ಮನೆ ರಾಷ್ಟ್ರೀಯ ಸೋನಿಯಾ ಗಾಂಧಿ ಆಪ್ತ ಸಹಾಯಕ ಪಿ.ಪಿ. ಮಾಧವನ್: ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ

ಸೋನಿಯಾ ಗಾಂಧಿ ಆಪ್ತ ಸಹಾಯಕ ಪಿ.ಪಿ. ಮಾಧವನ್: ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ

0

ತ್ರಿಶೂರ್ (ಕೇರಳ): ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೀರ್ಘಕಾಲದ ಆಪ್ತ ಸಹಾಯಕ ಪಿ.ಪಿ. ಮಾಧವನ್ (73) ಅವರು ನಿಧನರಾಗಿದ್ದಾರೆ.

Join Our Whatsapp Group

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ನಾಯಕರು ಪಿ.ಪಿ. ಮಾಧವನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಮಾಧವನ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ನಮ್ಮ ಪಕ್ಷದ ವರಿಷ್ಠರೊಂದಿಗೆ (ರಾಜೀವ್ ಗಾಂಧಿ:ಸೋನಿಯಾ ಗಾಂಧಿ) ಉತ್ತಮ ಬಾಂಧವ್ಯ ಹೊಂದಿದ್ದರು. ಮಾಧವನ್ ಅವರ ಹಠಾತ್ ನಿಧನ ಕುಟುಂಬ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮಾಧವನ್ ಜಿ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಕೆ.ಸಿ.ವೇಣುಗೋಪಾಲ್ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೀರ್ಘಾವಧಿಯ ಸಹಾಯಕರಾಗಿದ್ದ ಪಿ.ಪಿ. ಮಾಧವನ್ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಗಿದೆ’ ಎಂದು ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಂಧಿ ಕುಟುಂಬಕ್ಕೆ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದ ಮಾಧವನ್ ಅವರು 1984ರಿಂದ ಪಕ್ಷಕ್ಕಾಗಿ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ತರೂರ್ ಸ್ಮರಿಸಿದ್ದಾರೆ.