ಮನೆ ಅಪರಾಧ 7 ಜನರ ಗುಂಪಿನಿಂದ ವ್ಯಕ್ತಿಯ ಕೊಲೆ

7 ಜನರ ಗುಂಪಿನಿಂದ ವ್ಯಕ್ತಿಯ ಕೊಲೆ

0

ಕವಿತಾಳ( ರಾಯಚೂರು ಜಿಲ್ಲೆ): ಮಸ್ಕಿ ತಾಲ್ಲೂಕಿನ ಸೊಸೈಟಿ ಕ್ಯಾಂಪ್ ನಲ್ಲಿ ಏಳು ಜನರ ಗುಂಪು ಹಲ್ಲೆ ನಡೆಸಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

Join Our Whatsapp Group

ಕ್ಯಾಂಪ್ ನಿವಾಸಿ ರಾಜಪ್ಪ (41) ಕೊಲೆಯಾದ ವ್ಯಕ್ತಿ, ಅದೇ ಕ್ಯಾಂಪ್ ನ ಏಳು ಜನರು ಜಮೀನಿನಲ್ಲಿ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ, ತೀವ್ರ ಗಾಯಗೊಂಡಿದ್ದ ರಾಜಪ್ಪ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ರಾಜಪ್ಪ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. 

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಕವಿತಾಳ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.