ಮನೆ ರಾಜ್ಯ ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

0

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದ ಸಫಾರಿ ವೇಳೆ ಏಕಾಕಾಲದಲ್ಲಿ ನಾಲ್ಕು ಮರಿ ಜೊತೆ ತಾಯಿ ಹುಲಿ ಕಾಣಿಸಿಕೊಳ್ಳುವ ಮೂಲಕ ವರ್ಷಾಂತ್ಯದಲ್ಲಿ ಸಫಾರಿಗೆ ಪ್ರಿಯರಿಗೆ ಖುಷಿ ನೀಡಿದೆ.

Join Our Whatsapp Group

ಬಂಡೀಪುರ ಸಫಾರಿ ಜೋನ್ ವ್ಯಾಪ್ತಿಯ ಮೂರುಕೆರೆ ಬಳಿಯಲ್ಲಿ ನಾಲ್ಕು ಚಿಕ್ಕ ಮರಿಗಳೊಂದಿಗೆ ತಾಯಿ ಹುಲಿ ಹೆಜ್ಜೆ ಹಾಕಿದೆ. ಈ ದೃಶ್ಯವನ್ನು ಮಂಗಳವಾರ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರು ತಮ್ಮ ಕ್ಯಾಮಾರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದ್ದು, 2024ನೇ ವರ್ಷದ ಕೊನೆ ದಿನದಂದು ಒಂದೇ ಸ್ಥಳದಲ್ಲಿ ಐದು ಹುಲಿಗಳು ಕಾಣಿಸಿಕೊಳ್ಳುವ ಮೂಲಕ ಸಫಾರಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ.

ಸಫಾರಿ ವೇಳೆ ಹುಲಿಯು ತಾಯಿಯಾಗಿದ್ದ ಸಂದರ್ಭ ಕಾಣಿಸಿಕೊಂಡಿದ್ದು, ಇದೀಗ ನಾಲ್ಕು ಮರಿಗಳಿಗೆ ಜನ್ಮ ನೀಡಿದ ವರ್ಷದ ಕೊನೆ ದರ್ಶನ ನೀಡಿದೆ ಎಂದು ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದರು.

ಸಫಾರಿಗೆ ಪ್ರವಾಸಿಗರ ದಂಡು: ಬಂಡೀಪುರ ಸಫಾರಿಗೆ ವರ್ಷಾಂತ್ಯದ ಕೊನೆದಿನ ಮಂಗಳವಾರ ಪ್ರವಾಸಿಗರೆ ದಂಡೇ ಆಗಮಿಸಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಅಧಿಕ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಜನರು ಬರುತ್ತಿದ್ದು, ಆನ್ ಲೈನ್ ಮೂಲಕ ಸಾಕಷ್ಟು ಟಿಕೆಟ್ ಖರೀದಿಯಾಗಿವೆ. ಪರಿಸರ ಅಚ್ಚ ಹಸಿರಾಗಿದ್ದು, ಕಾಡುಪ್ರಾಣಿಗಳು ಕೂಡ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ ಎಂದು ಆರ್ ಎಫ್ ಓ ಮಲ್ಲೇಶ್ ತಿಳಿಸಿದರು.