ಮನೆ ಮನರಂಜನೆ ತೆರೆ ಮೇಲೆ ‘ಗನ್ಸ್‌ ಆ್ಯಂಡ್‌ ರೋಸಸ್‌’

ತೆರೆ ಮೇಲೆ ‘ಗನ್ಸ್‌ ಆ್ಯಂಡ್‌ ರೋಸಸ್‌’

0

“ಗನ್ಸ್‌ ಆ್ಯಂಡ್‌ ರೋಸಸ್‌’ ಎಂಬ ಸಿನಿಮಾ ಇಂದು ತೆರೆ ಕಂಡಿದೆ. ಕನ್ನಡ ಚಿತ್ರರಂಗದ ಹಿರಿಯ ಚಿತ್ರಕಥೆ ಬರಹಗಾರ ಅಜಯ್‌ ಕುಮಾರ್‌ ಪುತ್ರ ಅರ್ಜುನ್‌ “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಮಾಸ್‌ ಹೀರೋ ಆಗಿ ಆ್ಯಕ್ಷನ್‌ ಲುಕ್‌ನಲ್ಲಿ ಎಂಟ್ರಿಯಾಗುತ್ತಿದ್ದಾರೆ. ನಟಿ ಯಶ್ವಿ‌ಕಾ ನಿಷ್ಕಲಾ “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾದಲ್ಲಿ ನಾಯಕಿ.

Join Our Whatsapp Group

ದ್ರೋಣ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಹೆಚ್‌. ಆರ್‌. ನಟರಾಜ್‌ ಈ ಚಿತ್ರವನ್ನು ನಿರ್ಮಿಸಿದ್ದು, ಹೆಚ್‌. ಎಸ್‌. ಶ್ರೀನಿವಾಸ್‌ ಕುಮಾರ್‌ “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಕಿಶೋರ್‌, ಅವಿನಾಶ್‌, ಶೋಭರಾಜ್‌, ಸುಚೇಂದ್ರ ಪ್ರಸಾದ್‌, ನೀನಾಸಂ ಅಶ್ವಥ್‌, ಅರುಣಾ ಬಾಲರಾಜ್‌, ಜೀವನ್‌ ರಿಚ್ಚಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.