* ಧನಿಷ್ಠಾ ನಕ್ಷತ್ರ ( ಉತ್ತರಾರ್ಧ) :
ಈ ನಕ್ಷತ್ರದಲ್ಲಿ ಉತ್ತರಾರ್ಧದ ಕ್ಷೇತ್ರವ್ಯಾಪ್ತಿ ಶೂನ್ಯ(0) ಅಂಶದಿಂದ 6 ಅಂಶ 40 ಕಲಾ ಕುಂಭ ರಾಶಿಯವರೆಗೆ ನಾಮಾಕ್ಷರ – ಗೂ, ಗೇ. ಇನ್ನುಳಿದ ಅಂಶಗಳು ಪೂರ್ವಾರ್ಧದಂತೆಯೇ. ನಕ್ಷತ್ರದ ಉತ್ತರಾರ್ಧ ಪ್ರತಿನಿಧಿಸುವ ಜಾತಕನ ಶರೀರದ ಭಾಗ -ಮಂಡಿಯ ಭಾಗ, ಮಂಡಿಯ ಪೃಷ್ಠ ಮತ್ತು ಮಧ್ಯ ಭಾಗ.
* ಧನಿಷ್ಠಾ ಜಾತಕನ ಸ್ವರೂಪ :
ಜಗಳಗಂಟ, ಕೋಪಿಷ್ಟ( ಸಿಡುಕು), ಕ್ರೋಧಿ, ತೀವ್ರ ಉತ್ತೇಝನಕ್ಕೊಳಗಾಗುವವ ಶೀಘ್ರವಾಗಿ ಪ್ರತ್ಯುತ್ತರ ನೀಡುವವ, ವೈಜ್ಞಾನಿಕ ಮಸ್ತಿಷ್ಕ, ಕಾರ್ಯತತ್ಪರ, ಸಂಶೋಧನಕರ್ತಾ, ರ್ಮದ ಕುರಿತು ಶ್ರದ್ದೆ ಇರುವವ, ಪ್ರೇಮ ಅಥವಾ ಸ್ನೇಹದ ವಿಷಯದಲ್ಲಿ ವಿಶ್ವಾಸಪಾತ್ರ, ಸಮಾಜ ಅಥವಾ ಸಂಘಟನೆಯ ಪ್ರೇಮಿ ಕ್ಲಬ್, ಸಮಾಜ ಅಥವಾ ಅನ್ಯ ಸಂಘಟನೆಗಳ ಸಂಸ್ಥಾಪಕ, ಚಂಚಲ ಬುದ್ದಿ ಧೂರ್ತ ಪ್ರವೃತ್ತಿಯ ಮನುಷ್ಯ, ತನ್ನ ಕಾರ್ಯಗಳ ಪ್ರಶಂಸೆ ಮಾಡುವವ, ದಾನಿ, ಶ್ರೀಮಂತನಾಗುವ ಪ್ರಯತ್ನದಲ್ಲಿರುವವ, ತಾಂತ್ರಿಕ ಕಾರ್ಯದಲ್ಲಿ ನಿಪುಣ, ಪರಿಶ್ರಮಿ, ನ್ಯಾಯವಂತ, ಸ್ಪಷ್ಟಹಾಗೂ ಧೀರ್ಘ ಧ್ವನಿ
* ಧನಿಷ್ಠಾ ಜಾತಕನ ಉದ್ಯೋಗ :
ಕೃಷಿ, ಚಹ, ಇದ್ದಿಲು, ಲೋಹ, ಲೋಹ ಉದ್ಯಮ, ವಿಸ್ಫೋಟಕ, ಅನ್ವೇಷಕ, ಗಣಿ ಇಂಜಿನಿಯರ್, ಸಂಚಾರ ಕೇಂದ್ರ, ಮುದ್ರಣ, ಫೌಂಡ್ರಿ, ಧಾತು ಆಗಿಯುವುದು, ಯಂತ್ರ, ತೈಲ, ಮಹಾಪೂರ ಕಾರ್ಯ, ಪುನರ್ವಸತಿ, ಅಲ್ಪಕಾಲೀನ ಸೇವೆ, ಭೂಕಂಪ, ಶವದಹನ ಕ್ಷೇತ್ರ, ಭಗ್ನಾವಶೇಷ, ವಾಸ್ತುಕಲೆ, ಗುತ್ತಿಗೆದಾರಿಕೆ, ದೂರದರ್ಶನ, ದೂರವಾಣಿ, ಆಯಾತ-ನಿರ್ಯಾತ, ಲ್ಯಾಬ್ ಅಸಿಸ್ಟೆಂಟ್, ವಿಷ-ನಶೆಯ ಪದಾರ್ಥಗಳು, ರೇಷ್ಮೆ, ಕೀಲಿ- ಪತ್ರ ಪಾತ್ರೆಗಳ ಮಾರಾಟಗಾರ, ಗುಮಾಸ್ತ್ರ ಬೆರಳಚ್ಚುಗಾರ, ಕಂಪ್ಯೂಟರ್ ಗಣಕ, ಟೈಮ್ ಕೀಪರ್, ನಿರೀಕ್ಷಕ, ಇನ್ಸಪೆಕ್ಟರ್.
* ಧನಿಷ್ಠಾ ಜಾತಕನ ರೋಗ:
ಕಾಲಿನ ಮೂಳೆಮುರಿತ, ವೆರಿಕೋಸ್ ನರ. ರಕ್ತವಿಕಾರ, ವಿಷಾಕ್ಷರಕ್ಕ ಇದ್ದಕ್ಕಿದ್ದಂತೆ ಹೃದಯಗತಿ ನಿಲ್ಲುವುದು, ರಕ್ತಏರೊತ್ತಡ, ಅಧಿಕ ಉಷ್ಣ ಅತಿ ಹೃದಯಬಡಿತ, ಅಪಸ್ಮಾರ (ಮೂರ್ಛರೋಗ)
ವಿಶೇಷ:
ಶನಿಯ ರಾಶಿ ಮತ್ತು ಮಂಗಳನ ನಕ್ಷತ್ರದಲ್ಲಿ ಜನಿಸಿದ ಧನಿಷ್ಠಾ ಜಾತಕರು ಈ ನಕ್ಷತ್ರದ ಪೂರ್ವಾರ್ಧದ ವಿಷಯದಲ್ಲಿ ವಿವರಿಸಿದಂಥ ಚಾರಿತ್ರಿಕ ಗುಣಗಳನ್ನೇ ಹೊಂದಿದವ ರಾಗಿರುತ್ತಾರೆ. ಆದರೆ, ಈ ಭಾಗದಲ್ಲಿ ( ಉತ್ತರಾರ್ಧ) ಜನಿಸಿದ ಅಧಿಕಾಂಶ ಜಾತಕರು ದಷ್ಟ ಪುಷ್ಪ ಹಾಗೂ ಸುದೃಢ ಶರೀರದವರು, ಶ್ವಾಸರೋಗಿ, ಅಧಿಕ ಕನ್ಯಾ ಅಥವಾ ಸಂತಾನದವರು, ಜೀವನ ನಿರ್ವಹಣೆಯ ಕ್ಷೇತ್ರದಲ್ಲಿ ಭಾಗ್ಯಶಾಲಿ, ಸತತ ಪರಿಶ್ರಮಿ ಮತ್ತು ಚಟುವಟಿಕೆಯ ಪ್ರವೃತ್ತಿಯವರಾಗುತ್ತಾರೆ. ಶನಿಯ ಮೂಲ ತ್ರಿಕೋನ ರಾಶಿಯಾಗುವುದರಿಂದ, ಜಾತಕನಿಗೆ ಶನಿಯ ಮಹಾದೆಶೆ ಅಥವಾ ಅಂತರ್ದೆಶೆಗಳಲ್ಲಿ ಅಥವಾ ಗೋಚರವಶ ಒಂದು ವೇಳೆ ಶನಿಯು ತನ್ನ ರಾಶಿಯ ಮೇಲೆ ಬಂದರೆ ಮತ್ತು ಮಂಗಳ ಒಂದು ವೇಳೆ ಗುರುವಿನೊಡನೆ ಯುತಿ ಹೊಂದಿದ್ದರೆ, ಜಾತಕರು ವಿಶಿಷ ಕಾರ್ಯಗಳ ಮೂಲಕ ಪ್ರಶಂಸಿತರಾಗುತ್ತಾರೆ. ವ್ಯಾಪಾರಿ ವ್ಯಕ್ತಿಗಳಿಗೆ ಈ ಸಮಯ ಅಪ್ರತ್ಯಾಶಿತ ಲಾಭ ಹಾಗೂ ಬುದ್ಧಿಜೀವಿಗಳಿಗೆ ಲೇಖನ ಅಥವಾ ಬೌದ್ಧಿಕಕಾರ್ಯಗಳಲ್ಲಿ ಅಪೂರ್ವ ಯಶಸ್ಸನ್ನು ನೀಡುವಂಥದಾಗುತ್ತದೆ. ಧನಿಷ್ಠಾ ಜಾತಕರು ಒಂದು ವೇಳೆ ದುರ್ವ್ಯಸನಗಳನ್ನು ತ್ಯಾಗ ಮಾಡಿದರೆ, ಪ್ರಾಪಂಚಿಕ ಜೀವನದಲ್ಲಿ ಮಹತ್ವಪೂರ್ಣ ಪ್ರತಿಷ್ಠೆಯನ್ನು ಪ್ರಾಪ್ತಿಹೊಂದುತ್ತಾರೆ.
ಸೂರ್ಯನು ಈ ನಕ್ಷತ್ರ ಭಾಗದ ಮೇಲೆ ಫಾಲ್ಗುಣ ಮಾಸದ ಮೊದಲ ಏಳು ದಿನಗಳವರೆಗೆ ಇರುತ್ತಾನೆ. ಚಂದ್ರನು ಈ ನಕ್ಷತ್ರ ಭಾಗದ ಮೇಲೆ ಪ್ರತಿ ಇಪತ್ತೇಳನೆಯ ದಿನ 12 ಗಂಟೆಗಳವರೆಗೆ ಭ್ರಮಣ ಮಾಡುತ್ತಾನೆ. ಶನಿ ಒಂದು ವೇಳೆ ಶುಭ ರಾಶಿಯಲ್ಲಿದ್ದರೆ, ಜಾತಕನಿಗೆ ಶನಿ ದೆಶೆಯು ಭಾಗ್ಯವರ್ಧಕವೆಂದು ಸಿದ್ಧವಾಗುತ್ತದೆ.
ಧನಿಷ್ಠಾ ನಕ್ಷತ್ರದ ಕಾರ್ಯ ಮತ್ತು ಅನ್ಯ ಅಂಶಗಳು :
ಈ ನಕ್ಷತ್ರದಲ್ಲಿಜ್ವರ ಬಂದರೆ 15 ದಿನ ಕ್ರೂರ, ವಸುದೇವತೆಯ ಶಾಂತಿ ಮಾಡಿದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕಳೆದುಹೋದ ಆಭರಣ ಪುನಃ ಪ್ರಾಪ್ತಿಯಾಗುತ್ತದೆ. ಕನ್ಯೆ ಋತುಮತಿಯಾದರೆ ಸಂತಾನವತಿಯಾಗುತ್ತಾಳೆ. ಇದರಲ್ಲಿ ವಿವಾಹದ ಹೊರತು ಉಳಿದೆಲ್ಲ ಕಾರ್ಯಗಳನ್ನು ಮಾಡಬಹುದು.
ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವನು ಮುಖಂಡ; 2ನೇ ಚರಣದಲ್ಲಿ ಜನಿಸಿದವನು ವಿದ್ಯಾ-ವಿನಯ ; 3ನೇ ಚರಣದಲ್ಲಿ ಸುಗುಣಿ, ಆಯುಷ್ಯವಂತ, 4ನೇ ಚರಣದಲ್ಲಿ ಜನಿಸಿದವನು ಕ್ರೂರಿ, ಪಾಪಿಯಾಗುವನು. ಇದಕ್ಕೆ ಮೊದಲು ಮಂಗಳನ ದೆಶೆ 7 ವರ್ಷ. 28ನೇ ದಿನ, 8,18,25,40,50, 60 – ಈ ವರ್ಷಗಳು ಗಂಡ ಕಾಲಗಳು.
ಈ ನಕ್ಷತ್ರಲ್ಲಿ ಮೊದಲು 5 ನಕ್ಷತ್ರಗಳಲ್ಲಿ, ಅಂದರೆ ರೇವತಿಯವರೆಗೆ, ಧನಿಷ್ಠಾ ಪಂಚಕದಲ್ಲಿ ಮನೆಯಿಂದ ಶವಯಾತ್ರೆ ನಡೆಯುವುದು. ಅಂಥ ಮನೆಯನ್ನು 6 ತಿಂಗಳು ತ್ಯಜಿಸಬೇಕು. ಧನಿಷ್ಠಾ ನಕ್ಷತ್ರದ ಜಾತಕನಿಗೆ 80 ವರ್ಷಗಳ ಆಯಸ್ಸಿನ ಅಧಿಕಾರವಿರುತ್ತದೆ.