ಮನೆ ಅಪರಾಧ ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ವ್ಯಕ್ತಿಯ ಕೊಲೆಗೆ ಯತ್ನ

ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ವ್ಯಕ್ತಿಯ ಕೊಲೆಗೆ ಯತ್ನ

0

ಬೆಳಗಾವಿ: ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಕುಡುಗೋಲಿನಿಂದ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್‌ ಹಲ್ಲೆಗೊಳಗಾದ ವ್ಯಕ್ತಿ. ಮುತ್ತು ಗಣಾಚಾರಿ ಹಲ್ಲೆ ಮಾಡಿದ ಆರೋಪಿ.

ಎಂಟು ತಿಂಗಳ ಹಿಂದಷ್ಟೇ ಗಣಾಚಾರಿ ಮದುವೆಯಾಗಿದೆ. ಆದರೆ, ಮುತ್ತು ಗಣಾಚಾರಿ ಪತ್ನಿಯನ್ನು ಮಕ್ತುಮ್ ತಟಗಾರ್‌ ಈ ಹಿಂದೆ ಪ್ರೀತಿಸ್ತಿದ್ದನಂತೆ. ಮದುವೆ ಬಳಿಕವೂ ಗಣಾಚಾರಿ ಪತ್ನಿಯ ಜೊತೆ ಮಕ್ತುಮ್ ಸಂಪರ್ಕದಲ್ಲಿ ಇದ್ದನಂತೆ. ಈ ವಿಷಯ ಮುತ್ತು ಗಣಾಚಾರಿಗೆ ಗೊತ್ತಾಗಿದೆ. ಈ ವಿಚಾರವಾಗಿ ಮುತ್ತು ಗಣಾಚಾರಿ ಮತ್ತು ಆತನ ಪತ್ನಿಯ ನಡುವೆ ಗಲಾಟೆಯಾಗಿದೆ. ಪತಿ ಮುತ್ತು ಗಣಾಚಾರಿಯನ್ನು ಬಿಟ್ಟಯ ಪತ್ನಿ ತವರು ಮನೆ ಸೇರಿದ್ದಾಳೆ.

ಇದನ್ನೇ ಮುಂದಿಟ್ಟುಕೊಂಡು ಮುಕ್ತುಮ್, ಮುತ್ತು ಗಣಾಚಾರಿಗೆ ರೇಗಿಸುತ್ತಿದ್ದನಂತೆ. ಇದರಿಂದ ಮುತ್ತು ಗಣಾಚಾರಿ ಆಕ್ರೋಶಗೊಂಡು, ಸಂತೆಗೆ ಬಂದಿದ್ದ ಮುಕ್ತುಮ್ ತಟಗಾರ್ ಮೇಲೆ ಕುಡುಗೋಲು ಬೀಸಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ಬರೋಬ್ಬರಿ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಮಕ್ತುಮ್​​ ತಟಗಾರ್ ​ನನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕೃತ್ಯ ಎಸಗಿ ಬೈಕ್ ​​ನಲ್ಲಿ ಪರಾರಿ​​ಯಾಗಲು ಯತ್ನಿಸುತ್ತಿದ್ದ ಆರೋಪಿ ಮುತ್ತು ಗಣಾಚಾರಿಯನ್ನು ಸೋಮವಾರ ಪೇಟೆಯಲ್ಲಿ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.