ಮನೆ ಅಪರಾಧ ಶ್ರೀರಂಗಪಟ್ಟಣ ಚಲೋ‌: ಜಾಮಿಯಾ ಮಸೀದಿ ವಿಡಿಯೋ ಚಿತ್ರೀಕರಣಕ್ಕೆ ಆಗ್ರಹ

ಶ್ರೀರಂಗಪಟ್ಟಣ ಚಲೋ‌: ಜಾಮಿಯಾ ಮಸೀದಿ ವಿಡಿಯೋ ಚಿತ್ರೀಕರಣಕ್ಕೆ ಆಗ್ರಹ

0

ಮಂಡ್ಯ(Mandya): ಜಾಮಿಯಾ ಮಸೀದಿ ವಿಡಿಯೋ ಚಿತ್ರೀಕರಣವಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದರು.

ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಮ್ಮಿಕೊಂಡಿದ್ದ ಶ್ರೀರಂಗಪಟ್ಟಣ ಚಲೋ ಮೆರವಣಿಗೆಯ ಸಂದರ್ಭದಲ್ಲಿ ವಿಡಿಯೋ ಚಿತ್ರೀಕಣರಕ್ಕೆ ಒತ್ತಾಯಿಸಿದರು.

ಶ್ರೀರಂಗಪಟ್ಟಣ ಚಲೋಗೆ ಪೊಲೀಸರು ತಡೆ ನೀಡಿದರು. ಪರಿಣಾಮ ದಸರಾ ಬನ್ನಿಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್  ಕಾರ್ಯಕರ್ತರು ಹನುಮಾನ್ ಚಾಲೀಸ್ ಪಠಣ ಮಾಡಿ ಪ್ರಸಾದ ವಿನಿಯೋಗಿಸಿದರು. ಈ ಮೂಲಕ ಶ್ರೀರಂಗಪಟ್ಟಣ ಚಲೋ‌ ದಸರಾ ಬನ್ನಿಮಂಟಪದಲ್ಲಿ ಭಜನೆಗೆ ಸೀಮಿತವಾಯಿತು.

ಈ ವೇಳೆ ಮಾತನಾಡಿದ ಭಜರಂಗದಳ ಜಿಲ್ಲಾ ಸಂಚಾಲಕ ಬಸವರಾಜ್ , ಮಸೀದಿ ಇರುವ ಜಾಗದಲ್ಲಿ ಅಡುಗೆ ಮಾಡುವಂತಿಲ್ಲ, ಅಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ. ಈ ಕೂಡಲೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು.ಮಸೀದಿಯಲ್ಲಿ  ಹಿಂದೂ ದೇವರಗಳ ಹಲವಾರು ಕುರುಹುಗಳಿವೆ. ಇದನ್ನು ರಕ್ಷಿಸುವ ಹೊಣೆ ನಮ್ಮದೇ. ಪ್ರಾಣ ಹೋದರು ಬಿಡುವುದಿಲ್ಲ. ನಮ್ಮ ಹೋರಾಟ ನಡೆಯಲಿದೆ. ನಾವು ಕಾನೂನು ಮೂಲಕವೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತವೆ. ಕಾನೂನು ಪಾಲನೆಯನ್ನು ಮಾಡಲಿದ್ದೇವೆ. ನಾವು ಜಿಲ್ಲಾಡಳಿತಕ್ಕೆ ಕೊಟ್ಟಿರುವ ಮನವಿ ಬಗ್ಗೆ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಈಗಲೇ ಬಂದು ತಿಳಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನೆಲೆ, ಪ್ರತಿಭಟನಾ ಸ್ಥಳಕ್ಕೆ ಎಸಿ ಶಿವಾನಂದ ಮೂರ್ತಿ, ಶ್ರೀರಂಗಪಟ್ಟಣ ತಹಶಿಲ್ದಾರ್ ಶ್ವೇತ ಸ್ಥಳಕ್ಕೆ ಭೇಟಿ ನೀಡಿ ಹಿಂದೂ ಪರ ಸಂಘಟನೆಗಳ ಮನವಿ ಸ್ವೀಕರಿಸಿದರು.

ಶ್ರೀರಂಗಪಟ್ಟಣದ ಉಪವಿಭಾಗಧಿಕಾರಿ ಮಾತನಾಡಿ, ಜಾಮೀಯಾ ಮಸೀದಿ ವಕ್ಫ್ ಬೋರ್ಡ್ ಗೆ ಸೇರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಕೊಂಡು ಮಾಹಿತಿ ನೀಡುತ್ತೇವೆ. ಸಂರಕ್ಷಿತಾ ಪುರಾತತ್ವ ಕಟ್ಟಡದಲ್ಲಿ ಮದರಸಾ ನಡೆಯುತ್ತಿರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಸ್ಪಷ್ಟಪಡಿಸುತ್ತೇವೆ. ಮದರಸಾದ ಬಗ್ಗೆ ಸ್ಪಷ್ಟೀಕರಣಕ್ಕೆ ಕೇಂದ್ರದ ಪುರಾತತ್ವ ಇಲಾಖೆಗೆ ಪತ್ರ ಬರೆಯುತ್ತೇವೆ. ಕಾನೂನಾತ್ಮಕವಾಗಿ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.