ವಿಜಯನಗರ: ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸಾವನ್ನಪ್ಪಿ, ಮೂವರಿಗೆ ಗಾಯವಾಗಿರುವ ದುರ್ಘಟನೆ ಹೊಸಪೇಟೆ ತಾಲೂಕಿನ ಡಣಾಯಕನ ಕೆರೆಯ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.
ಹೊಸಪೇಟೆಯ ಮ್ಯಾಸಕೇರಿ ನಿವಾಸಿ ತಾಯಪ್ಪ (40) ಮೃತ ಬೈಕ್ ಸವಾರ, ಪತ್ನಿ ರಾಧಾ(35), ಮಕ್ಕಳಾದ ದಿವ್ಯಾ(10) ಧ್ರುವ (08) ಗಾಯಾಳುಗಳು ಆಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಯಪ್ಪ ತನ್ನ ಪತ್ನಿ, ಮಕ್ಕಳೊಂದಿಗೆ ಬೈಕ್ನಲ್ಲಿ ಗರಗ ಗ್ರಾಮಕ್ಕೆ ತೆರಳಿದ್ದರು. ವಾಪಸ್ ಬರುವಾಗ ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿದ್ದ ಕಾರು ರಭಸವಾಗಿ ಬಂದು ಗುದ್ದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಕುಟುಂಬ ಸಮೇತ ನಾಲ್ಕೈದು ಅಡಿ ಮೇಲೆ ತೂರಿ ಬಿದ್ದಿದ್ದಾರೆ. ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಗೆ ಕೊಂಡೊಯ್ಯುವ ಮಾರ್ಗಮದ್ಯೆ ತಾಯಪ್ಪ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.