ಮನೆ ರಾಷ್ಟ್ರೀಯ ದೇಶದ ಸಂವಿಧಾನವು ಸಂಘದ ನಿಯಮ ಪುಸ್ತಕವಲ್ಲ: ಪ್ರಿಯಾಂಕಾ ಗಾಂಧಿ ಚೊಚ್ಚಲ ಭಾಷಣ

ದೇಶದ ಸಂವಿಧಾನವು ಸಂಘದ ನಿಯಮ ಪುಸ್ತಕವಲ್ಲ: ಪ್ರಿಯಾಂಕಾ ಗಾಂಧಿ ಚೊಚ್ಚಲ ಭಾಷಣ

0

ನವದೆಹಲಿ: ಲೋಕಸಭೆಯಲ್ಲಿ ಇಂದು (ಶುಕ್ರವಾರ) ಸಂವಿಧಾನದ ವಿಷಯದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದ ಸಂವಿಧಾನವು ಸಂಘದ ನಿಯಮ ಪುಸ್ತಕವಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.

Join Our Whatsapp Group

ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಸಂಸತ್‌ಗೆ ಪ್ರವೇಶಿಸಿರುವ ಪ್ರಿಯಾಂಕಾ ಮಾಡಿರುವ ಚೊಚ್ಚಲ ಭಾಷಣ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ, ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ನಾಶಗೊಳಿಸಲು ತನ್ನಿಂದ ಸಾಧ್ಯವಾಗುವ ಎಲ್ಲವನ್ನು ಮಾಡಿದೆ’ ಎಂದು ಆರೋಪಿಸಿದ್ದಾರೆ.

ಸಂಭಲ್ ಮತ್ತು ಮಣಿಪುರ ಹಿಂಸಾಚಾರ ವಿಷಯದಲ್ಲಿ ಮೌನ ತಾಳಿರುವ ಪ್ರಧಾನಿ ಮೋದಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ದೇಶದ ಸಂವಿಧಾನವು ಸಂಘದ ನಿಯಮ ಪುಸಕ್ತವಲ್ಲ ಎಂಬುದನ್ನು ಪ್ರಧಾನಿ ಮೋದಿ ಅರ್ಥಮಾಡಿಕೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.

ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾ ಕವಚವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲ್ಯಾಟರಲ್‌ ಎಂಟ್ರಿ, ಖಾಸಗೀಕರಣದ ಮೂಲಕ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಲು ಸರ್ಕಾರವು ಯತ್ನಿಸುತ್ತಿದೆ. ಒಂದು ವೇಳೆ ಈಗಿನ ಹಾಗೇ ಲೋಕಸಭಾ ಚುನಾವಣಾ ಫಲಿತಾಂಶ ಬರದಿದ್ದರೆ ಸರ್ಕಾರ ಸಂವಿಧಾನವನ್ನೇ ಬದಲಿಸುವ ಕೆಲಸ ಆರಂಭಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.