ ಅಥವಾ ಶಾಂತಿ ಮಾಡಿ ಗರ್ಭದಾನ ಮಾಡಿದರೆ ದೋಷವಾಗುವುದಿಲ್ಲ. ಈ ನಕ್ಷತ್ರದಲ್ಲಿ ಕ್ಷೌರ, ಪ್ರಯಾಣ, ಮುಂಜಿ, ಮದುವೆ ಮುಂತಾದ ಶುಭ ಕರ್ಮಗಳನ್ನು ಮಾಡಬಾರದು. ಕಪಟ, ಮೋಸ, ಅಸತ್ಯ ನುಡಿಯುವುದು, ವಿರೋಧ, ಅಗಿಯುವುದು, ಮುರಿಯುವುದು, ಸೀಳುವುದು, ಹೊಡೆಯುವುದು, ಸುಡುವುದು, ಜೂಜು, ಮಾಟ, ಚೌರ್ಯ, ನಿಧಿಕ್ಷೇಪ, ಪಿಶಾಚ ಕೃತ್ಯ – ಇಂಥ ಕರ್ಮಗಳಿಗೆ ಈ ನಕ್ಷತ್ರ ಬಲಿಷ್ಠವಾದುದು. ಈ ನಕ್ಷತ್ರದಲ್ಲಿ ಜನಿಸಿದ ಜಾತಕನಿಗೆ ಕಲಿಸುಖದಲ್ಲಿ ವೃದ್ಧಿಯಾಗುತ್ತದೆ. ಆರು ಗಂಡಕಾಲಗಳು ಕಳೆದರೆ 89 ವರ್ಷ ಪೂರ್ಣಾಯಸ್ಸು ಇರುತ್ತದೆ.

* ಪೂರ್ವಾಫಾಲ್ಗುಣಿ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು:

 ಪೂರ್ವಾ ಭಾದ್ರಪದಾ ನಕ್ಷತ್ರದ ಕನ್ನೆಗೆ

ಅಶ್ವಿನಿ, ಭರಣಿ, ಕೃತಿಕಾ | ನೇ ಚರಣ, ಮೃಗಶಿರಾ 3.4ನೇ ಚರಣ, ಆರ್ದ್ರಾ,ಪುನರ್ವಸು, ಪುಷ್ಪ, ಆಶ್ಲೇಷಾ, ಮಘಾ, ಪೂರ್ವಾಫಾಲ್ಗುಣಿ, ಹಸ್ತ ಚಿತ್ತಾ,, 1 2: ಚರಣ ಸ್ವಾತಿ,ವಿಶಾಖ, ನಾಲ್ಕನೇ, ಚರಣ ಅನುರಾಧ ಜೇಷ್ಠಾ, ಮೂಲಾ  ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠಾ 1.2ನೇ ಚರಣ, ಶತಭಿಷಾ, ಪೂರ್ವಾ ಭಾದ್ರಪದಾ, ರೇವತಿ.

 ಪೂರ್ವಾ ಭಾದ್ರಪದಾ ನಕ್ಷತ್ರದ ವರನಿಗೆ

ಅಶ್ವಿನಿ, ಭರಣಿ, ಕೃತಿಕಾ । ನೇ ಚರಣ, ರೋಹಿಣಿ, ಮಗಶಿರಾ, ಆರ್ದ್ರಾ, ಪುನರ್ವಸು, ಪುಷ್ಕ, ಆಶ್ಲೇಷಾ, ಪೂರ್ವಾಫಾಲ್ಗುಣಿ, ಉತ್ತರಾ, ಹಸ್ತ, ಚಿತ್ತಾ,1.2 ಚರಣ ಸ್ವಾತಿ ವಿಶಾಖ 4 ನೇ ಚರಣ ಅನುರಾಧ ಜೇಷ್ಠ ಮೂಲಾ ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಪೂರ್ವಾಭಾದ್ರಪದಾ 4ನೇ ಚರಣ ರೇವತಿ,

* ಪುರ್ವಾಷಾಢಾ ನಕ್ಷತ್ರದವರ ಜನನಕ್ಕೆ ಶಾಂತಿ : ಭಗಪ್ರಣೀತರ್ಭಗ ಸತ್ಯ ರಾಥೋ ಭಗೇ ಮಾಂಧಿಯ ಮುದವಾದದಷ್ಟೇ । ಭಗಪ್ರಣೋಜನಯ ಗೋಭಿರಶ್ಮಿ ದೃಗ ಪ್ರನೃಭರ್ನೃವಂತಸ್ಯಾಮ |

ಈ ನಕ್ಷತ್ರದಲ್ಲಿ ಸಂತಾನ ಜನನವಾದರೆ, ತಾಯ್ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಪಠಿಸಿ, ಯಥಾಸಾಮರ್ಥ ಅಕ್ಕಿ-ಬೆಲ್ಲ- ಗೋಧಿ ಯನ್ನು ದಾನ ನೀಡಬೇಕು. ಇದರಿಂದ ನಕ್ಷತ್ರದೋಷಗಳು ಶಾಂತವಾಗುತ್ತವೆ.

 ಯಂತ್ರ :

ಓಂ ಅಹಂ ಸಃ ಭಗಾಯ ನಮ:

ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ, ಈ ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಲ ಜಪಿಸಿ, ಧೂಪವನ್ನು ಅರ್ಪಿಸಬೇಕು.”

 ಭಗವಿವ ಭಗವಾನ್ ಅಸ್ತುದೇವಾ ಸ್ತೇನವಯಂ ಭಗವಂತಸ್ಯಾ ಮ ।

ತಂ *ತ್ವಾ ಭಗ ಸರ್ವ ಇಜ್ಯೋಹಮೀತಿ ಸನೋ ಭಗ ಪುರೇವಿತಾ ಭವೇಹ ||

ಸಕ್ಕರೆ- ಅನ್ನ, ಅಪೂಪ, ಲಾಡು ನೈವೇದ್ಯ ಮಾಡಿ, ತುಪ್ಪದ ಅನ್ನದಲ್ಲಿ ಹೋಮಮಾಡಿ, ಪಾಯಸಾನ್ನ ಬಲಿ ನೀಡಬೇಕು. ನಂತರ ಯಂತ್ರವನ್ನು ಶರೀರದಲ್ಲಿ ಧಾರಣೆ ಮಾಡಬೇಕು. ಇದರಿಂದ ಈ ನಕ್ಷತ್ರದ ಸರ್ವದೋಷಗಳು ಶಾಂತವಾಗುತ್ತವೆ.