ಚಿಕ್ಕಮಗಳೂರು: ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ (ಡಿ.13) ಸುದ್ದಿಗಾರರ ಜತೆ ಮಾತನಾಡಿ, ಅಲ್ಲೀನ ಪ್ರತ್ಯಕ್ಷದರ್ಶಿಗಳ ಪ್ರಕಾರ ಲಾಠಿ ಚಾರ್ಜ್ ಮಾಡುವ ಅವಶ್ಯಕತೆ ಇರಲಿಲ್ಲ. ಲಾಠಿಚಾರ್ಜ್ ಗೂ ಮುನ್ನ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಂಡಿಲ್ಲ, ಮ್ಯಾಜಿಸ್ಟ್ರೇಟ್ ಹಾಜರಿದ್ದು ಆದೇಶ ಮಾಡಬೇಕು ಅದೂ ಕೂಡ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ ಆಶ್ಚರ್ಯ ಮೂಡಿಸಿದೆ. ಲೋಪದೋಷಗಳು ಇದ್ದರೆ ತನಿಖೆ ಮಾಡುತ್ತೇವೆಂದು ಹೇಳಬಹುದಿತ್ತು. ಆದರೆ, ಗೃಹ ಸಚಿವರು ದಾಷ್ಟ್ಯದ ಮಾತನಾಡಿದ್ದಾರೆ ಎಂದಿದ್ದಾರೆ.
ಲಾಠಿಚಾರ್ಜ್ ಮಾಡದೆ ಮುತ್ತು ಕೊಡಬೇಕಾ ಎಂದಿದ್ದಾರೆ. ಸರ್ವಾಧಿಕಾರಿ ಸರ್ಕಾರ ಮಾತ್ರ ಹೀಗೆ ಮಾತ್ರ ಹೇಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.