ಮನೆ ಅಪರಾಧ 5ವರ್ಷದಲ್ಲಿ ಕಾಶ್ಮೀರದಲ್ಲಿ 8,000 ಕೆ.ಜಿ. ಡ್ರಗ್ಸ್ ವಶ:  9,500 ಮಂದಿ ಬಂಧನ

5ವರ್ಷದಲ್ಲಿ ಕಾಶ್ಮೀರದಲ್ಲಿ 8,000 ಕೆ.ಜಿ. ಡ್ರಗ್ಸ್ ವಶ:  9,500 ಮಂದಿ ಬಂಧನ

0

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಾದಕ ಪದಾರ್ಥಗಳ ದೊಡ್ಡ ಜಾಲವೇ ಹುಟ್ಟಿಕೊಂಡಿದ್ದು, ಕಳೆದ 5 ವರ್ಷಗಳಲ್ಲಿ 8 ಸಾವಿರ ಕೆ.ಜಿ. ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದು, 9,500 ಮಂದಿಯನ್ನು ಬಂಧಿಸಲಾಗಿದೆ.

Join Our Whatsapp Group

 2021ರಿಂದೀಚೆಗೆ ಮಾದಕ ದ್ರವ್ಯ ಸಾಗಣೆ ಪ್ರಕರಣ ಹೆಚ್ಚಾಗಿವೆ. ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟ್ರೋಪಿಕ್‌ ಸಬ್‌ ಸ್ಟೆನ್ಸಸ್‌ ಕಾಯ್ದೆ (ಎನ್‌ಡಿಪಿಎಸ್‌ಎ) ಅಡಿ 6,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 8,000 ಕೆ.ಜಿ. ಡ್ರಗ್ಸ್‌ ವಶಕ್ಕೆ ಪಡೆದು ನಾಶಪಡಿಸಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದೆ. 2021ರಲ್ಲಿ 1543 ಪ್ರಕರಣ ದಾಖಲಾ ಗಿದ್ದು, 2,217 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.

2022ರಲ್ಲಿ 1,857 ಪ್ರಕರಣ, 2,755 ಮಂದಿ ಬಂಧನ, 2023ರಲ್ಲಿ 2,149 ಪ್ರಕರಣ, 3,072 ಬಂಧನ, 2024 ರಲ್ಲಿ 985 ಕೇಸ್‌ ದಾಖಲಾಗಿದ್ದು, 1,380 ಜನರ ಬಂಧಿಸಲಾಗಿದೆ ಎಂದಿದೆ.