ಮನೆ ಕೃಷಿ ಅಡಮಾನ ರಹಿತ ಕೃಷಿ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ಆರ್ ಬಿಐ; ಜ. 1ರಿಂದ...

ಅಡಮಾನ ರಹಿತ ಕೃಷಿ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ಆರ್ ಬಿಐ; ಜ. 1ರಿಂದ ಜಾರಿ

0

ನವದೆಹಲಿ: ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ 2 ಲಕ್ಷಕ್ಕೆ ಹೆಚ್ಚಿಸಿದೆ. ಇದು ಬರುವ ಜ. 1ರಿಂದಲೇ ಜಾರಿಗೆ ಬರಲಿದೆ.

Join Our Whatsapp Group

ಈ ಮೊದಲು ಅಡಮಾನವಿಲ್ಲದೇ ₹1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು.

‘ಆರ್‌ಬಿಐನ ಈ ಹೊಸ ನಿರ್ದೇಶನದ ಮೂಲಕ, ರಾಷ್ಟ್ರವ್ಯಾಪಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪಡೆಯುವ ₹2ಲಕ್ಷ ವರೆಗಿನ ಸಾಲಕ್ಕೆ ಅಡಮಾನ ಅಥವಾ ಇತರ ಅಗತ್ಯ ದಾಖಲೆಗಳ ಮಿತಿಯನ್ನು ತೆಗೆದುಹಾಕಲು ಬ್ಯಾಂಕ್‌ಗಳಿಗೆ ಹೇಳುತ್ತದೆ. ಕೃಷಿಯಲ್ಲಿ ಹೆಚ್ಚುತ್ತಿರುವ ಮೂಲ ಬಂಡವಾಳ, ಬೀಜ ಹಗೂ ಗೊಬ್ಬರ ವೆಚ್ಚವನ್ನು ಗಮದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಒಳಗೊಂಡಂತೆ ಶೇ 86ರಷ್ಟು ರೈತರಿಗೆ ನೆರವಾಗಲಿದೆ’ ಎಂದು ಕೃಷಿ ಸಚಿವಾಲಯ ಹೇಳಿದೆ.

ಈ ಹೊಸ ಮಾರ್ಗಸೂಚಿಯನ್ನು ತ್ವರಿತವಾಗಿ ಅಳವಡಿಸುವುದು ಹಾಗು ಹೆಚ್ಚು ರೈತರನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ ಬಳಕೆಯನ್ನೂ ಉತ್ತೇಜಿಸಲಾಗುತ್ತಿದೆ. ಈ ಯೋಜನೆ ಮೂಲಕ ಶೇ 4ರ ಬಡ್ಡಿದರದಲ್ಲಿ ₹3 ಲಕ್ಷವರೆಗೆ ಸಾಲ ಪಡೆಯಲು ರೈತರು ಅರ್ಹರಾಗಿದ್ದಾರೆ’ ಎಂದು ತಿಳಿಸಲಾಗಿದೆ.

ಹಣಕಾಸು ವಲಯ ವ್ಯಾಪ್ತಿಗೆ ಕೃಷಿ ಕ್ಷೇತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವುದು, ರೈತರಿಗೆ ಹೆಚ್ಚಿನ ಹೂಡಿಕೆ ಹಾಗೂ ಅವರ ಜೀವನಕ್ರಮವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಸಾಲದ ಮಿತಿ ಹೆಚ್ಚಳದಿಂದಾಗಿ ಕೃಷಿ ಆರ್ಥಿಕ ಬೆಳವಣಿಗೆ’ ಎಂದು ಹೇಳಿದೆ.