ಮನೆ ಮನರಂಜನೆ “ಬೇಗೂರು ಕಾಲೋನಿ’ ಟೀಸರ್‌ ಬಿಡುಗಡೆ

“ಬೇಗೂರು ಕಾಲೋನಿ’ ಟೀಸರ್‌ ಬಿಡುಗಡೆ

0

“ಬೇಗೂರು ಕಾಲೋನಿ’ ಹೀಗೊಂದು ಚಿತ್ರ ಬರುತ್ತಿದೆ. ಇದು ಹೊಸ ಪ್ರತಿಭೆಗಳ ಹೊಸ ಪ್ರಯತ್ನ. ಇತ್ತೀಚೆಗೆ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಶಾಸಕ ಸತೀಶ್‌ ರೆಡ್ಡಿ ಚಿತ್ರದ ಟೀಸರ್‌ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು.

Join Our Whatsapp Group

ತರುಣ್‌ ಸುಧೀರ್‌ ಮಾತನಾಡುತ್ತ, “ಬೇಗೂರು ಕಾಲೋನಿ ಒಂದು ರೀತಿಯ ಮಣ್ಣಿನ ಕಥೆ. ಟೀಸರ್‌ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದರು.

ನಟ ರಾಜೀವ್‌ ಚಿತ್ರದ ನಾಯಕ ನಟ. ಚಿತ್ರದ ಬಗ್ಗೆ ಮಾತನಾಡುತ್ತ, “ಹೊಸಬರೇ ನಟಿಸಿದ್ದರೂ, ಇದು ಹೊಸಬರ ಚಿತ್ರ ಎನಿಸುವುದಿಲ್ಲ. ಎಲ್ಲರೂ ಅದ್ಭುತವಾಗಿ ಪಾತ್ರ ಮಾಡಿದ್ದಾರೆ. ಕಾಲೋನಿಯಲ್ಲಿ ಮಕ್ಕಳು ಹುಟ್ಟಿ, ಬೆಳೆಯುತ್ತಾರೆ, ಎಲ್ಲರೂ ಬದಲಾದರೂ, ಕಾಲೋನಿ ಮಾತ್ರಹಾಗೇ ಇರುತ್ತದೆ. ಆ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ಬೇಗೂರು ಕಾಲೋನಿ’ ಎನ್ನುತ್ತಾರೆ ನಟ ರಾಜೀವ್‌.

ಶ್ರೀಮಾ ಸಿನಿಮಾಸ್‌ ಬ್ಯಾನರ್‌ನಡಿ ಎಂ. ಶ್ರೀನಿವಾಸ್‌ ಬಾಬು ಚಿತ್ರಕ್ಕೆ ಹಣ ಹೂಡಿದ್ದು, ಫ್ಲೈಯಿಂಗ್‌ ಕಿಂಗ್‌ ಮಂಜು ಚಿತ್ರದ ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಜೊತೆಗೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.