ಮನೆ ಅಪರಾಧ ಬಳ್ಳಾರಿ: ಬೊಲೆರೋ ಸರಕು ಸಾಗಣೆ ವಾಹನ ಪಲ್ಟಿ, ಇಬ್ಬರು ಸಾವು

ಬಳ್ಳಾರಿ: ಬೊಲೆರೋ ಸರಕು ಸಾಗಣೆ ವಾಹನ ಪಲ್ಟಿ, ಇಬ್ಬರು ಸಾವು

0

ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಸರಕು ಸಾಗಣೆ ವಾಹನ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಕ್ರಾಸ್ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ.

Join Our Whatsapp Group

ಚಾಲಕ ಬಾದನಹಟ್ಟಿಯ ರಂಗಪ್ಪ (35) ಮತ್ತು ಕಲ್ಕಂಬದ ಪರಮೇಶ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ.

ಕುರುಗೋಡಿನ ಉಮೇಶಗೌಡ ಮತ್ತು ಎರ್ರೆಪ್ಪಗೌಡ ಗಾಯಗೊಂಡಿದ್ದಾರೆ.

ಕೋಳೂರು ಕ್ರಾಸ್​​ನಿಂದ ಕುರುಗೋಡು ಕಡೆಗೆ ಈ ವಾಹನ ಹೋಗುತ್ತಿದ್ದ ವೇಳೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.