ಮನೆ ಅಪರಾಧ ಹೊಳೆಹೊನ್ನೂರು: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು, ಓರ್ವನಿಗೆ ಗಾಯ

ಹೊಳೆಹೊನ್ನೂರು: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು, ಓರ್ವನಿಗೆ ಗಾಯ

0

ಹೊಳೆಹೊನ್ನೂರು: ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

Join Our Whatsapp Group

 ಘಟನೆ 1:

ಹೊಳೆಹೊನ್ನೂರು ಮಲ್ಲಾಪುರ ಬಳಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೈಕೊಂಡು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ಯುವಕನನ್ನು ಹೊನ್ನಾಳಿ ತಾಲೂಕು ಲಿಂಗಪುರ ಗ್ರಾಮದ ಭುವನ (18ವರ್ಷ) ಎನ್ನಲಾಗಿದ್ದು, ಮೃತ ಯುವಕನಿಗೆ ತಾಯಿ ಹಾಗು ತಂಗಿ ಮಾತ್ರ ಇದ್ದು ತಂದೆ 2 ವರ್ಷಗಳ ಹಿಂದೆ ಮರಣ ಹೊಂದಿದ್ದು ತಾಯಿಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ.

ಘಟನೆ 2:

ಇನ್ನೊಂದು ಘಟನೆಯಲ್ಲಿ ನಾಗಸಮುದ್ರ ಸಮೀಪ ಕಾರು ಹಾಗೂ ಬೈಕ್ ನಡುವೆ ನಡೆದ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಸಾಗರ (25) ಎನ್ನಲಾಗಿದೆ.

 ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಿಂದ ಶಿವಮೊಗ್ಗದ ಕಡೆ ಬರುತಿದ್ದ ಕಾರು ಹಾಗು ಸಣ್ಯಸಿಕೊಡಮಗ್ಗೆ ಕಡೆಯಿಂದ ನಾಗಸಮುದ್ರ ಕಡೆ ಬರುತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ, ಮೃತ ಸಾಗರ್ ಸನ್ಯಾಸಿ ಕೊಡಮಗ್ಗೆ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ.