ಮನೆ ಅಪರಾಧ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪ: ಡ್ರೋನ್ ಪ್ರತಾಪ್ ಬಂಧನ

ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪ: ಡ್ರೋನ್ ಪ್ರತಾಪ್ ಬಂಧನ

0

ತುಮಕೂರು: ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್  ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Join Our Whatsapp Group

ತನ್ನ ಯುಟ್ಯೂಬ್ ಚಾನೆಲ್ ಒಂದಕ್ಕೆ ವಿಡಿಯೋ ಮಾಡುವ ಉದ್ದೇಶದಿಂದ ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಸ್ಪೋಟಿಸಿದ್ದಾರೆ. ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ವಿಚಾರವಾಗಿ ತುಮಕೂರು ಜಿಲ್ಲೆಯ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಡ್ರೋನ್ ಪ್ರತಾಪ್ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ವಿಜ್ಞಾನಕ್ಕೆ ಸಂಬಂದಿಸಿದ ಪ್ರಯೋಗ ನಡೆಸಿದ್ದು ಇದರಲ್ಲಿ ಸೋಡಿಯಂ ಸೇರಿದಂತೆ ಇತರ ರಾಸಾಯನಿಕಗಳನ್ನು ಸೇರಿಸಿ ಕೇಯಿಷಿ ಹೊಂಡಕ್ಕೆ ಎಸೆಯುವುದು ಕಾಣಬಹುದು ಇದಾದ ಬಳಿಕ ಕೃಷಿ ಹೊಂಡದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಂತೆ ದೊಡ್ಡ ಸ್ಫೋಟ ಸಂಭವಿಸುತ್ತದೆ ಇದೆಲ್ಲಾ ಡ್ರೋನ್ ಪ್ರತಾಪ್ ಹಂಚಿಕೊಂಡ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪ್ ಹಂಚಿಕೊಂಡಿರುವ ವಿಡಿಯೋ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದು ಅಲ್ಲದೆ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಿದೆ ಎಂದು ಹಲವರು ಆರೋಪಿಸಿದ್ದಾರೆ, ಅಷ್ಟು ಮಾತ್ರವಲ್ಲದೆ ದುಷ್ಕರ್ಮಿಗಳಿಗೆ ಈ ವಿಡಿಯೋ ಒಂದು ಅಸ್ತ್ರವಿದ್ದಂತೆ ಅದರಲ್ಲಿ ಆತ ಯಾವ ಯಾವ ರಾಸಾಯನಿಕಗಳನ್ನು ಬಳಸಬೇಕು ಎಂಬುದನ್ನು ಹೇಳಿದ್ದು ಇದರಿಂದ ದುಷ್ಕರ್ಮಿಗಳಿಗೆ ಇದನ್ನು ದುರುಪಯೋಗ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

 ಸದ್ಯ ಪೊಲೀಸರು ಡ್ರೋನ್ ಪ್ರತಾಪ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.