ಮನೆ ಕಾನೂನು ಪ್ರಕರಣಗಳ ವರ್ಗಾವಣೆ: ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ ನೀಡಿದ ಸುಪ್ರೀಂ...

ಪ್ರಕರಣಗಳ ವರ್ಗಾವಣೆ: ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

0

ಹೊಸದಿಲ್ಲಿ: ಎರಡು ಉಗ್ರ ಪ್ರಕರಣಗಳ ವಿಚಾರಣೆಯನ್ನು ಜಮ್ಮುವಿನಿಂದ ನವದೆಹಲಿಗೆ ವರ್ಗಾಯಿಸುವಂತೆ ಸಿಬಿಐ ಮಾಡಿರುವ ಮನವಿಗೆ ಪ್ರತಿಕ್ರಿಯಿಸಲು ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಇತರ ಐವರಿಗೆ ಸುಪ್ರೀಂ ಕೋರ್ಟ್ ಬುಧವಾರ(ಡಿ18) ಎರಡು ವಾರಗಳ ಕಾಲಾವಕಾಶ ನೀಡಿದೆ.

Join Our Whatsapp Group

ಮೊದಲನೆಯ ಪ್ರಕರಣವು 1990,ಜನವರಿ 25 ರಂದು ಶ್ರೀನಗರದಲ್ಲಿ ನಡೆದ ಶೂಟೌಟ್‌ನಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಸಿಬಂದಿಗಳ ಹತ್ಯೆಗೆ ಸಂಬಂಧಿಸಿದ್ದು, ಇನ್ನೊಂದು ಪ್ರಕರಣವು 1989, ಡಿಸೆಂಬರ್ 8 ರಂದು ಆಗಿನ ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣಕ್ಕೆ ಸಂಬಂಧಿಸಿದ್ದಾಗಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಮನಮೋಹನ್ ಅವರ ಪೀಠ, ಸಿಬಿಐ ಮನವಿಗೆ ಆರು ಮಂದಿ ಆರೋಪಿಗಳು ತಮ್ಮ ಉತ್ತರಗಳನ್ನು ಸಲ್ಲಿಸದಿರುವ ಅಂಶವನ್ನು ಗಮನಿಸಿದೆ. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಳಿದೆ. ಇದು 2025 ಜನವರಿ 20ರಂದು ಹೆಚ್ಚಿನ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿದೆ.

“ವಿಚಾರಣೆಯನ್ನು ವರ್ಗಾವಣೆ ಮಾಡಬೇಕಾದರೆ ಎಲ್ಲಾ ಆರೋಪಿಗಳನ್ನು ಪ್ರತಿಕ್ರಿಯೆ ಬೇಕು” ಎಂದು ಪೀಠ ಹೇಳಿದೆ. ಓರ್ವ ಆರೋಪಿ ಮೊಹಮ್ಮದ್ ರಫೀಕ್ ಪಹ್ಲೂ ಮೃತಪಟ್ಟಿದ್ದಾನೆ ಎಂದು ಪೀಠಕ್ಕೆ ತಿಳಿಸಲಾಯಿತು.

ಮಲಿಕ್ ಮತ್ತು ಪಹ್ಲೂ ಅಲ್ಲದೆ, 10 ಮಂದಿ ಸಿಬಿಐ ಮನವಿಯಲ್ಲಿ ಸೇರಿದ್ದು, ಆ ಪೈಕಿ ಆರು ಆರೋಪಿಗಳು ಸಿಬಿಐ ಮನವಿಗೆ ತಮ್ಮ ಉತ್ತರವನ್ನು ಸಲ್ಲಿಸಿಲ್ಲ.ನವೆಂಬರ್ 28 ರಂದು, ವಿಚಾರಣೆಯನ್ನು ವರ್ಗಾಯಿಸುವ ಸಿಬಿಐ ಮನವಿಯ ಬಗ್ಗೆ ಯಾಸಿನ್ ಮಲಿಕ್ ಮತ್ತು ಇತರರಿಂದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿತ್ತು.

ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿದ್ದು ಆತನನ್ನು ತಿಹಾರ್ ಜೈಲಿನ ಆವರಣದಿಂದ ಹೊರಗೆ ಕರೆದೊಯ್ಯಲು ಅನುಮತಿಸಲಾಗುವುದಿಲ್ಲ ಎಂದು ಸಿಬಿಐ ಹೇಳಿದೆ.