ರೋಣ: ಬಹುದಿನಗಳಿಂದ ಆಸ್ತಿ ವಿವಾದ ಬಗೆ ಹರಿಯದ ಕಾರಣ. ತಮ್ಮ ಕುಟುಂಬಕ್ಕೆ ದಯಾಮರಣ ನೀಡುವಂತೆ ಕೋರಿ ರೋಣ ತಾಲೂಕಿನ ಕೃಷ್ಣಾಪೂರ ಗ್ರಾಮದ ನಿವಾಸಿ ಶಾಂತಾ ಹಿರೇಮಠ ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರಪತಿ. ರಾಜ್ಯಪಾಲ ಸೇರಿದಂತೆ ರಾಜ್ಯ ಮುಖ್ಯ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದಾರೆ.
ನಮ್ಮ ಜಮೀನು ಉಳುಮೆ ಮಾಡಲು ಕೆಲ ಬಲಾಢ್ಯರು ಬಿಡುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರುವುದಿಲ್ಲ. ಹೀಗಾಗಿ ಪ್ರತಿದಿನ ಕಿರುಕುಳ ಅನುಭವಿಸುವುದಕ್ಕಿಂತ ಸಾಯುವುದೇ ಲೇಸು ಎಂದು ಭಾವಿಸಿದ್ದೇವೆ. ಆ ಕಾರಣಕ್ಕೆ ನಮಗೆ ದಯಾ ಮರಣ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ.