ಮನೆ ರಾಜ್ಯ ಸಿದ್ದರಾಮಯ್ಯ ಮೇಲೆ ಬಸಪ್ಪ; ಒಳಗೆ ವಿಷಪ್ಪ: ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಮೇಲೆ ಬಸಪ್ಪ; ಒಳಗೆ ವಿಷಪ್ಪ: ಛಲವಾದಿ ನಾರಾಯಣಸ್ವಾಮಿ

0

ಮೈಸೂರು(Mysuru): ಸಿದ್ದರಾಮಯ್ಯ ಮೇಲೆ ಬಸಪ್ಪ; ಒಳಗೆ ವಿಷಪ್ಪ  ಸಿದ್ದರಾಮಯ್ಯ ಅವರಷ್ಟು ದಲಿತ ವಿರೋಧಿ ಬೇರಾರೂ ಇಲ್ಲ. ಎಂದು ವಿಧಾನಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರೂ ಆಗಿರುವ ಛಲವಾದಿ ನಾರಾಯಣಸ್ವಾಮಿ  ಟೀಕಿಸಿದರು.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಳೆದ ಬಾರಿ ಕಾಂಗ್ರೆಸ್‌ ಪಕ್ಷದಿಂದ ದಲಿತರನ್ನು ಮುಖ್ಯಮಂತ್ರಿ ಮಾಡಬೇಕಾಗಿತ್ತು. ಆದರೆ, ಆಕಾಂಕ್ಷಿಗಳನ್ನೆಲ್ಲ ರಾಜಕೀಯವಾಗಿ ಮುಗಿಸಿದರು. ತಾನು ಮುಖ್ಯಮಂತ್ರಿ ಆಗುವುದಕ್ಕೆ ಅಡ್ಡಿಯಾದವರನ್ನೆಲ್ಲರನ್ನೂ ರಾಜಕೀಯವಾಗಿ ಮುಗಿಸುತ್ತಿರುವ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ಆರೋಪಿಸಿದರು.

ಕುತಂತ್ರ ರಾಜಕಾರಣದಿಂದ ಒಬ್ಬರೇ ಬೆಳೆಯಲು ಯತ್ನಿಸುತ್ತಿದ್ದಾರೆ. ಇತರರನ್ನು ಗೆಲ್ಲಿಸುವವರು ನಿಜವಾದ ನಾಯಕ. ಆದರೆ, ಸಿದ್ದರಾಮಯ್ಯ ಎಲ್ಲರನ್ನೂ ತುಳಿಯುತ್ತಿದ್ದಾರೆ. ಅವರು ನಿಜವಾದ ನಾಯಕರಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರ ಸ್ಥಿತಿ ಏನಾಯಿತು? ಬಾದಾಮಿಯಲ್ಲಿ ಈಗ ಏನಾಗಿದೆ? ಕ್ಷೇತ್ರ ಹುಡುಕಾಟದಲ್ಲಿ ತೊಡಗಿರುವ ಅವರೊಬ್ಬ ನಾಯಕರಾ’ ಎಂದು ಕಟುವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಎಂದಿಗೂ ದಲಿತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಆ ಅವಕಾಶವಿದ್ದರೆ ಬಿಜೆಪಿಯಲ್ಲಿ ಮಾತ್ರ ಎಂದರು.‌

ಆರ್‌ಎಸ್‌ಎಸ್‌ನ ಸಮವಸ್ತ್ರವಾಗಿದ್ದ ಚಡ್ಡಿಯನ್ನು ಸುಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೋದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನರು ಅವರ ಚಡ್ಡಿ ಬಿಚ್ಚಿಸಿ (ಸೋಲಿಸಿ) ಕಳುಹಿಸಿದ್ದಾರೆ. ಚಡ್ಡಿಯು ವ್ಯಕ್ತಿಯ ಮಾನ ಕಾಪಾಡುತ್ತಿದೆ. ಅದು ಗೌರವದ ಸಂಕೇತ. ಅಂತಹ ಚಡ್ಡಿಯನ್ನು ಕಾಂಗ್ರೆಸ್‌ನವರು ಸುಟ್ಟಿದ್ದಾರೆ. ಸಿದ್ಧಪಡಿಸುವವರು ನೇಕಾರರು. ಕಚ್ಚಾ ಸಾಮಗ್ರಿ ಒದಗಿಸುವವರು ರೈತರು. ಇವರಿಗೆಲ್ಲಾ ಕಾಂಗ್ರೆಸ್‌ನವರು, ಚಡ್ಡಿ ಸುಡುವ ಮೂಲಕ ಅವಮಾನ ಮಾಡಿದ್ದಾರೆ  ಎಂದು ಆಕ್ರೋಶ ವ್ಯಕ್ತಪ‍ಡಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರದ ಅಖಾಡ ಹೋದ ಚುನಾವಣೆಯಲ್ಲಿ ಬೇರೆ ರೀತಿ ಇತ್ತು. ಈ ಬಾರಿ ನಮ್ಮ ಪರವಾಗಿದೆ. ಬಿಜೆಪಿ ದಲಿತರು, ಮೀಸಲಾತಿ ಹಾಗೂ ಅಂಬೇಡ್ಕರ್ ವಿರೋಧಿ ಎಂಬ ಸುಳ್ಳನ್ನು ಕಾಂಗ್ರೆಸ್‌ನವರು ಹಬ್ಬಿಸಿದ್ದರು. ಸಂವಿಧಾನ ಬದಲಾಯಿಸ್ತಾರೆಂದು ಆತಂಕ ಮೂಡಿಸಿದ್ದರು. ಅದೆಲ್ಲವೂ ಸುಳ್ಳು ಎನ್ನುವುದು ದಲಿತರಿಗೆ ಗೊತ್ತಾಗಿದೆ. ಹೀಗಾಗಿ, ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷವು ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಾಮಿ, ಕಾರ್ಯದರ್ಶಿ ಎಂ.ಎಸ್. ಪರಮಾನಂದ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ವಕ್ತಾರ ಎಂ.ಎ. ಮೋಹನ್, ಮಾಧ್ಯಮ ಸಹ ವಕ್ತಾರರಾದ ಕೇಬಲ್ ಮಹೇಶ್, ಮಹೇಶ್‌ರಾಜೆ ಅರಸ್, ಪ್ರದೀಪ್ ಕುಮಾರ್, ಒಬಿಸಿ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ರಾಜ್ಯ ಪೊಲೀಸರ ಮಹಾಸಂಘದ ಅಧ್ಯಕ್ಷ ಶಶಿಧರ್ ಇದ್ದರು.