ಶಿವಮೊಗ್ಗ: ತಾಂತ್ರಿಕ ದೋಷದ ಕಾರಣದಿಂದ ಬಸ್ ಸುಟ್ಟು ಕರುಕಲಾದ ಘಟನೆ ಸಕ್ರೈಬೈಲು ಬಳಿ ಶುಕ್ರವಾರ (ಡಿ.20) ಬೆಳಗ್ಗಿನ ಜಾವ ನಡೆದಿದೆ.
ಮಂಗಳೂರಿನಿಂದ ದಾವಣಗೆರೆ ಕಡೆಗೆ ತೆರಳುತಿದ್ದ ಖಾಸಗಿ ಬಸ್ ನಲ್ಲಿ ಅಗ್ನಿ ಆಕಸ್ಮಿಕ ನಡೆದಿದೆ. ಬಸ್ ನಲ್ಲಿ18 ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು. ಅದೃಷ್ಟಾವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.














