ಮನೆ ಜ್ಯೋತಿಷ್ಯ ಉತ್ತರಾಷಾಡ ನಕ್ಷತ್ರ ಮತ್ತು ಜಾತಕ

ಉತ್ತರಾಷಾಡ ನಕ್ಷತ್ರ ಮತ್ತು ಜಾತಕ

0

ಉತ್ತರಾಷಾಢಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

Join Our Whatsapp Group

      ಇದರಲ್ಲಿಜ್ವರ ಬಂದರೆ 1 ತಿಂಗಳು ಕ್ರೂರ, ವಿಶ್ವದೇವತೆಗಳಿಗೆ ಶಾಂತಿ ಮಾಡಿಸಿದರೆ ಆರೋಗ್ಯವಾಗುತ್ತದೆ. ಪ್ರಯಾಣಕ್ಕೂ ಶುಭ, 16 ಗಳಿಗೆ ಕಳೆದ ನಂತರ ಆರಳುಹಿಟ್ಟು ಸೇವಿಸಿ ದಕ್ಷಿಣಕ್ಕೆ ಪ್ರಯಾಣ ಮಾಡಬಹುದು. ಕನೈ ಋತುಮತಿಯಾದರೆ ಪತಿವ್ರತೆ ಯಾಗುತ್ತಾಳೆ. ಇದು ಸ್ಥಿರ ನಕ್ಷತ್ರವಾದ್ದರಿಂದ ಸರ್ವ ಶುಭ ಕಾರ್ಯಗಳಿಗೂ ಉತ್ತಮವಾದುದು. ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದ ಜಾತಕನು ಬುದ್ದಿವಂತ, ಭಕ್ತ ಸ್ವಯಾರ್ಜಿತ ಧನದಿಂದ ಜೀವನ ನಿರ್ವಹಣೆ ಮಾಡುತ್ತಾನೆ, ಸ್ವಧರ್ಮವನ್ನು ಪಾಲಿಸುತ್ತಾನೆ. 2ನೇ ಚರಣದಲ್ಲಿ ದುಂದುಗಾರ, ನೀಚ ಸಹವಾಸ, ವ್ಯರ್ಥ ಪರಿಠವಣೆ ಉಳ್ಳವನು. 3ನೇ ಚರಣದಲ್ಲಿ ಕೋಪಿಷ್ಠ ರೋಗಿಷ್ಟ ಅಲ್ಪ ಸಂತೋಷಿ ಸ್ಕೂಲಕಾಯದವನು ಮತ್ತು 4ನೇ ಚರಣದಲ್ಲಿ ಪಂಡಿತ, ಶುಭ ಕಾರ್ಯ ಮಾಡುವವ, ಧರ್ಮ ಕಾರ್ಯದಲ್ಲಿ ಉತ್ಸಾಹವುಳ್ಳವನಾಗುತ್ತಾನೆ. ಸರ್ವಪ್ರಥಮ ಸೂರ್ಯದೇಶ 6 ವರ್ಷಗಳು, 12ನೇ ದಿನ, 5ನೇ ವರ್ಷ 28,40,80 ಈ ವರ್ಷಗಳು ಗಂಡಕಾಲಗಳು. ಶಸ್ತ್ರಗಂಡ, ಜಲಗಂಡ ಕಳೆದುಳಿಯುತ್ತಾನೆ.ಮಹಾಫಲದ ವೃಕ್ಷಕ್ಕೆ ಸ್ವಾತಿ ನಕ್ಷತ್ರ ಕೃಷ್ಣಪಕ್ಷ ಚತುರ್ದಶಿ, ಆದಿತ್ಯವಾರ ಕೂಡಿದಾಗ ವಿಷೂಚಿಕರೋಗ ತಗಲಬಹುದು. ಪುಣ್ಯ ಬಲವನ್ನು ಪಡೆದುಕೊಳ್ಳುತ್ತಿದ್ದರೆ, ಸಾಧಾರಣವಾಗಿ 89 ವರ್ಷಗಳ ಪೂರ್ಣಾಯಸ್ಸು ಇರುತ್ತದೆ.

 ಉತ್ತರಾಷಾಢಾನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

 ಉತ್ತರಾಷಾಢಾ ನಕ್ಷತ್ರದ ಕನ್ನೆಗೆ

1. 2.3 ನೇ ಚರಣ

ಅಶ್ವಿನಿ, ಭರಣಿ, ಮೃಗಶಿರಾ 1.2ನೇ ಚರಣ, ಆದ್ರ್ರಾ, ಪುಷ್ಯ  ಮಘಾ, ಪೂರ್ವಾಫಾಲ್ಗುಣಿ, ಹಸ್ತಾ ಅನುರಾಧಾ, ಜೈಷ್ಯಾ ಮೂಲಾ, ಪೂರ್ವಾಷಾಢಾ, ಶತಭಿಷಾ, ಉತ್ತರಾ ಭಾದ್ರಪದಾ, ರೇವತಿ.

 3.4ನೇ ಚರಣ :

ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರಾ, ಆದ್ರ್ರಾ, ಪುಷ್ಯ, ಮಘಾ, ಪೂರ್ವಾಫಾಲ್ಗುಣಿ, ಹಸ್ಸಾ, ಚಿತ್ತಾ 3,4ನೇ ಚರಣ, ಸ್ವಾಹಿ ಅನುರಾಧಾ, ಮೂಲಾ, ಪೂರ್ವಾಷಾಢಾ, ಧನಿಷ್ಠಾ ಶತಭಿಷಾ ಉತ್ತರಾಭಾದ್ರಪದಾ, ರೇವತಿ.

 ಉತ್ತರಾಷಾಢಾ ನಕ್ಷತ್ರದ ವರನಿಗೆ

 1. 2,3,ನೇ ಚರಣ

ಅಶ್ವಿನಿ, ಭರಣಿ, ಮೃಗಶಿರಾ, ಪುಷ್ಯ, ಮಘಾ, ಪೂರ್ವಾಫಾಲ್ಗುಣಿ, ಹಸ್ತಾ, ಸ್ವಾತಿ, ಅನುರಾಧಾ, ಶ್ರವಣ, ಧನಿಷ್ಠಾ ಶತಭಿಷಾ, ಉತ್ತರಾಭಾದ್ರಪದಾ, ರೇವತಿ,

 4ನೇ ಚರಣ :

 ಭರಣಿ, ರೋಹಿಣಿ, ಮೃಗಶಿರಾ, ಪುಷ್ಯ, ಮಘಾ, ಪೂರ್ವಾ ಫಾಲ್ಗುಣಿ, ಹಾಸ್ಯಾ ಚಿತ್ರಾ, ಸ್ವಾತಿ, ಅನುರಾಧಾ, ಪೂರ್ವಾಷಾಡ ಶ್ರಾವಣ, ಧನಿಷ್ಠಾ, ಶತಭಿಷಾ ಉತ್ತರಾಭಾದ್ರಪದಾ, ರೇವತಿ.

* ಉತ್ತರಾಷಾಢಾ ನಕ್ಷತ್ರದವರ ಜನನಕ್ಕೆ ಶಾಂತಿ :

 ವಿಶ್ವೇಽ ಅದ್ಯಮರುತೋ ವಿಶ್ವs ಊತೀ ವಿಶ್ವೇ ಭವಂತ್ರಗ್ನಯಃ ಸುಮಿದ್ಧಾಃ ।

 ವಿಶ್ವಾs ನೋದೇವಾಽ ಅವಸಾಗಮಂತು ವಿಶ್ವಮಸ್ತು ದ್ರವಿಣಂ ವ್ಯಾಜ್ಯೋ ಅಸ್ಟ್ರೇ।

        ಈ ನಕ್ಷತ್ರದಲ್ಲಿ ಸಂತಾನ ಜನನವಾದರೆ, ತಾಯ್ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಜಪಮಾಡಿ, ಅಕ್ಕಿ, ಬೆಲ್ಲವನ್ನು, ನಕ್ಷತ್ರದ ಒಂದನೆಯ ಚರಣಕ್ಕಾಗಿ ಕಡಲೆಕಾಳು, ನಕ್ಷತ್ರದ 2,3,4ನೇ ಚರಣಕ್ಕೆ ಎಳ್ಳು ಯಥಾಸಾಮರ್ಥ ದಾನ ಮಾಡಬೇಕು. ಇದರಿಂದ ಈ ನಕ್ಷತ್ರದ ದೋಷ ಶಾಂತವಾಗುತ್ತದೆ.

 ಯಂತ್ರ : ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ, ಗುಗ್ಗುಳದ ಧೂಪವನ್ನು ನೀಡಿ, ಈ ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಷ್ಟು ಜಪ ಮಾಡಬೇಕು.

 ವಿಶ್ವೇದೇವಾ ಸ ಆಗತ ಶೃಣುರಾಮ ಇಮಹವಂ ।

 ಏದಂ ಬಹಿಋಷೀತ ||

 ಓಂ ಸಃ ವಿಶ್ವೇಭೈ ನಮಃ

       ಪಾಯಸ, ಅಜ್ಯಾನ್ನ ನೈವೇದ್ಯ ಇವುಗಳಿಂದಲೇ ಹೋಮ ಮಾಡಿ, ಇವುಗಳನ್ನೇ ಬಲಿ ಅರ್ಪಿಸಬೇಕು. ನಂತರ ಯಂತ್ರವನ್ನು ಧಾರಣ ಮಾಡಬೇಕು. ಇದರಿಂದ ಈ ನಕ್ಷತ್ರದ ಸಮಸ್ತ ದೋಷಗಳು  ಶಾಂತವಾಗುತ್ತವೆ.