ಗಂಗಾವತಿ: ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಗಂಗಾವತಿ ನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಡಿ.27ರ ಶುಕ್ರವಾರ ನಡೆದಿದೆ.
ಕುಷ್ಟಗಿ ನಿವಾಸಿ ಹನುಮಂತ ಅಲಿಯಾಸ್ ಶೇಷ ಬಂಧಿತ ಆರೋಪಿ.
ಗಂಗಾವತಿ ನಗರದ ಮನೆಯೊಂದರಲ್ಲಿ ಕಳೆದ 25 ವರ್ಷಗಳ ಹಿಂದೆ ಕಳ್ಳತನ ಮಾಡಿದ ಆರೋಪದಲ್ಲಿ ಈತನನ್ನು ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳಿ ಮಾರ್ಗದರ್ಶನದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ತೆ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುಭಾಶ್ಚಂದ್ರಗೌಡ ಪಾಟೀಲ್, ಗುಂಡಪ್ಪ, ಯಮನೂರಪ್ಪ ಕುಂಬಾರ, ಯಲ್ಲರೆಡ್ಡಿ, ಭೀಮಣ್ಣ ಮೇಟಿ ಪಾಲ್ಗೊಂಡಿದ್ದರು.














