ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ʼಕೆಜಿಎಫ್ -2ʼ ಬಳಿಕ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಗ್ ಬಜೆಟ್ ʼಟಾಕ್ಸಿಕ್ʼ ಕುರಿತು ಪ್ಯಾನ್ ಇಂಡಿಯಾದಲ್ಲಿ ಬಹು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬವಿದೆ. ಈ ಬಾರಿ ಯಶ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಆದರೆ ಅಭಿಮಾನಿಗಳಿಗೆ ಯಶ್ ನಿರಾಸೆ ಮಾಡುತ್ತಿಲ್ಲ. ಫ್ಯಾನ್ಸ್ಗಳು ಅಂದುಕೊಂಡಂತೆ ಯಶ್ ʼಟಾಕ್ಸಿಕ್ʼ ಕುರಿತು ಬಿಗ್ ಅಪ್ಡೇಟ್ ವೊಂದು ಅವರ ಬರ್ತ್ ಡೇ ದಿನವೇ ಸಿಗಲಿದೆ. ಆ ಮೂಲಕ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಸಿಗಲಿದೆ.
ಜನವರಿ 8ರ ಬೆಳಿಗ್ಗೆ 10.25ಕ್ಕೆ ಸಿನಿಮಾದ ಕುರಿತ ತುಣುಕವೊಂದನ್ನು ರಿಲೀಸ್ ಮಾಡುವ ಯೋಜನೆಯನ್ನು ʼಟಾಕ್ಸಿಕ್ʼ ಚಿತ್ರತಂಡ ಹಾಕಿಕೊಂಡಿದೆ. ಇದನ್ನು ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಪೋಸ್ಟರ್ ವೊಂದರ ಮೂಲಕ ಹೇಳಿದೆ.
ಕಾರೊಂದರ ಮುಂದೆ ಯಶ್ ಸಿಗರೇಟ್ ಎಳೆಯುತ್ತ, ತಲೆಗೊಂದು ಟೋಪಿ ಹಾಕಿಕೊಂಡು ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ನೋಡಿ ಫ್ಯಾನ್ಸ್ಗಳು ಥ್ರಿಲ್ ಆಗಿದ್ದಾರೆ.
ಈಗಾಗಲೇ ಮುಂಬೈ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದ ಹಂತದಲ್ಲೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಮಾಲಿವುಡ್ನ ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ನ ಕಿಯಾರಾ ಅಡ್ವಾಣಿ, ಬಹುಭಾಷಾ ನಟಿ ನಯನತಾರಾ , ಅಕ್ಷಯ್ ಓಬೆರಾಯ್, ಹುಮಾ ಖುರೇಷಿ ಸೇರಿದಂತೆ ಹಾಲಿವುಡ್ನ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.














