ಮನೆ ಯೋಗಾಸನ ಸಮವೃತ್ತಿ ಪ್ರಾಣಾಯಾಮ

ಸಮವೃತ್ತಿ ಪ್ರಾಣಾಯಾಮ

0

೧. ‘ಸಮ’ವೆಂದರೆ, ನೇರ, ಪೂರ, ಪರಿಪೂರ್ಣ, ಒಟ್ಟು ಎಲ್ಲ ‘ಅದರಂತೆ’ ಮತ್ತು ‘ಆದೇ ಬಗೆಯಲ್ಲಿಯೇ’ ಎಂಬ ಅರ್ಥವೂ ಈ ಪದಕ್ಕೆ ಸಲ್ಲುತ್ತದೆ.

Join Our Whatsapp Group

೨. ‘ವೃತ್ತಿ’ ಎಂದರೆ ಕ್ರಿಯೆ, ವ್ಯಾಪಾರ, ಚಲನೆ, ಕಾರ್ಯಾಚರಣೆ, ಒಂದು ಮಾರ್ಗ ಅಥವಾ ವಿಧಾನ

೩. ಈ ‘ಸಮವೃತ್ತಿ ಪ್ರಾಣಾಯಾಮ’ದಲ್ಲಿ ‘ರೇಚಕ’ (ಉಸಿರು ಬಿಡುವುದು), ‘ಪೂರಕ (ವಾಯುವನ್ನು ಒಳಕ್ಕೆಳೆದು ಶ್ವಾಸಕೋಶಗಳನ್ನು ಅದರಿಂದ ತುಂಬುವುದು), ಮತ್ತು ‘ಕುಂಭಕ (ಒಳಕ್ಕೆಳೆದ ಶ್ವಾಸವನ್ನು ಅಲ್ಲಿಯೇ ಸ್ವಲ್ಪ ಹೊತ್ತು ನಿಲ್ಲಿಸಿ ಅಂತರ ಕುಂಭಕ ಮಾಡುವುದು) ಇಲ್ಲವೆ ಅದನ್ನು ಹೊರಕ್ಕೆ ಬಿಟ್ಟು ಅಲ್ಲಿಯೇ ಸ್ವಲ್ಪ ಕಾಲ ನಿಲ್ಲಿಸುವುದು (ಅಂದರೆ ಬಾಹ್ಯ ಕುಂಭಕ) ಇವು ಇದೆ. ಇವುಗಳಲ್ಲಿ ಒಂದು ಸಮತೆಯನ್ನು ಏರ್ಪಡಿಸುವುದು, ಅಂದರೆ ರೇಚಕ ಪೂರಕಗಳಲ್ಲಿ ಸಾಮರಸ್ಯ ಮತ್ತು ಇವೆರಡರ ಕಾಲಾವಧಿ ಸಮನಾಗಿರಬೇಕು. ಅಲ್ಲದೆ ಕುಂಭಕಗಳಲ್ಲಿಯೂ (ಅಂತರಕುಂಭಕ, ಬಾಹ್ಯ ಕುಂಭಕಗಳಲ್ಲಿಯೂ) ಕಾಲವು ಅಷ್ಟೇ ಇರಬೇಕು. ಅಂದರೆ ಅಭ್ಯಾಸಿಯುರೇಚಕಕ್ಕೆ 5 ಸೆಕೆಂಡುಗಳ ಕಾಲಾವಧಿ ತೆಗೆದುಕೊಂಡರೆ ಪೂರಕಕ್ಕೂ 5 ಸೆಕೆಂಡುಗಳ ಕಾಲ, ಅಂತರ ಬಾಹ್ಯ ಕುಂಭಕಗಳಲ್ಲಿಯೂ ಸೆಕೆಂಡುಗಳ ಕಾಲ ಇರುವಂತೆ ಕ್ರಮಗೊಳಿಸಬೇಕು.

೪. ಒಟ್ಟಿನಲ್ಲಿ ಎಲ್ಲಾ ವಿಧವಾದ ಪ್ರಾಣಾಯಾಮಗಳಲ್ಲಿಯೂ ಅಂದರೆ ಉಚ್ಚಾಯಿ. ‘ಸೂರ್ಯಭೇದನೆ’, ‘ನಾಡಿಶೋಧನೆ, ‘ಶೀತಳೀ’, ‘ಸೀತಕರಿಗೆ ಇದೇ ಮೊದಲಾದವುಗಳಲ್ಲಿ ರೇಚಕ ಪೂರಕ-ಕುಂಭಕಗಳಲ್ಲಿಯ ಕಾಲ ಸಮವಾಗಿ 5 ಸೆಕೆಂಡುಗಳ ಕಾಲವೇ ನಿಯಮಿಸುವುದು ಕ್ರಮಬದ್ಧ ಮತ್ತು ಸಹಲಕಾರಿಗಳು ಎಂದು ತಿಳಿಯಬೇಕು.

ಎಚ್ಚರಿಕೆಯ ಕ್ರಮ

೫. ಮೊದಮೊದಲು, ‘ಸಮವೃತ್ತಿ ಪ್ರಾಣಾಯಾಮ’ವನ್ನು ರೇಚಕ ಪೂರಕಗಳಿಗೆ ಮಾತ್ರ ಸೀಮಿತಗೊಳಿಸಬೇಕು.

೬. ಮೊದಲು, ರೇಚಕ – ಪೂರಕಗಳ ಕಾಲಾವರಿಯನ್ನು ಸಮಗೊಳಿಸುವುದನ್ನು ಸಾಧಿಸಿದ ಮೇಲೆಯೇ ‘ಅಂತರ ಕುಂಭಕ’ದ ಅಭ್ಯಾಸಕ್ಕೆ ಕೈ ಹಚ್ಚಬೇಕು.

೭. ಆ ಬಳಿಕ, ‘ಅಂತರಕುಂಭಕ’ದ ಅಭ್ಯಾಸವನ್ನು ಮೆಲ್ಲ ಮೆಲ್ಲಗೆ ನಡೆಸಬೇಕು. ಅಂದರೆ ಪ್ರಾರಂಭದಲ್ಲಿ ಪೂರಕ, ಅಂತರಕುಂಭಕ, ಮತ್ತು ರೇಚಕದಲ್ಲಿನ ಕಾಲಾವಧಿಯು 4:1:4 ಈ ಪ್ರಮಾಣದಲ್ಲಿರಬೇಕು. ಈ ಕಾಲಾವಧಿಯನ್ನು ಮೆಲ್ಲ ಮೆಲ್ಲಗೆ ಹೆಚ್ಚಿಸುತ್ತ 20112 ಕ್ಕೆ ಹೆಚ್ಚಿಸಬೇಕು. ಇದಾದ ಬಳಿಕ ಈ ಅಭ್ಯಾಸದಲ್ಲಿ ನೆಲೆ ನಿಂತ ಮೇಲೆ ಈ ಪ್ರಮಾಣವನ್ನು 4:34 ಕ್ಕೇರಿಸಬೇಕು. ಇದರಲ್ಲಿ ಸ್ವಾಮ್ಯ ಗಳಿಸಿದ ಬಳಿಕವೇ ಈ ಪ್ರಮಾಣವನ್ನು 1 ಬರುವಂತೇರಿಸಿ,

೮. ಪೂರಕ, ಅಂತರಕುಂಭಕ ಮತ್ತು ರೇಚಕಗಳಲ್ಲಿರಬೇಕಾದ ಕಾಲಾವಕಾಶmಪ್ರಮಾಣದಲ್ಲಿ ಸ್ಥಾಯಿಯಾಗುವವರೆಗೂ 7ಬಾಹ್ಯ ಕುಂಭಕಾಭ್ಯಾಸಕ್ಕೆ 7ಯತ್ನಿಸಬಾರದು.

೯. ಈ ಪ್ರಾಣಾಯಾಮಗಳ ಅಭ್ಯಾಸದಲ್ಲಿ ಶ್ವಾಸಕೋಶಗಳಲ್ಲಿಯ ವಾಯುವನ್ನು ಪೂರ್ಣವಾಗಿ ಹೊರಬಿಟ್ಟಾಗ ಹೊರಗಡೆ ವಾಯುವಿನ ಒತ್ತಡವು ಬಹಳ ಹೆಚ್ಚಾಗಿದ್ದು ದೇಹದ ಒಳಗೆ ಯಾವ ಒತ್ತಡವೂ ಇಲ್ಲದಿರುವಾಗ ಶ್ವಾಸಕೋಶಗಳ ಮೇಲೆ ಇದರಿಂದ ತುಂಬಾ ಒತ್ತಡ ಉಂಟಾಗುತ್ತದೆ. ಈ ಕಾರಣದಿಂದ ಆರಂಭದಲ್ಲಿ ಅಂದರೆ ಈ ಅಭ್ಯಾಸದಲ್ಲಿ ಪರಿಣತಿ ಉಂಟಾಗು ವವರೆಗೂ ಬಾಹ್ಯಕುಂಭಕ ಮತ್ತು ಅಂತರಕುಂಭಕ – ಇವೆರಡಕ್ಕೂ ಒಟ್ಟಿಗೆ ತೊಡಗಬಾರದು.

೧೦. ಈ ಪ್ರಾಣಾಯಾಮ ಚಕ್ರದ ಅಭ್ಯಾಸದಲ್ಲಿ ಬಾಹ್ಯ ಮತ್ತು ಅಂತರ ಕುಂಭಕಗಳನ್ನು ಬೇರೆ ಬೇರೆಯಾಗಿ, ಇಲ್ಲವೇ ಒಂದು ಆವೃತ್ತಿ ಬಿಟ್ಟು ಇನ್ನೊಂದಾವರ್ತಿಯೂ ಆಚರಿಸಬೇಕು. ಈ ಎರಡು ಕುಂಭಕಗಳನ್ನು ಒಂದು ಸಲ ಆಚರಿಸಿದ ಮೇಲೆ ಬರೀ ಪೂರಕ – ರೇಚಕಗಳುಳ್ಳ ಆಳವಾದ, ನೀಳವಾದ, ನಿಧಾನವಾದ ಮತ್ತು ಸಾಮರಸ್ಯದಿಂದ ಕೂಡಿದ ಉಸಿರಾಟವನ್ನು ಎರಡು – ಮೂರು ಸಾರಿ ಆವರ್ತಿಸಿದುದೇ ಆದರೆ, ಅದರಿಂದ ಉತ್ತಮ ಫಲ ದೊರಕುವುದು. ಉದಾಹರಣೆಗೆ ಆಳವಾದ ಉಸಿರಾಟವನ್ನು ಎರಡು-ಮೂರು ಸಲ ನಡೆಸಿ, ಒಂದು ಸಲ ಅಂತರಕುಂಭಕ ವನ್ನಾಚರಿಸಬೇಕು. ಆ ಬಳಿಕ, ಮತ್ತೆ ಎರಡು-ಮೂರು ಸುತ್ತು ಆಳವಾದ ಉಸಿರಾಟ ನಡೆಸಿ, ಆಮೇಲೆ ಬಾಹ್ಯ ಕುಂಭಕವನ್ನಾಚರಿಸಬೇಕು. ಈ ಬಗೆಯಲ್ಲಿ ಮೂರು ‘ಅಂತರಕುಂಭಕ’, ಮೂರುಯೋಗದೀಪಿಕಾ

‘ಬಾಹ್ಯಕುಂಭಕ’ಗಳಿಂದ ಆರಂಭಿಸಿ, ಕ್ರಮೇಣ ಮೆಲ್ಲ ಮೆಲ್ಲಗೆ ಇವುಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಬರಬೇಕು.