ಪ್ರತಿನೂರು ಜನಕ್ಕೆ ಮೂರು ಅಥವಾ ನಾಲ್ಕು ಜನರು ಬುದ್ದಿ ಮಾಂದ್ಯತೆಯಿಂದ ಬಳಲುತ್ತಾರೆ. ಅಂದರೆ ಪ್ರಪಂಚದಲ್ಲಿ ಸಾಕಷ್ಟು ಜನ ಬುದ್ಧಿಮಾಂದ್ಯರಿದ್ದಾರೆ. ಎಂದಾಯಿತು. ವಿಶೇಷ ಗಮನ ಮತ್ತು ಸಹಾಯ ಬೇಕಾಗುವ ತೀವ್ರ ಬುದ್ದಿ ಮಾಂದ್ಯರ ಸಂಖ್ಯೆ ಪ್ರತಿನೂರಕ್ಕೆ ಒಂದು. ನಮ್ಮ ಕರ್ನಾಟಕ ರಾಜ್ಯವೊಂದರಲ್ಲೇ ಹತ್ತು ಲಕ್ಷಕ್ಕೂ ಮೇಲ್ಪಟ್ಟು ತೀವ್ರ ಬುದ್ದಿ ಮಾಂದ್ಯರಿದ್ದಾರೆ.
ಬುದ್ದಿ ಮಾಂದ್ಯತೆಯನ್ನು ಗುರುತಿಸುವುದು ಹೇಗೆ?
ಮಗು ಸಾಕಷ್ಟು ದೊಡ್ಡವನಾಗಿದ್ದರೆ ಮತ್ತು ಬುದ್ಧಿ ಮಾಂದ್ಯತೆ ತೀವ್ರ ಸ್ವರೂಪದ್ದಾದರೆ, ಅಂತಹ ಮಕ್ಕಳನ್ನು ಗುರುತಿಸುವುದು ಸುಲಭ, ಆದರೆ ಚಿಕ್ಕ ವಯಸ್ಸು ಹಾಗೂ ಬುದ್ಧಿ ಮಾಂದ್ಯತೆ ಅಲ್ಪ ಮಟ್ಟದ್ದಾದರೆ ಗುರುತಿಸುವುದು ಸ್ವಲ್ಪ ಕಷ್ಟ, ಮಗುವಿನ ಹೊರರೂಪ ಲಕ್ಷಣಗಳಿಂದ, ಬೆಳವಣಿಗೆಯ ಗತಿಯಿಂದ ಬುದ್ದಿ ಮಾಂದ್ಯತೆಯನ್ನು ಪತ್ತೆ ಹಚ್ಚಬಹುದು.
*ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಪರಿಹಾರ
ಹೊರರೂಪ ಲಕ್ಷಣಗಳು : ಬುದ್ಧಿಮಾಂದ್ಯತೆ ತೀವ್ರವಾಗಿದ್ದರೆ, ಮಗುವಿನ ಹೊರರೂಪ ಲಕ್ಷಣಗಳಿಂದಲೇ ಇದು ಬುದ್ದಿಮಾಂದ್ಯ ಮಗು ಎಂದು ಹೇಳಿ ಬಿಡಬಹುದು. ಸಣ್ಣತಲೆ, ಹಣೆಯನ್ನು ಮುಚ್ಚುವ ಕೂದಲು, ಸಣ್ಣ ಅಥವಾ ದೊಡ್ಡ ಕವಿಗಳು, ಕಿವಿಗಳು ಯಥಾಸ್ಥಾನದಲ್ಲಿರದೆ, ಮೇಲಕ್ಕೋ ಕೆಳಕ್ಕೋ ಇರುತ್ತವೆ. ಕಣ್ಣುಗಳು ಸಣ್ಣಗೆ ಓರೆಯಾಗಿರಬಹುದು. ದಪ್ಪ ನಾಲಗೆ, ಜೊಲ್ಲು ಸುರಿಯುವ ಬಾಯಿ, ಅಡ್ಡಾದಿಡ್ಡಿಯಾಗಿ ಬೆಳೆದ ಹಲ್ಲುಗಳು, ದಪ್ಪ ಹಾಗೂ ಮೋಟಾದ ಕೈ ಕಾಲುಗಳು, ಚಪ್ಪಟೆ ಪಾದ ಇತ್ಯಾದಿ. ಮುಖದಲ್ಲಿ ಪೆದ್ದು ಕಳೆ ಇರುತ್ತದೆ. ಮಗು ಮಂಕಾಗಿರುತ್ತದೆ. ವಯಸ್ಸಿಗೆ ತಕ್ಕ ಚಟುವಟಿಕೆ ಚುರುಕುತನ ಇರದು ಅಥವಾ ಅತಿಯಾದ ಆಸಂಬದ್ಧ ನಡೆವಳಿಕೆಗಳಿರುತ್ತವೆ.
ಬೆಳವಣಿಗೆ ನಿಧಾನವಾಗುವುದು : ಮೇಲೆ ಕಾಣಿಸಿದ ಶಾರೀರಿಕ ಲಕ್ಷಣಗಳು
ಇರಲಿ, ಇಲ್ಲದಿರಲಿ, ಮಗುವಿನ ಬೆಳವಣಿಗೆ ನಿಧಾನವಾಗುವುದು ಬುದ್ಧಿಮಾಂದ್ಯತೆಯ ಪ್ರಮುಖ ಲಕ್ಷಣ. ಮಗುವಿನ ಬೆಳವಣಿಗೆ ನಿಧಾನವಾದರೆ, ಬುದ್ದಿ ಮಾಂದ್ಯತೆ ಇರಬಹುದೇ ಎಂದು ಯೋಚಿಸಬೇಕು; ಜಾಗೃತರಾಗಬೇಕು. ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳಿಗೆ ಮೂರು ತಿಂಗಳಿಗೆ ಕತ್ತು ನಿಲ್ಲುತ್ತದೆ. ಆರು ತಿಂಗಳಿಗೆ ಕುಳಿತುಕೊಳ್ಳಲು ಆಗುತ್ತದೆ. ಒಂದು ವರ್ಷಕ್ಕೆ ನಿಲ್ಲಲು, ತಪ್ಪು ಹೆಜ್ಜೆ ಹಾಕಲು. ಒಂದೂವರೆ ವರ್ಷಕ್ಕೆ ನಡೆಯಲು ಹಾಗೂ ಕೆಲವು ಮಾತುಗಳನ್ನಾಡಲು ಸಮರ್ಥ ವಾಗುತ್ತವೆ. ನಾಲೈದು ತಿಂಗಳಾದರೂ ಮಗುವಿಗೆ ಕತ್ತು ನಿಲ್ಲದಿದ್ದರೆ, ಎಂಟು ತಿಂಗಳಾದರೂ ಮಗು ಕುಳಿತುಕೊಳ್ಳದಿದ್ದರೆ, ಒಂದೂವರೆ ವರ್ಷವಾದರೂ ನಿಂತು ನಡೆಯದಿದ್ದರೆ, ಎರಡು ವರ್ಷವಾದರೂ ಮಾತನಾಡದಿದ್ದರೆ, ಅದಕ್ಕೆ ಬುದ್ಧಿ ಮಾಂದ್ಯತೆ ಇದೆ ಎಂದು ಅರ್ಥ.
ಇದಲ್ಲದೆ ಮಗುವಿಗೆ ಕೈಕಾಲು ಊನ ಇತ್ಯಾದಿ ಅಂಗವಿಕಲತೆ, ಮೂರ್ಛ ಬರುವುದು, ಅತಿಯಾದ ಚಟುವಟಿಕೆ, ತೀಟೆ ಮುಂತಾದ ಇತರ ತೊಂದರೆಗಳು ಇರಬಹುದು.
ಕಲಿಕೆಯಲ್ಲಿ ಹಿಂದುಳಿಯುವುದು : ನಿತ್ಯ ಜೀವನದ ಚಟುವಟಿಕೆಗಳು, ಸ್ವರಕ್ಷಣೆ,ಸಾಮಾಜಿಕ ಕೌಶಲಗಳು ಹಾಗೂ ಶಾಲೆಯಲ್ಲಿ ಎಲ್ಲ ವಿಷಯಗಳು ಮತ್ತು ಕೌಶಲಗಳ ಕಲಿಕೆಯಲ್ಲಿ ಹಿಂದುಳಿಯುವುದು ಅಥವಾ ಕಲಿಯಲು ವಿಫಲವಾಗುವುದು.
ಬುದ್ದಿ ಮಾಂದ್ಯತೆ ಬರಲು ಏನು ಕಾರಣ?
ಯಾವುದೇ ಕಾರಣದಿಂದ ಮಿದುಳು ಸರಿಯಾಗಿ ಬೆಳೆಯದೇ ಹೋದರೆ, ಯಾವುದೇ ರೀತಿಯಿಂದ ಮಿದುಳಿಗೆ ಪೆಟ್ಟು ಬಿದ್ದು ಹಾನಿಯಾದರೆ, ಮಿದುಳಿನ ಸಾಮರ್ಥ್ಯ ಕಡಿಮೆಯಾಗಿ ಬುದ್ದಿ ಮಾಂದ್ಯತೆ ಉಂಟಾಗುತ್ತದೆ. ದೋಷಪೂರ್ಣ ಮಿದುಳೇ ಬುದ್ದಿ ಮಾಂದ್ಯತೆಗೆ ಕಾರಣ.
ಮಿದುಳು ಸರಿಯಾಗಿ ಬೆಳೆಯದಿರಲು ಅಥವಾ ಹಾನಿಗೀಡಾಗಲು ಕಾರಣಗಳು ಹಲವಾರು ಅವನ್ನು ವಂಶಿಕ ಹಾಗೂ ವಾತಾವರಣದ ಕಾರಣಗಳೆಂದು ವಿಭಾಗಿಸ ಬಹುದು.
ವಂಶಿಕ ಕಾರಣಗಳು : ನಮ್ಮ ಶರೀರದ ಆಕಾರ, ಬಣ್ಣ, ನಮ್ಮ ಸ್ವಭಾವ ಇತ್ಯಾದಿ ಸ್ವಲ್ಪಮಟ್ಟಿಗೆ ವಂಶಿಕವಾಗಿ ತಂದೆ ತಾಯಿಗಳಿಂದ ನಮಗೆ ಬರುತ್ತದೆ; ಸ್ವಲ್ಪಮಟ್ಟಿಗೆ ವಾತಾವರಣದಿಂದ ರೂಪಿಸಲ್ಪಡುತ್ತವೆ. ನಮ್ಮ ಜೀವಕೋಶದಲ್ಲಿರುವ ಬಣ್ಣದಂಡಗಳೆಂಬ (ಕ್ರೋಮೋಸೋಮ್ಸ್) ವಿಶೇಷ ವಸ್ತುಗಳು ತಂದೆ ತಾಯಿಗಳಿಂದ ಮಗುವಿಗೆ ಈ ಎಲ್ಲ ವಿಶೇಷಗಳನ್ನು ಸಾಗಿಸುತ್ತವೆ. ಒಂದೊಂದು ವಿಶೇಷಕ್ಕೂ ಒಂದು ಅಥವಾ ಅನೇಕ ಜೀನ್ ಗುಣವಾಹಿನಿಗಳು ಇರಬಹುದು. ಇನ್ನೂ ಅಗೋಚರವಾದ ಕೆಲವು ಕಾರಣಗಳಿಂದ ಈ ಬಣ್ಣದಂಡಗಳಲ್ಲಿ, ಗುಣವಾಹಿನಿಗಳಲ್ಲಿ ಏನಾದರೂ ನ್ಯೂನತೆ ಕಂಡುಬಂದರೆ, ಬುದ್ದಿ ಮಾಂದ್ಯತೆ ಬರಬಹುದು. ಅಂದರೆ ಭ್ರೂಣಸ್ಥಿತಿ ಯಲ್ಲೇ, ಬುದ್ಧಿ ಮಾಂದ್ಯತೆಗೆ ಬೀಜಾಂಕುರವಾಗುತ್ತದೆ. ತಂದೆ ತಾಯಿಗಳಲ್ಲಿ ಒಬ್ಬರು ಬುದ್ಧಿಮಾಂದ್ಯರಾಗಿದ್ದರೆ, ಅವರ ಮಕ್ಕಳೂ ಬುದ್ದಿಮಾಂದ್ಯರಾಗಿ ಹುಟ್ಟುವ ಸಂಭವ ಹೆಚ್ಚು. ಆದರೆ ಬುದ್ಧಿವಂತ ತಂದೆ ತಾಯಿಗಳಿಗೆ ವಂಶಿಕ ಕಾರಣಗಳಿಂದ ಬುದ್ಧಿ ಮಾಂದ್ಯ ಮಗು ಹುಟ್ಟುವುದು ಅಪರೂಪವೇನಲ
ಬುದ್ದಿ ಮಾಂದ್ಯತೆ ವಂಶಪಾರಂಪರವೇ?
ಬುದ್ದಿ ಮಾಂದ್ಯತೆ ಸ್ವಲ್ಪ ಮಟ್ಟಿಗೆ ಕೆಲವರಲ್ಲಿ ವಂಶಪಾರಂಪಠ್ಯವಾಗಿ ವಂಶಿಕ ಕಾರಣಗಳಿಂದ ಬುದ್ದಿ ಮಾಂದ್ಯ ಮಗು ಇದ್ದರೆ, ಇಂತಹ ಇನ್ನೊಂದು ಮಗು ಆ ಕುಟುಂಬದಲ್ಲಿ ಹುಟ್ಟುವ ಸಂಭವ ಹೆಚ್ಚು ಆದರೆ ಮುಂದೆ ಹುಟ್ಟುವ ಎಲ್ಲ ಮಕ್ಕಳೂ ಬುದ್ಧಿ ಮಾಂದ್ಯರಾಗುತ್ತಾರೆ ಎಂಬ ನಿಯಮವಿಲ್ಲ.
ವಾತಾವರಣದ ಕಾರಣಗಳು
ವಂಶಿಕ ನ್ಯೂನತೆ ಅಲ್ಲದೆ, ವಾತಾವರಣದ ಹಲವು ನ್ಯೂನತೆ ಮತ್ತು ಅಂಶಗಳಿಂದ ಬುದ್ದಿ ಮಾಂದ್ಯತೆ ಬರಬಹುದು. ಸಾಕಷ್ಟು ಮುಂಜಾಗ್ರತೆ ವಹಿಸಿದರೆ, ಇವುಗಳಲ್ಲಿ ಬಹುಪಾಲು ಕಾರಣಗಳನ್ನು ನಿವಾರಿಸಬಹುದು ಬುದ್ದಿ ಮಾಂದ್ಯತೆ ಉಂಟಾಗದಂತೆ ತಡೆಗಟ್ಟಬಹುದು ಮಗು ತಾಯಿಯ ಗರ್ಭದಲ್ಲಿರುವ ಒಂಭತ್ತು ತಿಂಗಳುಗಳ ಅವಧಿಯಲ್ಲಿ, ಹೆರಿಗೆ ಆಗುವಾಗ ಮತ್ತು ಹೆರಿಗೆಯ ನಂತರದ ಅವಧಿಯಲ್ಲಿ ನಡೆಯುವ ಹಲವಾರು ವಿದ್ಯಮಾನಗಳು ಬುದ್ದಿ ಮಾಂದ್ಯತೆಯನ್ನುಂಟು ಮಾಡಬಲ್ಲವು.
ಗರ್ಭಧಾರಣೆ ಅವಧಿಯ ಅಂಶಗಳು
1. ತಡವಾಗಿ ಗರ್ಭಧಾರಣೆ : ಮೂವತ್ತೈದು ವರ್ಷ ವಯಸ್ಸಿನ ನಂತರ ಸ್ತ್ರೀ ಗರ್ಭ ಧರಿಸುವುದು.
2.ಯಾವುದೇ ವಯಸ್ಸಿನ ಗರ್ಭಿಣಿ ಸ್ತ್ರೀಗೆ ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ಚಿಕ್ಕಮ್ಮ, ದಡಾರ, ವೈರಸ್‌ಜ್ವರ, ಫರಂಗಿ ರೋಗವಿದ್ದರೆ, ಭ್ರೂಣಕ್ಕೆ ಹಾನಿ ಮಾಡುವ ವಿಷ ವಸ್ತು ಅಥವಾ ಔಷಧಗಳ ಸೇವನೆ, ಗರ್ಭಿಣಿ ಸ್ತ್ರೀ ಮದ್ಯಪಾನ ಮತ್ತು ಇತರ ಮಾದಕ ವಸ್ತುಗಳನ್ನು ಸೇವಿಸುವುದು, ಧೂಮಪಾನ, ಹೊಟ್ಟೆಯ ಎಕ್ಸ್-ರೇ ತೆಗೆಸುವಿಕೆ (ಮುಖ್ಯವಾಗಿ ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ) ಭ್ರೂಣದ ಮಿದುಳಿಗೆ ಹಾನಿಯುಂಟಾಗುತ್ತದೆ.
3. ಗರ್ಭಿಣಿ ಸ್ತ್ರೀಗೆ ಪೌಷ್ಟಿಕ ಆಹಾರದ ಕೊರತೆ.
4 ಗರ್ಭಿಣಿ ಸ್ತ್ರೀ ತೀವ್ರ ಮಾನಸಿಕ ಕ್ಷೇಶಕ್ಕೆ ಒಳಗಾಗಿ, ತನ್ನ ಅವಶ್ಯಕತೆ ಗಳನ್ನು ನಿರ್ಲಕ್ಷಿಸುವುದು.
5. ವಿಫಲ ಗರ್ಭಪಾತ, ಭ್ರೂಣವನ್ನು ಗರ್ಭಕ್ಕೆ ಅಂಟಿಸಿ ಪೋಷಣೆ ನೀಡುವ ಪ್ಲಸೆಂಟಾದ ನ್ಯೂನತೆಗಳು.
6. ತಾಯಿಯ ಮತ್ತು ಮಗುವಿನ ರಕ್ತ ಗುಂಪು ಬೇರೆ ಬೇರೆ ಇದ್ದು ತೊಂದರೆ ಆಗುವುದು ಇತ್ಯಾದಿ.













